ಸ್ಯಾಂಡಲ್ ವುಡ್ಡನ್ನು ಬೆಚ್ಚಿ ಬೀಳಿಸಿದ ಹರಿಕೃಷ್ಣ ಪತ್ನಿಯ ಹೇಳಿಕೆ…! ಬದುಕೇ ಬೇಡ ಅಂದ್ರು ಆಕೆ..?

Date:

ಅದೊಂದು ಹೇಳಿಕೆ..ಅದೊಂದೇ ಹೇಳಿಕೆ ಇಂದು ದಿಢೀರ್ ಅಂತ ಇಡೀ ಸ್ಯಾಂಡಲ್ ವುಡ್ ಅನ್ನೇ ಬೆಚ್ಚಿ ಬೀಳಿಸಿ ಬಿಟ್ಟಿದೆ. ಟಾಪ್ ಸಂಗೀತ ನಿರ್ದೇಶಕನ ಪತ್ನಿಯ ಆ ಸ್ಫೋಟಕ ಹೇಳಿಕೆ ಚಂದನವನದ ಮನಸ್ಸನ್ನೇ ಛಿದ್ರ ಛಿದ್ರ ಮಾಡಿ ಬಿಡುವಂತಿದೆ..ಆಕೆ ಬದುಕೇ ಬೇಡ ಅಂದಿರೋದೇ ಈಗ ಗಾಂಧಿನಗರದಲ್ಲಿ ಮಿರ್ಚಿಗಿಂತಾ ಖಾರವಾಗಿ ಉರಿ‌ ಹತ್ತಿಕೊಂಡಿದೆ…ಅಟ್ ದಿ ಸೇಮ್ ಟೈಮ್ ಒಂಥರಾ ಆತಂಕವನ್ನೂ ಸೃಷ್ಠಿಸಿಬಿಟ್ಟಿದೆ..!
ಯೆಸ್ ವಿ. ಹರಿಕೃಷ್ಣ…ಹೆಸರಾಂತ ಮ್ಯೂಸಿಕ್ ಡೈರೆಕ್ಟರ್..ಲೆಕ್ಕವಿಲ್ಲದಷ್ಟು ಸಿನಿಮಾಗಳಿಗೆ‌ ಇವರದ್ದೇ ಬಲ….ದೊಡ್ಡ ಶಕ್ತಿ..! ಇವತ್ತು ಅದೇ ಹರಿಕೃಷ್ಣ ಪತ್ನಿಯ ಪಾಲಿಗೆ, ಪತ್ನಿಯೊಳಗಿನ ಸಂಗೀತಕ್ಕೆ ವಿಲನ್ ಆಗಿ ಬಿಟ್ಟರೇ…? ಹರಿಕೃಷ್ಣ ದಾಂಪತ್ಯ ‘ಕುರುಕ್ಷೇತ್ರ’ ವಾಗಿಬಿಟ್ಟಿತೇ ಅನ್ನೋ ಪ್ರಶ್ನೆಯೊಂದು ಹರಿದಾಡುತ್ತಿದೆ…ಇಂಥಾಹದ್ದೊಂದು ಮಾಹಾ ಪ್ರಶ್ನೆ ಹುಟ್ಟಿಗೆ ಕಾರಣ ವಾಣಿ ಹರಿಕೃಷ್ಣ ಅರ್ಥಾತ್ ವಿ.ಹರಿಕೃಷ್ಣಾರ ಧರ್ಮಪತ್ನಿ ವಾಣಿ ಕೃಷ್ಣ ಮಾಡಿರುವ ಒಂದೇ ಒಂದು ಫೇಸ್ ಬುಕ್ ಪೋಸ್ಟ್..!


ಯೆಸ್ ಹರಿಕೃಷ್ಣ ಅವರ ಪತ್ನಿ ವಾಣಿಕೃಷ್ಣ ಸೋಶಿಯಲ್ ಮೀಡಿಯಾದಲ್ಲಿ ಅಕ್ಷರ ವಾಣಿ ಅನ್ನೋ ಹೆಸರಿಂದಲೇ ಗುರುತಿಸಿಕೊಂಡಿರುವವರು..ಅವರು‌ ಇದ್ದಕ್ಕಿದ್ದಂತೆ ನಿನ್ನೆ ಒಂದು ಫೇಸ್ ಬುಕ್ ಪೋಸ್ಟ್ ಮಾಡಿ ಬಿಟ್ಟಿದ್ದಾರೆ… ಆ ಪೋಸ್ಟ್ ಇಂದು ಎಗ್ಗಿಲ್ಲದೆ ವೈರಲ್ ಆಗುತ್ತಿದೆ..ಅದೊಂದು ಪೋಸ್ಟ್‌ ನೂರಾರು ಪ್ರಶ್ನೆಗಳನ್ನು ಹುಟ್ಟು ಹಾಕಿದೆ..!
“ಬದುಕೇ ಬೇಡ ಅನ್ನಿಸಿಬಿಡುತ್ತದೆ , ಒಂದು
ಹಾಡೇ ಜೀವನವಲ್ಲ ಅಂತಾರೆ, ಆದರೆ ನನಗೆ ಎಷ್ಟೋ ಹಾಡುಗಳು ನನ್ನದಾಗುಳಿಯಲಿಲ್ಲ , ಈಗ ” ಕುರುಕ್ಷೇತ್ರ” ಹಾಗೂ ” ರಾಂಧವ” ಚಿತ್ರ ಗಳಲ್ಲಿ ನನ್ನನ್ನು ಹಾಡಿಸಿ , ಧ್ವನಿ ಉಳಿಸಿಲ್ಲ , ನಮ್ಮನ್ನು ಹಾಡಿಸಲೇಬಾರದು ನಂತರ ಬೇರೆಯವರನ್ನು ಹಾಡಿಸುವುದಾದರೆ……” ಎಂದು ವಾಣಿ ಹರಿಕೃಷ್ಣ ಅಲಿಯಾಸ್ ಅಕ್ಷರ ವಾಣಿ ಬರೆದುಕೊಂಡಿದ್ದಾರೆ.
ಕುರುಕ್ಷೇತ್ರಕ್ಕೆ ಹರಿಕೃಷ್ಣರೇ ಮ್ಯೂಸಿಕ್ ಡೈರೆಕ್ಟರ್… ರಾಂಧವಕ್ಕೆ ಹರಿಯ ಶಿಷ್ಯ ಶಶಾಂಕ್ ಶೇಷಗಿರಿ ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಎರಡೂ ಸಿನಿಮಾಗಳಿಗೆ ಹರಿಕೃಷ್ಣರ ಪತ್ನಿ ವಾಣಿ ಅವರಿಂದ ಹಾಡಿಸಲಾಗಿತ್ತು. ಬಳಿಕ ಅವರ ಧ್ವನಿಯನ್ನೇ‌ ಬಳಸಿಕೊಂಡಿಲ್ಲ..ಸ್ವತಃ ವಾಣಿಯವರೇ ಅಳಲನ್ನು ಹೊರ ಹಾಕಿದ್ದಾರೆ. ಅವರ ಒಂದು ಪೋಸ್ಟ್ ಅನೇಕ ಚರ್ಚೆಗೆ ಎಡಮಾಡಿಕೊಟ್ಟಿದೆ. ಹರಿಕೃಷ್ಣ ದಾಂಪತ್ಯದಲ್ಲಿ ಬಿರುಕು ಮೂಡಿತಾ ಅನ್ನೋ ಪ್ರಶ್ನೆ ಸಹ ಮೂಡಿದೆ…ವಾಣಿ ಸೋಶಿಯಲ್ ಮೀಡಿಯಾದಲ್ಲಿಯೇ ಅಸಮಧಾನ ಹೊರಹಾಕಿದ್ದು ಈ ಪ್ರಶ್ನೆಯನ್ನು ಗಟ್ಟಿಯಾಗಿಸಿದೆ…ಇದಕ್ಕೆ ಉತ್ತರೇ ವಾಣಿ ಹಾಗೂ ಹರಿಕೃಷ್ಣರೇ ನೀಡಬೇಕಿದೆ…

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...