No menu items!
5.4 C
Munich
Thursday, April 30, 2026

ಬದುಕೇ ಬೇಡ ಅನ್ನೋ ಪತ್ನಿಯ ಪೋಸ್ಟ್ ಗೆ ಹರಿಕೃಷ್ಣ ಹೀಗಂದು ಬಿಟ್ರಾ..?!

Must read

ಸಂಗೀತ ಮಾಂತ್ರಿಕ ವಿ. ಹರಿಕೃಷ್ಣ ಅವರ ಪತ್ನಿ ಮಾಡಿದ ಅದೊಂದು ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ..ಹತ್ತಾರು ಪ್ರಶ್ನೆಗಳು, ಅನುಮಾನಗಳನ್ನು..ಆ ನಾಲ್ಕು ಸಾಲುಗಳು ಹುಟ್ಟಿ ಹಾಕಿವೆ…ಬದುಕೇ ಬೇಡ ಎನ್ನುವ ಪತ್ನಿಯ ಆ ಪೋಸ್ಟ್ ಬಗ್ಗೆ ವಿ. ಹರಿಕೃಷ್ಣ ತುಟಿ ಬಿಚ್ಚಿದ್ದಾರೆ….ಪತ್ನಿ ವಾಣಿ ಹರಿಕೃಷ್ಣ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ನೆಗಿಟೀವ್ ರೂಪ ಪಡೆದು ಸದ್ದು ಮಾಡುತ್ತಿದ್ದರೆ ಇತ್ತ ಹರಿಕೃಷ್ಣ ಕೂಲಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಹೌದು ಹರಿಕೃಷ್ಣ ಅವರ ಪತ್ನಿ ವಾಣಿ ಹರಿಕೃಷ್ಣ , “ಬದುಕೇ ಬೇಡ ಅನ್ನಿಸಿಬಿಡುತ್ತದೆ , ಒಂದು
ಹಾಡೇ ಜೀವನವಲ್ಲ ಅಂತಾರೆ, ಆದರೆ ನನಗೆ ಎಷ್ಟೋ ಹಾಡುಗಳು ನನ್ನದಾಗುಳಿಯಲಿಲ್ಲ , ಈಗ ” ಕುರುಕ್ಷೇತ್ರ” ಹಾಗೂ ” ರಾಂಧವ” ಚಿತ್ರ ಗಳಲ್ಲಿ ನನ್ನನ್ನು ಹಾಡಿಸಿ , ಧ್ಧನಿ ಉಳಿಸಿಲ್ಲ , ನಮ್ಮನ್ನು ಹಾಡಿಸಲೇಬಾರದು ನಂತರ ಬೇರೆಯವರನ್ನು ಹಾಡಿಸುವುದಾದರೆ……” ಅಂತ ಸೋಶಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ವೊಂದನ್ನು ಹರಿ ಬಿಟ್ಟಿದ್ದರು. ರಾಂಧವ ಸಿನಿಮಾಕ್ಕೆ ಹರಿಕೃಷ್ಣ ಅವರ ಶಿಷ್ಯ ಶಶಾಂಕ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಕುರುಕ್ಷೇತ್ರಕ್ಕೆ ಹರಿಕೃಷ್ಣ ಅವರದ್ದೇ ಸಂಗೀತ. ಈ ಎರಡೂ ಸಿನಿಮಾಗಳಿಗೆ ತನ್ನಿಂದ ಹಾಡಿಸಿ ನಂತರ ಬೇರೆಯವರಿಂದ ಪುನಃ ಹಾಡಿಸಿ ಅದನ್ನು ಬಳಸಿಕೊಂಡಿದ್ದಾರೆ ಎಂದು ವಾಣಿ ಆರೋಪಿಸಿ ಅಸಮಧಾನ ಹೊರಹಾಕಿರುವುದರಿಂದ ಹರಿಕೃಷ್ಣ ದಾಂಪತ್ಯದಲ್ಲಿ ಬಿರುಕು ಬಿಟ್ಟಿದೆ ಎಂಬ ವದಂತಿಗಳು ಹರಿದಾಡುತ್ತಿವೆ. ಈ ಬಗ್ಗೆ ಹರಿಕೃಷ್ಣ ಸ್ಪಷ್ಟನೆ ನೀಡಿದ್ದಾರೆಂದು ವರದಿಯಾಗಿದೆ.
ನಾವು ಚೆನ್ನಾಗಿಯೇ ಇದ್ದೇವೆ‌.‌ ನಮ್ಮ ನಡುವೆ ಎಲ್ಲವೂ ಚೆನ್ನಾಗಿಯೇ ಇದೆ. ವದಂತಿಗಳನ್ನು ನಂಬುವುದು ಬೇಡ..!ಆಕೆ ಬೇಜಾರಲ್ಲಿ ಪೋಸ್ಟ್ ಮಾಡಿದ್ದಾಳೆ. ಅದು ಈ ರೀತಿ ಟರ್ನ್ ಆಗಿದೆಯಷ್ಟೇ ಎಂದು ಹರಿಕೃಷ್ಣ ಸ್ಪಷ್ಟನೆ ನೀಡಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article