No menu items!
12.4 C
Munich
Wednesday, April 29, 2026

ಹಾಲಿವುಡ್ ಸಿನಿಮಾ ಪೋಸ್ಟರ್ ಕದ್ರಾ ರಾಜಮೌಳಿ?

Must read

ಇಂದು ಬೆಳಗ್ಗೆ ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಸಿನಿಮಾದಿಂದ ಬಹುದೊಡ್ಡ ಅಪ್ಡೇಟ್ ಹೊರಬಿತ್ತು. ಹೌದು 13 ಅಕ್ಟೋಬರ್ 2021 ರಂದು ವಿಶ್ವದಾದ್ಯಂತ ಆರ್ ಆರ್ ಆರ್ ಸಿನಿಮಾ ಬಿಡುಗಡೆಯಾಗಲಿದೆ ಎಂಬ ಘೋಷಣೆಯನ್ನು ಚಿತ್ರತಂಡ ಹೊರಡಿಸಿತು. ರಾಮ್ ಚರಣ್ ಮತ್ತು ಎನ್ಟಿಆರ್ ಇರುವ ಪೋಸ್ಟರ್ ಒಂದನ್ನು ಹಂಚಿಕೊಳ್ಳುವ ಮೂಲಕ ಈ ಘೋಷಣೆಯನ್ನು ಚಿತ್ರತಂಡ ಮಾಡಿತು.

 

ಈ ಪೋಸ್ಟರ್ ನಲ್ಲಿ ರಾಮ್ ಚರಣ್ ಅವರು ಕುದುರೆ ಸವಾರಿ ಮಾಡುತ್ತಿದ್ದರೆ, ಜೂನಿಯರ್ ಎನ್ಟಿಆರ್ ಅವರು ಬುಲೆಟ್ ರೈಡ್ ಮಾಡುತ್ತಿದ್ದಾರೆ. ಈ ಪೋಸ್ಟರ್ ನೋಡಿದ ನೆಟ್ಟಿಗರು ರಾಜಮೌಳಿಯವರ ಕಾಲನ್ನ ಎಳೆದಿದ್ದಾರೆ. ಹೌದು ಘೋಸ್ಟ್ ರೈಡರ್ ಚಿತ್ರದ ಪೋಸ್ಟರ್ ಅನ್ನು ಕದ್ದು ಆರ್ ಆರ್ ಆರ್ ಸಿನಿಮಾ ಪೋಸ್ಟರ್ ಮಾಡಲಾಗಿದೆ ಎಂದು ಟ್ರೊಲ್  ಮಾಡಲಾಗುತ್ತಿದೆ.

 

 

 

ಇಂದು ಬಿಡುಗಡೆಯಾಗಿರುವ ಆರ್ ಆರ್ ಆರ್  ಸಿನಿಮಾದ ಪೋಸ್ಟರ್ ಹಾಲಿವುಡ್ ನ ಘೋಸ್ಟ್ ರೈಡರ್ ಸಿನಿಮಾದ ಪೋಸ್ಟರ್ ನಂತೆಯೇ ಇದೆ. ಹೀಗಾಗಿ ನೆಟ್ಟಿಗರು ರಾಜಮೌಳಿ ಅವರನ್ನು ಕಾಪಿ ಕ್ಯಾಟ್ ಎಂದು ಟ್ರೋಲ್ ಮಾಡುತ್ತಿದ್ದಾರೆ. ಈ ಸಿನಿಮಾ ಮಾತ್ರವಲ್ಲ ಈ ಹಿಂದೆ ಯಶ್ ಅವರು ಸಿಗರೇಟು ಸೇದುತ್ತಿದ್ದ ಕೆಜಿಎಫ್ 2 ಚಿತ್ರದ ದೃಶ್ಯವನ್ನು ಸಹ ನೆಟ್ಟಿಗರು ಕಾಪಿ ಎಂದು ಕಾಲೆಳೆದಿದ್ದರು.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article