No menu items!
10.9 C
Munich
Sunday, September 27, 2026

ಹಾಲೋ ಬ್ಲಾಕ್ ತುಂಬಿದ್ದ ಟೆಂಪೋ ಪಲ್ಟಿ: ಮೂವರು ಸಾವು, ಓರ್ವ ಗಂಭೀರ!

Must read

ಹಾಲೋ ಬ್ಲಾಕ್ ತುಂಬಿದ್ದ ಟೆಂಪೋ ಪಲ್ಟಿ: ಮೂವರು ಸಾವು, ಓರ್ವ ಗಂಭೀರ!

ಆನೇಕಲ್:- ಹಾಲೋ ಬ್ಲಾಕ್ ತುಂಬಿದ್ದ ಟೆಂಪೋ ಪಲ್ಟಿ ಹೊಡೆದ ಪರಿಣಾಮ ಮೂವರು ದಾರುಣವಾಗಿ ಸಾವನ್ನಪ್ಪಿದ ಘಟನೆ ಡೆಂಕಣಿಕೋಟೆ ಸಮೀಪದ ಅಂಚೆಟ್ಟಿ ರಸ್ತೆಯಲ್ಲಿ ಜರುಗಿದೆ.

ಘಟನೆಯಲ್ಲಿ ಓರ್ವನಿಗೆ ಗಂಭೀರ ಗಾಯವಾಗಿದೆ. ರಸ್ತೆಯಲ್ಲಿ ಹೋಗುತ್ತಿದ್ದ ಬೈಕ್ ಮೇಲೆ ಟೆಂಪೋ ಪಲ್ಟಿಯಾದ ಹಿನ್ನೆಲೆ, ಬೈಕ್ ನಲ್ಲಿ ತೆರಳುತ್ತಿದ್ದ ಮಾದೇಶ್ ಹಾಗೂ ಜಯಲಕ್ಷ್ಮಿ ದಂಪತಿ ಸಾವನ್ನಪ್ಪಿದ್ದಾರೆ. ಇನ್ನೂ ಟೆಂಪೋನಲ್ಲಿದ್ದ ಕೂಲಿ ಕಾರ್ಮಿಕ ಗೋವಿಂದ್ ಕೂಡ ಸಾವನ್ನಪ್ಪಿದ್ದಾರೆ.

ಇನ್ನೂ ಡೆಂಕಣಿಕೋಟೆ ಸರ್ಕಾರಿ ಆಸ್ಪತ್ರೆಗೆ ಮೃತದೇಹಗಳನ್ನು ರವಾನೆಸ ಮಾಡಲಾಗಿದ್ದು, ಅಂಚೆಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -spot_img

More articles

- Advertisement -spot_img

Latest article