ಬೀದಿಯಲ್ಲಿ ತರಕಾರಿ ಮಾರಿ ಆಸ್ಪತ್ರೆ ಕಟ್ಟಿದ ಮಹಿಳೆ!

0
95

ಪಶ್ಚಿಮ ಬಂಗಾಳದ ಬಡ ರೈತ ಕುಟುಂಬದಲ್ಲಿ ಹುಟ್ಟಿದ ಆಕೆಗೆ ಆಟವಾಡುವ ವಯಸ್ಸಲ್ಲಿ ಮದ್ವೆ ಮಾಡ್ತಾರೆ! ಮದ್ವೆ ಆಗೋ ವಯಸ್ಸಲ್ಲಿ ವಿಧವೆ ಆಗ್ತಾಳೆ! ಮಕ್ಕಳಿಬ್ಬರು ಬಿಟ್ಟರೆ ಇವಳಿಗೆ ಯಾರೂ ಇಲ್ಲ! ತನ್ನ ಲೈಫ್ ಅಂತೂ ಹಾಳಾಯ್ತು, ನನ್ನಂತ ಸ್ಥಿತಿ ಯಾರಿಗೂ ಬರ ಬಾರ್ದು ಅಂತ ಆಕೆ ಏನ್ ಏನ್ ಮಾಡ್ತಾಳೆ ಗೊತ್ತಾ? ಆ ಇಂಟ್ರೆಸ್ಟಿಗ್, ಇನ್ಸ್-ಪಿರೇಷನಲ್ ಸ್ಟೋರಿ ನಿಮಗೋಸ್ಕರ!
ಆ ಆದರ್ಶಮಯಿ ಹೆಸರು `ಸುಭಾಷಣಿ’! ಪಶ್ಚಿಮ ಬಂಗಾಳದ ಬಡ ರೈತನ ಮಗಳಾಗಿ ಹುಟ್ಟಿದ ಈಕೆ ಇಡೀ ಜೀವನವನ್ನೇ ಪರರಿಗಾಗಿ ಮುಡಿಪಾಗಿಟ್ಟಳು! 12ನೇ ವಯಸ್ಸಲ್ಲಿ ಇವರಿಗೆ ಮದ್ವೆ ಆಗುತ್ತೆ! ಇದು ಆಟಾಡೋ ವಯಸ್ಸಲ್ವೇನ್ರೀ? ಸರಿ, ಮದ್ವೆ ಆಯ್ತು, ನೆಮ್ಮದಿಯ ಬದುಕಾದ್ರು ಅವರಿಗೆ ಸಿಗಬೇಕಿತ್ತು! ಆದ್ರೆ ಅವರ ಹಣೆ ಬರಹನೇ ಚೆನ್ನಾಗಿರ್ಲಿಲ್ಲ ಅನಿಸುತ್ತೆ! 23ನೇ ವಯಸ್ಸನಲ್ಲಿರುವಾಗ ಗಂಡನಿಗೆ ಮಾರಣಾಂತಿಕ ಕಾಯಿಲೆಯೊಂದು ಬಂದು ಆತ ಹಾಸಿಗೆ ಹಿಡಿಯುತ್ತಾನೆ! ಸರ್ಕಾರಿ ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ದೊರೆಯದೇ ತೀರಿಕೊಳ್ತಾನೆ! ಗಂಡ, ತೀರಿಕೊಂಡ ಬಳಿಕ ಮಕ್ಕಳ ಜೊತೆಯಲ್ಲಿ ಮನೆ ಬಿಟ್ಟು ಬರುತ್ತಾಳೆ!
ಒಬ್ಬ ಮಗ ಓದಿನಲ್ಲಿ ಮುಂದಿದ್ದರೂ ಅವನಿಗೆ ಓದಿಸಲು ಇವಳ ಬಳಿ ಹಣವಿರುವುದಿಲ್ಲ! ಅದಕ್ಕಾಗಿ ಆತನನ್ನು ಅನಾಥಶ್ರಮದಲ್ಲಿ ಬಿಡುತ್ತಾಳೆ! ಇನ್ನೊಬ್ಬ ಮಗನನ್ನು ಹಂಗೋ ಹಿಂಗೋ ಮಾಡಿ ಪದವೀಧರನನ್ನಾಗಿ ಮಾಡ್ತಾಳೆ!
ಗಂಡ ತೀರಿಕೊಂಡ ಮೇಲೆ ಎಲ್ಲರನ್ನೂ ತೊರೆದು ಬಂದ ಈಕೆ ಕೂಲಿ ಕಾರ್ಮಿಕಳಾಗಿ ದುಡಿಯುತ್ತಾಳೆ, ಪಾತ್ರೆ ತೊಳೆಯುತ್ತಾಳೆ, ಬೂಟ್ ಪಾಲೀಶ್ ಕೂಡ ಮಾಡ್ತಾಳೆ! ಹೀಗೆ 20 ವರ್ಷಗಳ ಕಾಲ ದುಡಿತಾಳೆ! ಈ ಕೆಲಸವನ್ನೆಲ್ಲಾ ಮಾಡ್ತಾ ಮಾಡ್ತಾ ಅಷ್ಟಿಷ್ಟೇ ಬಿಡಿಗಾಸನ್ನು ಒಟ್ಟಾಕಿದ ಮೇಲೆ ಬೀದಿಯಲ್ಲಿ ತರಕಾರಿ ಮಾರಲಿಕ್ಕೆ ಶುರುಮಾಡ್ತಾಳೆ! ಆ ಕಾಲದಲ್ಲಿ ಅವಳಿಗೆ ಐದು ಪೈಸೆ ದುಡಿಮೆ ಆಗ್ತಾ ಇತ್ತಂತೆ! ಅದರಲ್ಲಿ ಎರಡು ಪೈಸೆ ಮನೆ ಬಾಡಿಗೆಗೆ , ಮತ್ತೆರಡು ಪೈಸೆ ಊಟ ತಿಂಡಿಗೆ ಬಳಸಿಕೊಂಡು, ಇನ್ನುಳಿದ ಒಂದು ಪೈಸೆಯನ್ನ ಹಾಗೇ ಕೂಡಿಡ್ತಾ ಇದ್ರು! ಹೀಗೆ ತರಕಾರಿ ಮಾರ್ತಾ ಮಾರ್ತಾ ಮತ್ತೆ ಇಪ್ಪತ್ತು ವರ್ಷ ದಬ್ಬು ವಷ್ಟರಲ್ಲಿ ಅನಾಥಶ್ರಮದಲ್ಲಿದ್ದ ಮಗ ಅಜೋಯ್ ಡಾಕ್ಟರ್ ಆಗ್ತಾನೆ! ಅಲ್ಲಿತನಕ ಪೈಸೆ ಪೈಸೆ ಕೂಡಿಟ್ಟ ಹಣದಲ್ಲಿ 1993ರಲ್ಲಿ ತಾತ್ಕಲಿಕವಾದ ಗುಡಿಸಲನ್ನ ನಿರ್ಮಾಣ ಮಾಡ್ತಾಳೆ! ಅದು ಕೇವಲ ಗುಡಿಸಲಲ್ಲ, ಬಡವರ ಆಸ್ಪತ್ರೆ!
ಡಾಕ್ಟರ್ ಆಗಿದ್ದ ಮಗ ಅಜೋಯ್ ಗೆ ಇನ್ನೊಬ್ಬ ಸ್ವಯಂಸೇವಕ ಡಾಕ್ಟರ್ ಸಾತ್ ಕೊಟ್ಟರು! ಅದರಿಂದಾಗಿ ಶೆಡ್ ನಲ್ಲಿ ಬಡ ರೋಗಿಗಳಿಗೆ ಚಿಕಿತ್ಸೆ ನೀಡಲಾರಂಭಿಸುತ್ತಾರೆ! ಮೊದಲ ದಿನವೇ ಬರೋಬ್ಬರಿ 252 ಜನ ರೋಗಿಗಳಿಗೆ ಟ್ರೀಟ್ಮೆಂಟ್ ಕೊಡ್ತಾರೆ!
1995ರ ಹೊತ್ತಿಗೆ ” ನಾವು ಇನ್ನೂ ಅನುಕೂಲಕರವಾದ ಹಾಸ್ಪೆಟಲ್ ನಿರ್ಮಾಣ ಮಾಡಬೇಕು” ಎಂಬ ಆಸೆಯನ್ನು ಮಗ ಅಜೋಯ್ ಹತ್ರ ಸುಭಾಷಿಣಿ ಹೇಳ್ತಾರೆ! ಅದಕ್ಕೋಸ್ಕರ ಮತ್ತೆ ಬೀದಿಯಲ್ಲಿ ತರಕಾರಿಯನ್ನೂ ಸುಭಾಷಿಣಿ ಮಾರ್ತಾರೆ! ಇವರಿಗೆ ಇನ್ನೊಬ್ಬ ಮಗ ಸುಜೋಯ್ ಕೈ ಜೋಡಿಸ್ತಾನೆ! ಹೆಚ್ಚು ಹೆಚ್ಚು ಉಳಿತಾಯ ಮಾಡ್ತಾರೆ! ದಾನಿಗಳ ನೆರವೂ ಸಿಗುತ್ತೆ! 1995ರ ಫೆಬ್ರವರಿ 5ರಂದು ಹ್ಯುಮ್ಯಾನಿಟಿ ಹಾಸ್ಪಿಟಲ್ ಕಟ್ಟಡ ನಿರ್ಮಾಣವಾಗುತ್ತೆ! ಅದಾದದ ಒಂದು ವರ್ಷದಲ್ಲಿಯೇ, 1996ರ ಮಾರ್ಚ್ 03ರಂದು ಎರಡು ಅಂತಸ್ತಿನ ಹಾಸ್ಪೆಟಲ್ ಇದಾಗಿ ಬಡವರ ಪಾಲಿನ ಸಂಜೀವಿನಿ ಆಗಿದೆ! ಕೋಲ್ಕತ್ತಾದಲ್ಲಿ ಇರುವ ಈ ಹಾಸ್ಪೆಟಲ್ನಲ್ಲಿ ಒಳ್ಳೆಯ ಸೌಲಭ್ಯವಿದೆ! ಬಡವರಿಗೆ ಕೇವಲ 5000ರೂಗಳಿಗೂ ಕಡಿಮೆ ವೆಚ್ಚದಲ್ಲಿ ಮೇಜರ್ ಸರ್ಜರಿ ಮಾಡ್ತಾ ಇದ್ದಾರೆ! 10ರೂಪಾಯಿಗೂ ಕಡಿಮೆ ಹಣದಲ್ಲಿ ಸಣ್ಣಪುಟ್ಟ ಟ್ರೀಟ್ಮೆಂಟ್ ಕೊಡ್ತಾ ಇದ್ದಾರೆ!
ಈಗ ಸುಭಾಷಣಿ ಅವರಿಗೆ 65 ವರ್ಷ, ತನ್ನ ಮಕ್ಕಳೇ ಜೀವನ! ಸರಿಯಾದ ಚಿಕಿತ್ಸೆ ಸಿಗದೇ ತನ್ನ ಗಂಡ ತೀರಿಕೊಂಡಾಗಲೇ ನಾನು ಪಟ್ಟ ಕಷ್ಟ ಬೇರೆ ಅವರು ಪಡಬಾರ್ದು ಅಂತ ಹಾಸ್ಪೆಟಲ್ ಕಟ್ಟೋ ನಿರ್ಧಾರ ಮಾಡಿದ್ರು! ತನ್ನ ಕಷ್ಟದ ದುಡಿಮೆಯಲ್ಲಿ ತನ್ನ ಐಷಾರಾಮಿ ಲೈಫ್ ಗೆ ಕಿಂಚಿತ್ತೂ ಖರ್ಚು ಮಾಡದೆ ಬಡ ರೋಗಿಗಳಿಗಾಗಿ ಹಾಸ್ಪೆಟಲ್ ಕಟ್ಟಿದ ಇವರು ನಿಜಕ್ಕೂ ಬಡವರ ಪಾಲಿನ ದೇವತೆ! ಈ ಪರೋಪಕಾರಿ ತಾಯಿ ಎಲ್ಲರಿಗೂ ಮಾದರಿ!

 

  • ಶಶಿಧರ ಡಿ ಎಸ್ ದೋಣಿಹಕ್ಲು

If you Like this Story , Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : [email protected]

LEAVE A REPLY

Please enter your comment!
Please enter your name here