No menu items!
8 C
Munich
Saturday, May 2, 2026

ಅಕ್ಟೋಬರ್ 11ಕ್ಕೆ ಜಂಬೂ ಸವಾರಿ ಉದ್ಘಾಟನೆಗೆ ಸಚಿನ್..?

Must read

2016ರ ಮೈಸೂರು ದಸರಾ ಉತ್ಸವ ಸಂಬಂಧ ಇಂದು ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ವಿಧಾನಸೌಧ ದಲ್ಲಿ ಸಭೆ ನಡೆಯಿತು.
ಸಭೆ ನಂತರ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅಕ್ಟೋಬರ್ 1 ರಂದು ಬೆಳಗ್ಗೆ 11.40ಕ್ಕೆ ದಸರಾ ಉದ್ಘಾಟನೆ ಯಾಗಲಿದೆ. ಪ್ರತಿ ಭಾರಿಯಂತೆ ಈ ಬಾರಿ ಗಣ್ಯರಿಂದ ದಸರಾ ಉದ್ಘಾಟನೆ ನಡೆಯಲಿದೆ.
ಸಚಿನ್ ತೆಂಡೂಲ್ಕರ್, ಚನ್ನವೀರ ಕಣವಿ, ಎಸ್.ಎಲ್ ಭೈರಪ್ಪ, ನಿಸಾರ್ ಅಹಮದ್ ಹೆಸರು ಕೇಳಿ ಬಂದಿದ್ದು ಆಗಸ್ಟ್ 9 ರಂದು ನಡೆಯುವ ದಸರಾ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಈ ಭಾರಿ ಸರಳವೂ ಅಲ್ಲದ, ಅದ್ಧೂರಿಯೂ ಅಲ್ಲದ ಸಾಂಪ್ರದಾಯಿಕ ದಸರಾ ನಡೆಸಲಾಗುವುದು. ಅಕ್ಟೋಬರ್ 11 ರಂದು ವಿಜಯ ದಶಮಿ ನಡೆಯಲಿದ್ದು, ಅಂದೇ ಜಂಬೂಸವಾರಿ ನಡೆಯಲಿದೆ ಎಂದು ಸಿಎಂ ಸಿದ್ದರಾಮಯ್ಯ ವಿವರಿಸಿದ್ದಾರೆ.
ಕಳೆದ ಬಾರಿ ಭೀಕರ ಬರಗಾಲ ಇದ್ದ ಕಾರಣ ಸರಳವಾಗಿ ದಸರ ಆಚರಿಸಲಾಯಿತು. ಈ ಬಾರಿ ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಹಲವೆಡೆ ಉತ್ತಮ ಮಳೆಯಾಗಿದೆ. ಆದರೂ ಅದ್ದೂರಿಯಲ್ಲದ ಸರಳವೂ ಅಲ್ಲದ ದಸರಾ ಆಚರಿಸಲಾಗುವುದು ಎಂದು ಸಿಎಂ ಹೇಳಿದ್ದಾರೆ

POPULAR  STORIES :

ರಿಯಾಲಿಟಿ ಶೋನಲ್ಲಿ ಸ್ಟಂಟ್ ಮಾಡಲು ಹೋಗಿ ಎಡವಟ್ಟು – Just Miss Video

ಕುಡಿದು ಡ್ರೈವಿಂಗ್ ಮಾಡಿದ್ರೆ 10 ಸಾವಿರ ರೂ ದಂಡ..! ಹೆಲ್ಮೆಟ್ ಧರಿಸದಿದ್ರೆ ಸಾವಿರ ರೂ.ದಂಡ..!

ಸಾಮಾಜಿಕ ಜಾಲತಾಣಗಳಲ್ಲಿ ರಾಕೇಶ್ ಸಿದ್ದರಾಮಯ್ಯಗೆ ನಿಂದನೆ : ಇಬ್ಬರ ವಿರುದ್ದ ಎಫ್‍ಐಆರ್ ದಾಖಲು

ಇನ್ಮುಂದೆ ಈಮೇಲ್ ಐಡಿಗಳು ನಮ್ಮ ದೇಶೀಯ ಭಾಷೆಗಳಲ್ಲಿ..! ಕನ್ನಡದಲ್ಲೂ ಈ ಮೇಲ್ ಐಡಿ ಕ್ರಿಯೇಟ್ ಮಾಡಬಹುದಂತೆ..!!

ಹುಷಾರ್ ಇನ್ಮುಂದೆ ಸರಕಾರವನ್ನು ಟೀಕಿಸುವಂತಿಲ್ಲ..!

ನನ್ ಮಗಂದ್… ನೀರ್‍ದೋಸೆ ಬ್ಯಾನ್ ಆಗ್ಬೇಕ್ ಅಷ್ಟೇ….!! ಯಾಕೆ ಗೊತ್ತಾ..?

ಮೆಟ್ರೋ ಸುರಂಗ ಮಾರ್ಗದಲ್ಲಿ ಭೂ ಕುಸಿತ…!

ನೇತಾಡುತ್ತಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವ ದಂಪತಿ

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article