No menu items!
11.1 C
Munich
Wednesday, April 29, 2026

269 ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ

Must read

ಗಡಿ ಭದ್ರತಾ ಪಡೆ(ಬಿಎಸ್ ಎಫ್) ತನ್ನ ಅಧಿಕೃತ ವೆಬ್ ತಾಣದಲ್ಲಿ 2021ನೇ ಸಾಲಿನ ನೇಮಕಾತಿ ಕುರಿತಂತೆ ಪ್ರಕಟಣೆ ಹೊರಡಿಸಿದೆ. ಜನರಲ್ ಡ್ಯೂಟಿ ಕಾನ್ಸ್‌ಟೇಬಲ್ ಹುದ್ದೆಗಳಿಗೆ ಅರ್ಜಿ ಅಹ್ವಾನಿಸಲಾಗಿದ್ದು, ಅರ್ಹ ಆಸಕ್ತ ಅಭ್ಯರ್ಥಿಗಳು ಸೆಪ್ಟೆಂಬರ್ 22, 2021ರೊಳಗೆ ಅರ್ಜಿ ಸಲ್ಲಿಸಬಹುದು.

ಸಂಸ್ಥೆ ಹೆಸರು: Border Security Force
ಹುದ್ದೆ ಹೆಸರು: ಜನರಲ್ ಡ್ಯೂಟಿ ಕಾನ್ಸ್‌ಟೇಬಲ್
ಒಟ್ಟು ಹುದ್ದೆ: 269
ಉದ್ಯೋಗ ಸ್ಥಳ: ಭಾರತದೆಲ್ಲೆಡೆ.
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ಸೆಪ್ಟೆಂಬರ್ 22, 2021

ಕ್ರೀಡಾ ಕೋಟದ ಹುದ್ದೆಗಳ ವಿವರ ಮೀಸಲು
ಬಾಕ್ಸಿಂಗ್: ಪುರುಷ 10; ಮಹಿಳೆ 10
ಜ್ಯೂಡೋ: ಪುರುಷ 08; ಮಹಿಳೆ 08
ಈಜು: ಪುರುಷ 12; ಮಹಿಳೆ 04
ಕ್ರಾಸ್ ಕಂಟ್ರಿ ರೇಸ್: ಪುರುಷ 02; ಮಹಿಳೆ 02
ಕಬಡ್ಡಿ: ಪುರುಷ 10; ಮಹಿಳೆ —
ಜಲ ಕ್ರೀಡೆ: ಪುರುಷ 10; ಮಹಿಳೆ 06
ವುಶು: ಪುರುಷ 11; ಮಹಿಳೆ —
ಜಿಮ್ನಾಸಿಕ್ಟ್: ಪುರುಷ 08; ಮಹಿಳೆ —
ಹಾಕಿ: ಪುರುಷ 08; ಮಹಿಳೆ–
ವೇಯ್ಟ್ ಲಿಫ್ಟಿಂಗ್: ಪುರುಷ 08; ಮಹಿಳೆ 09
ವಾಲಿಬಾಲ್: ಪುರುಷ 10; ಮಹಿಳೆ —
ರೆಸ್ಲಿಂಗ್: ಪುರುಷ 12; ಮಹಿಳೆ 10
ಹ್ಯಾಂಡ್ ಬಾಲ್: ಪುರುಷ 08; ಮಹಿಳೆ —
ಬಾಡಿ ಬಿಲ್ಡಿಂಗ್: ಪುರುಷ 06; ಮಹಿಳೆ–
ಬಿಲ್ವಿದ್ಯೆ: ಪುರುಷ 08; ಮಹಿಳೆ 12
ಟೆಕ್ವಾಂಡೋ: ಪುರುಷ 10; ಮಹಿಳೆ —
ಅಥ್ಲೆಟಿಕ್ಸ್: ಪುರುಷ 20; ಮಹಿಳೆ 25
ಈಕ್ವೆಸ್ಟ್ರಿಯನ್: ಪುರುಷ 02; ಮಹಿಳೆ —
ಶೂಟಿಂಗ್: ಪುರುಷ 03; ಮಹಿಳೆ 03
ಬಾಸ್ಕೆಟ್ ಬಾಲ್ : ಪುರುಷ 06; ಮಹಿಳೆ —
ಫುಟ್ಬಾಲ್: ಪುರುಷ 08; ಮಹಿಳೆ —

ವಿದ್ಯಾರ್ಹತೆ: ಸರ್ಕಾರದಿಂದ ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ 10ನೇ ತರಗತಿ, 12ನೇ ತರಗತಿಯಲ್ಲಿ ಪಾಸ್.

ವಯೋಮಿತಿ:
ಕನಿಷ್ಠ ವಯಸ್ಸು: 18 ವರ್ಷ.
ಗರಿಷ್ಠ ವಯಸ್ಸು: 23 ವರ್ಷ.
ಅರ್ಹರಿಗೆ ನಿಯಮಾವಳಿಯಂತೆ ವಯೋಮಿತಿಯಲ್ಲಿ ವಿನಾಯಿತಿ ಸಿಗಲಿದೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗೆ 3 ವರ್ಷ, ಹಿಂದುಳಿದ ವರ್ಗ(ಕೆನೆ ಪದರ ರಹಿತ) 3 ವರ್ಷ, ದಿವ್ಯಾಂಗರಿಗೆ 10 ವರ್ಷ ಹಾಗೂ 1984ರ ಗಲಭೆ ಪೀಡಿತರು ಮತ್ತು ಮಾಜಿ ಯೋಧರಿಗೆ 5 ವರ್ಷ ವಯೋಮಿತಿಯಲ್ಲಿ ವಿನಾಯಿತಿ ಸಿಗಲಿದೆ.

ಸಂಬಳ ನಿರೀಕ್ಷೆ: 21,700 ಇಂದ 69,100/-

ದೈಹಿಕ ಗುಣಮಟ್ಟ ಮಿತಿ:
ಎತ್ತರ:
ಪುರುಷ: 180 ಸೆಂ.ಮೀ
ಮಹಿಳೆ: 157 ಸೆಂ.ಮೀ

 

ಎದೆ ಸುತ್ತಳತೆ:
ಪುರುಷ: 80 ಸೆಂ.ಮೀ (ಸಾಮಾನ್ಯ ಸ್ಥಿತಿಯಲ್ಲಿ)
ಕನಿಷ್ಠ ವಿಸ್ತರಣೆ: 5 ಸೆಂ.ಮೀ

ತೂಕ:
ವೈದ್ಯಕೀಯ ನಿಯಮಾನುಸಾರ ಎತ್ತರಕ್ಕೆ ತಕ್ಕ ತೂಕ ಇರಬೇಕಾಗುತ್ತದೆ.

ನೇಮಕಾತಿ ಪ್ರಕ್ರಿಯೆ: ದಾಖಲೆ ಪರಿಶೀಲನೆ, ದೈಹಿಕ ಸಾಮರ್ಥ್ಯ ಪರೀಕ್ಷೆ, ಲಿಖಿತ ಪರೀಕ್ಷೆ ಹಾಗೂ ವೈಯಕ್ತಿಕ ಸಂದರ್ಶನ.

ಅರ್ಜಿ ಶುಲ್ಕ: ಯಾವುದೇ ಶುಲ್ಕವಿಲ್ಲ.

ಪ್ರಮುಖ ದಿನಾಂಕ:
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆ ಆರಂಭ: 09-08-2021
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆ ಕೊನೆ ದಿನಾಂಕ; 22-09-2021

ಅರ್ಜಿ ಸಲ್ಲಿಸುವುದು ಹೇಗೆ?:
* ಬಿಎಸ್ಎಫ್ ಜನರಲ್ ಡ್ಯೂಟಿ ನೇಮಕಾತಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಅಧಿಕೃತ ವೆಬ್ ತಾಣ (https://rectt.bsf.gov.in/)ಕ್ಕೆ ಭೇಟಿ ನೀಡಿ ಸೂಕ್ತ ಅರ್ಜಿ ನಮೂನೆ ಆಯ್ಕೆ ಮಾಡಿಕೊಳ್ಳಿ
* ಆನ್‌ಲೈನ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ. ಕಚೇರಿಗೆ ಯಾವುದೇ ರೀತಿ ಪತ್ರ ಅಥವಾ ಅರ್ಜಿಯಲ್ಲಿ ಬದಲಾವಣೆಗೆ ಮನವಿಯನ್ನು ಪುರಸ್ಕರಿಸಲಾಗುವುದಿಲ್ಲ.
* ಅಭ್ಯರ್ಥಿಗಳು ತಮ್ಮ ಇಮೇಲ್ ಐಡಿ, ಮೊಬೈಲ್ ನಂಬರ್ ನೀಡಿ ನೋಂದಾಯಿಸಿಕೊಳ್ಳುವುದು ಮುಖ್ಯ. ಬಿಎಸ್ ಎಫ್ ನಿಂದ ಅಧಿಕೃತ ಸಂದೇಶಗಳು ಮೊಬೈಲ್ ಹಾಗೂ ಮೇಲ್ ಐಡಿಗೆ ಬರಲಿದೆ.
*
* ಕ್ರೀಡಾ ಕೋಟಾದಡಿಯಲ್ಲಿ ಅರ್ಜಿ ಸಲ್ಲಿಸಲು ಸೂಕ್ತವಾದ ದಾಖಲೆ ಒದಗಿಸಬೇಕಾಗುತ್ತದೆ.

 

 

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article