No menu items!
11.1 C
Munich
Wednesday, April 29, 2026

ಉಸಿರಾಟದ ತೊಂದರೆಯಿಂದ ವಿಮಾನದಲ್ಲಿ ಮಗು ಸಾವು!

Must read

ಉಸಿರಾಟದ ತೊಂದರೆಯಿಂದ ನಾಲ್ಕು ತಿಂಗಳ ಗಂಡು‌ ಮಗು ವಿಮಾನದಲ್ಲಿಯೇ ಸಾವನ್ನಪ್ಪಿದ ಘಟನೆ ನಡೆದಿದೆ.
ಬೆಂಗಳೂರಿನಿಂದ ಪಾಟ್ನಾಗೆ ಹೊರಟಿದ್ದ ಇಂಡಿಗೋ ವಿಮಾನ , ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ನಿಲುಗಡೆಯಾಗಿದ್ದಾಗ ಮೃತಪಟ್ಟಿದೆ.
ವಿಮಾನ ಹೈದರಾಬಾದ್ ನತ್ತ ಪ್ರಯಾಣ ಬೆಳೆಸುವಾಗ ಮಾರ್ಗ ಮಧ್ಯೇಯೇ ಮಗುವಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ.

ತಕ್ಷಣ ವಿಮಾನದ ಸಿಬ್ಬಂದಿ ಹೈದರಾಬಾದ್ ವಿಮಾನ ನಿಲ್ದಾಣದ ಸಿಬ್ಬಂದಿಗೆ ಕರೆಮಾಡಿ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದ್ದಾರೆ. ಆದರೆ , ಹೈದರಾಬಾದ್ ತಲುಪುವುದರೊಳಗೆ ಮಗು ಮೃತಪಟ್ಟಿದೆ.
ಮಗುವಿನ ತಂದೆ ಸಂದೀಪ್ ಕುಮಾರ್ ಬೆಂಗಳೂರಿನಲ್ಲಿ ಐಟಿ ಉದ್ಯೋಗಿ. ಕುಟುಂಬ ಸಮೇತ ಪಾಟ್ನಾಗೆ ತೆರಳುತ್ತಿದ್ದರು. ಇವರ ಮಗುವಿಗೆ ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಪರಿಣಾಮ ವಿಮಾನವನ್ನು ಹೈದರಾಬಾದ್ ನತ್ತ ತಿರುಗಿಸಲಾಗಿತ್ತು ಎಂದು ತಿಳಿದುಬಂದಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article