No menu items!
12.3 C
Munich
Thursday, April 30, 2026

ಇಪ್ಪತ್ತು ಸಾವಿರ ಉದ್ಯೋಗಿಗಳ ನೇಮಕ: ಪೇಟಿಎಂ ಸಿಇಒ

Must read

500 ಮತ್ತು 1000 ಮುಖಬೆಲೆಯ ಹಳೆಯ ನೋಟುಗಳನ್ನು ಬ್ಯಾನ್ ಮಾಡಿದ ನಂತರ ದೇಶದಲ್ಲಿ ನಗದು ರಹಿತ ವ್ಯಾಪಾರದ ಕಡೆ ಜನರು ಹೆಚ್ಚು ಮುಖ ಮಾಡುತ್ತಿರುವ ಹಿನ್ನಲೆಯಲ್ಲಿ ಪೇಟಿಎಂ ಸಂಸ್ಥೆ ತಮ್ಮ ಜಾಲವನ್ನು ವಿಸ್ತರಿಸುವ ದೃಷ್ಠಿಯಿಂದ ಇದೇ ಡಿಸೆಂಬರ್ 31ರ ಒಳಗೆ ಬರೋಬ್ಬರಿ 20 ಸಾವಿರ ಮಂದಿಯನ್ನು ನೇಮಕ ಮಾಡಿಕೊಳ್ಳಲಿದೆ.
ಈ ಕುರಿತು ಬೆಂಗಳೂರಿನಲ್ಲಿ ಹೇಳಿಕೆ ನೀಡಿರುವ ಪೇಟಿಎಂ ಸಂಸ್ಥಾಪಕ ಮತ್ತು ಸಿಇಒ ವಿಜಯ್ ಶೇಖರ್ ಪೇಟಿಎಂ ಹಾಗೂ ಪೇಟಿಎಂ ಪೇಮೆಂಟ್ ಬ್ಯಾಂಕ್‍ಗಳಿಗೆ ನೇಮಕ ಪ್ರಕ್ರಿಯೆ ಪ್ರಾರಂಭವಾಗಿದ್ದು, ಕನಿಷ್ಠ ಪದವಿ ಪೂರೈಸಿದವರಿಗೂ ಉದ್ಯೋಗವಕಾಶಗಳನ್ನು ನೀಡಲಾಗುವುದು ಎಂದು ತಿಳಿಸಿದ್ದಾರೆ. ಯುಪಿಇ, ಇ-ಸಹಿ ಮತ್ತು ಇಕೆವೈಸಿ, ಆಧಾರ್, ಡಿಜಿಟಲ್ ಲಾಕರ್ ಮುಂತಾದ ತಂತ್ರಜ್ಞಾನವನ್ನು ವ್ಯಾಪಕವಾಗಿ ಅಳವಡಿಸಿಕೊಳ್ಳಲು ಇಂಡಿಯಾ ಸ್ಟಾಕ್ ಜೊತೆಯಲ್ಲಿ ಪೇಟಿಎಂ ಸಹಯೋಗ ಮಾಡಿಕೊಳ್ಳಲಿದೆ ಎಂಬ ಮಾಹಿತಿಯನ್ನು ತಿಳಿಸಿದ್ದಾರೆ. ಇದರೊಂದಿಗೆ ಮೊಬೈಲ್ ಪೇಮೆಂಟ್ ಮತ್ತು ಇ-ಕಾಮರ್ಸ್ ಮತ್ತಷ್ಟು ವಿಸ್ತರಣೆಯಾಗಲಿದೆ. ಇನ್ನು ಪೇಟಿಎಂನ ಪೇಮೆಂಟ್ ಬ್ಯಾಂಕ್‍ನ ಯಶಸ್ಸಿಗೆ ಯುಪಿಐ ಅಪ್ಲಿಕೇಷನ್ ನೆರವಾಗಲಿದ್ದು, ಪೇಟಿಎಂ ಪೇಮೆಂಟ್ ಬ್ಯಾಂಕ್‍ನ ಗ್ರಾಹಕರು ಯಾವುದೇ ಯುಪಿಐ ಆಧಾರಿತ ಆಪ್ ಮೂಲಕ ತಮ್ಮ ಪೇಟಿಎಂ ವ್ಯಾಲೆಟ್‍ಗೆ ಹಣವನ್ನು ಜಮೆ ಮಾಡಬಹುದು. ಈ ಫೇಟಿಎಂ ಆಪ್ ಮೂಲಕ ಯಾವುದೇ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾಯಿಸಲು ಸಾಧ್ಯವಾಗಲಿದೆ ಎಂದು ಶರ್ಮಾ ತಿಳಿಸಿದ್ದಾರೆ. ಸದ್ಯಕ್ಕೀಗ ಭಾರತದಲ್ಲಿ 10 ಲಕ್ಷಕ್ಕೂ ಅಧಿಕ ಮಂದಿ ವರ್ತಕರು ಪೇಟಿಎಂ ಬಳಕೆ ಮಾಡುತ್ತಿದ್ದು, ಟ್ಯಾಕ್ಸಿ, ಆಟೋ-ರಿಕ್ಷಾ, ಪೆಟ್ರೋಲ್ ಬಂಕ್, ಕಿರಾಣಿ ಅಂಗಡಿ, ರೆಸ್ಟೋರೆಂಟ್, ಕಾಫಿ ಶಾಪ್, ಮಲ್ಟಿಪ್ಲೆಕ್ಸ್, ಪಾರ್ಕಿಂಕ್, ಔಷಧಿ ಮಳಿಗೆಗಳಲ್ಲಿ ಇದೀಗ ಪೇಟಿಎಂ ಬಳಕೆ ಪ್ರಮಾಣ ಹೆಚ್ಚಿದೆ ಎಂದು ಅವರು ತಿಳಿಸಿದರು.

Like us on Facebook  The New India Times

ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333

POPULAR  STORIES :

ದರ್ಶನ್‍ರನ್ನು ಮದ್ವೆಗೆ ಆಹ್ವಾನ ಮಾಡಿದ್ದೀರಾ ಎಂದು ಕೇಳಿದ ಅಭಿಮಾನಿ: ಯಶ್ ಏನಂದ್ರು ಗೊತ್ತಾ..?

ಮಹಿಳೆಯೊಬ್ಬರ ಕಿವಿಯಿಂದ ಜೀವಂತ ಜಿರಲೆಯನ್ನು ಹೊರತೆಗೆದ ಡಾಕ್ಟರ್..!

ಅಪ್ಪ ಅಮ್ಮನನ್ನು ನೋಡಿಕೊಳ್ಳುವಂತೆ ಗೆಳೆಯನಿಗೆ ಹೇಳಿದ..! ಪ್ರೀತಿಸಿದವಳನ್ನು ಬೇಕಂತಲೇ ದೂರವಿಟ್ಟ..!

ದಕ್ಷಿಣ ಭಾರತದ ಮೊದಲ ನಗದು ರಹಿತ ಗ್ರಾಮ ಯಾವುದು ಗೊತ್ತಾ..?

ಸಂಜನಾ ಐ ಲವ್ ಯೂ ಎಂದ ಪ್ರಥಮ್..! ಆಕೆ ಕೊಟ್ಟ ಉತ್ತರ ಏನು..?

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article