ಜನಸಾಮಾನ್ಯರಿಗೆ ದುಬಾರಿ ಬರೆ; ತರಕಾರಿ, ಸೊಪ್ಪು ಹಾಗೂ ಹಣ್ಣುಗಳ ಬೆಲೆಯಲ್ಲಿ ಭಾರೀ ಏರಿಕೆ
ಬೆಂಗಳೂರು: ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಈಗಾಗಲೇ ಸಂಕಷ್ಟದಲ್ಲಿರುವ ಜನಸಾಮಾನ್ಯರಿಗೆ ಮತ್ತೊಂದು ಹೊರೆ ಎದುರಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ತರಕಾರಿ, ಸೊಪ್ಪು ಹಾಗೂ ಹಣ್ಣುಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಕುಟುಂಬಗಳ ಮಾಸಿಕ ಖರ್ಚಿನ ಮೇಲೆ ಹೆಚ್ಚುವರಿ ಪರಿಣಾಮ ಬೀರುತ್ತಿದೆ.
ಹವಾಮಾನ ವೈಪರೀತ್ಯ ಮತ್ತು ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದಿರುವುದರಿಂದ ಹಲವು ಬೆಳೆಗಳ ಇಳುವರಿ ಕುಸಿದಿದೆ. ಪರಿಣಾಮ ಮಾರುಕಟ್ಟೆಯಲ್ಲಿ ತರಕಾರಿಗಳ ಪೂರೈಕೆ ಕಡಿಮೆಯಾಗಿದ್ದು, ಬೆಲೆಗಳು ಏರಿಕೆಯಾಗಿವೆ. ಮುಂದಿನ ದಿನಗಳಲ್ಲೂ ಮಳೆ ಕೊರತೆ ಮುಂದುವರಿದರೆ ಇಳುವರಿ ಮತ್ತಷ್ಟು ಕಡಿಮೆಯಾಗಿ ಬೆಲೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ವ್ಯಾಪಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಹಾಪ್ಕಾಮ್ಸ್ನಲ್ಲಿ ಪ್ರಮುಖ ತರಕಾರಿಗಳ ಬೆಲೆ (ಪ್ರತಿ ಕೆ.ಜಿ.):
• ಹುರಳಿಕಾಯಿ – ₹110
• ಬಿಳಿ ಬದನೆಕಾಯಿ – ₹95
• ದಪ್ಪ ಮೆಣಸಿನಕಾಯಿ – ₹90
• ಬಜ್ಜಿ ಮೆಣಸಿನಕಾಯಿ – ₹85
• ಬಿಳಿ ಹುರಳಿಕಾಯಿ – ₹85
• ಬಟಾಣಿ ಕಾಳು – ₹200
• ಹಿರೇಕಾಯಿ – ₹60
• ಹಾಗಲಕಾಯಿ – ₹64
• ಶುಂಠಿ – ₹177
• ಬೆಳ್ಳುಳ್ಳಿ – ₹270
• ಊಟಿ ಕ್ಯಾರೆಟ್ – ₹90
• ಡಬಲ್ ಬೀನ್ಸ್ – ₹160
• ಗೋರಿಕಾಯಿ – ₹70
ಸೊಪ್ಪಿನ ದರ:
• ಮೆಂತ್ಯೆ ಸೊಪ್ಪು – ₹125 ಪ್ರತಿ ಕೆ.ಜಿ. (ಒಂದು ಕಟ್ಟು ₹30)
• ಪುದೀನ – ₹95 ಪ್ರತಿ ಕೆ.ಜಿ. (ಒಂದು ಕಟ್ಟು ₹20)
ಹಣ್ಣುಗಳ ಬೆಲೆ (ಪ್ರತಿ ಕೆ.ಜಿ.):
• ವಾಷಿಂಗ್ಟನ್ ಸೇಬು – ₹325
• ಗಾಲಾ ಸೇಬು – ₹350
• ಕಿವಿ – ₹800
• ಗೋಲ್ಡ್ ಕಿವಿ – ₹1,000
• ಲಿಚ್ಚಿ – ₹500
• ಮೂಸಂಬಿ – ₹160
• ಬಾದಾಮಿ ಮಾವು – ₹200
• ಸಕ್ಕರೆಗುತ್ತಿ ಮಾವು – ₹230
• ಸಪೋಟ – ₹190
ತರಕಾರಿ ಹಾಗೂ ಹಣ್ಣುಗಳ ದರ ಏರಿಕೆಯಿಂದ ಗ್ರಾಹಕರು ತತ್ತರಿಸಿದ್ದು, ಮಳೆ ಕೊರತೆ ಮುಂದುವರಿದರೆ ಮುಂದಿನ ದಿನಗಳಲ್ಲಿ ಬೆಲೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.



