No menu items!
21.9 C
Munich
Friday, September 4, 2026

ಮೈಸೂರು ದಸರಾದಲ್ಲಿ ಅಭಿಮನ್ಯುವಿಗೆ ಮತ್ತೆ ಅವಕಾಶ; ನಿಶಾನೆ ಆನೆಯಾಗಿ ಪಾಲ್ಗೊಳ್ಳಲು ರಾಮಲಿಂಗಾರೆಡ್ಡಿ ಆದೇಶ

Must read

ಮೈಸೂರು ದಸರಾದಲ್ಲಿ ಅಭಿಮನ್ಯುವಿಗೆ ಮತ್ತೆ ಅವಕಾಶ; ನಿಶಾನೆ ಆನೆಯಾಗಿ ಪಾಲ್ಗೊಳ್ಳಲು ರಾಮಲಿಂಗಾರೆಡ್ಡಿ ಆದೇಶ

ಮೈಸೂರು: ಮೈಸೂರು ದಸರಾ ಜಂಬೂಸವಾರಿಯಲ್ಲಿ ಸತತ ಆರು ಬಾರಿ ಚಿನ್ನದ ಅಂಬಾರಿಯನ್ನು ಯಶಸ್ವಿಯಾಗಿ ಹೊತ್ತಿರುವ ಅಭಿಮನ್ಯು ಆನೆಗೆ 60 ವರ್ಷ ತುಂಬಿದ ಹಿನ್ನೆಲೆಯಲ್ಲಿ ನಿವೃತ್ತಿ ನೀಡಲಾಗಿತ್ತು. 2026ರ ದಸರಾ ಜಂಬೂಸವಾರಿಯಲ್ಲಿ ಅಭಿಮನ್ಯು ಭಾಗವಹಿಸುವುದಿಲ್ಲ ಎಂಬ ವಿಚಾರಕ್ಕೆ ಅಭಿಮಾನಿಗಳು ಹಾಗೂ ದಸರಾ ಪ್ರಿಯರು ಬೇಸರ ವ್ಯಕ್ತಪಡಿಸಿದ್ದರು.
ಅಭಿಮನ್ಯುವನ್ನು ಕೊನೆಯ ಬಾರಿಗೆ 2026ರ ಜಂಬೂಸವಾರಿಯಲ್ಲಿ ನಿಶಾನೆ ಆನೆಯಾಗಿ ಕರೆತಂದು, ಅರ್ಜುನ ಆನೆಗೆ ನೀಡಿದ ರೀತಿಯಲ್ಲೇ ಗೌರವಪೂರ್ಣ ಬೀಳ್ಕೊಡುಗೆ ನೀಡಬೇಕು ಎಂಬ ಬೇಡಿಕೆಗಳು ಕೇಳಿಬಂದಿದ್ದವು.
ಈ ಹಿನ್ನೆಲೆಯಲ್ಲಿ ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅವರು ಸಾರ್ವಜನಿಕರ ಹಾಗೂ ಅಭಿಮಾನಿಗಳ ಬೇಡಿಕೆಗೆ ಸ್ಪಂದಿಸಿದ್ದು, ಅಭಿಮನ್ಯುವಿಗೆ 2026ರ ಮೈಸೂರು ದಸರಾ ಜಂಬೂಸವಾರಿಯಲ್ಲಿ ಮತ್ತೊಮ್ಮೆ ಅವಕಾಶ ನೀಡಲು ಮಹತ್ವದ ಆದೇಶ ಮಾಡಿದ್ದಾರೆ.
ಮೈಸೂರು ದಸರಾ ಪರಂಪರೆಯಲ್ಲಿ ಅಭಿಮನ್ಯುವಿನ ಸೇವೆ ಅತ್ಯಂತ ವಿಶೇಷ ಹಾಗೂ ಸ್ಮರಣೀಯವಾಗಿದೆ. ಹಲವು ವರ್ಷಗಳ ಕಾಲ ದಸರಾ ಮಹೋತ್ಸವದಲ್ಲಿ ಭಾಗವಹಿಸಿದ್ದ ಅಭಿಮನ್ಯು, ಚಿನ್ನದ ಅಂಬಾರಿ ಹೊರುವ ಜವಾಬ್ದಾರಿಯನ್ನು ಶಿಸ್ತು, ಧೈರ್ಯ ಹಾಗೂ ಯಶಸ್ವಿಯಾಗಿ ನಿರ್ವಹಿಸುವ ಮೂಲಕ ನಾಡಿನ ಜನರ ಪ್ರೀತಿ ಮತ್ತು ಗೌರವಕ್ಕೆ ಪಾತ್ರವಾಗಿದೆ.
ಅಭಿಮನ್ಯುವಿನ ದೀರ್ಘಕಾಲದ ಅಮೂಲ್ಯ ಸೇವೆಯನ್ನು ಸ್ಮರಿಸುವ ಉದ್ದೇಶದಿಂದ ಇತ್ತೀಚೆಗೆ ಆಯೋಜಿಸಿದ್ದ ನೀಳ್ಕೊಡುಗೆ ಹಾಗೂ ಗೌರವ ಸಮಾರಂಭವೂ ಯಶಸ್ವಿಯಾಗಿ ನೆರವೇರಿತ್ತು.
ಆದರೆ ಅಭಿಮನ್ಯುವಿನ ಮೇಲಿನ ಜನರ ಭಾವನಾತ್ಮಕ ನಂಟು ಹಾಗೂ ಸಾರ್ವಜನಿಕರ ಬೇಡಿಕೆಯನ್ನು ಪರಿಗಣಿಸಿರುವ ಅರಣ್ಯ ಸಚಿವರು, ಮೈಸೂರು ದಸರಾ-2026ರ ಜಂಬೂಸವಾರಿ ಉತ್ಸವದಲ್ಲಿಯೂ ಅಭಿಮನ್ಯುವಿಗೆ ಗಜಪಡೆಯೊಂದಿಗೆ ನಿಶಾನೆ ಆನೆಯಾಗಿ ಭಾಗವಹಿಸಲು ಅವಕಾಶ ಕಲ್ಪಿಸುವಂತೆ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಸೂಚಿಸಿದ್ದಾರೆ.
ಹೀಗಾಗಿ, ದಸರಾ ಜಂಬೂಸವಾರಿಯಲ್ಲಿ ಕೊನೆಯ ಬಾರಿಗೆ ಅಭಿಮನ್ಯುವನ್ನು ನಿಶಾನೆ ಆನೆಯಾಗಿ ಕಣ್ತುಂಬಿಕೊಳ್ಳುವ ಅವಕಾಶ ಅಭಿಮಾನಿಗಳಿಗೆ ದೊರೆಯುವ ನಿರೀಕ್ಷೆ ಮೂಡಿದೆ. ಅಭಿಮನ್ಯುವಿನ ಹಲವು ವರ್ಷಗಳ ಸೇವೆಗೆ ಇದು ಗೌರವಪೂರ್ಣ ವಿದಾಯವಾಗಲಿದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.

- Advertisement -spot_img

More articles

- Advertisement -spot_img

Latest article