ಬಿಗ್‍ಬಾಸ್ ಸೀಸನ್-4 ಮುಗಿಯೋಕೆ ಇನ್ನೇನು ಒಂದೇ ವಾರ ಬಾಕಿ ಉಳಿದಿದೆ..! ಫೈನಲ್‍ನಲ್ಲಿ ಐದು ಸ್ಪರ್ಧಿಗಳು ಬಾಕಿ ಉಳಿಯಬೇಕಾದ ಕಾರಣ ಬಿಗ್‍ಬಾಸ್ ಈ ವಾರ ಇಬ್ಬರು ಸ್ಪರ್ಧಿಯನ್ನ ಎಲಿಮಿನೇಟ್ ಮಾಡಿದ್ದಾರಂತೆ..! ಮನೆಯ ಒಳಗೆ ಒಟ್ಟು ಏಳು ಜನರು ಪೈಪೋಟಿ ನಡೆಸುತ್ತಿದ್ದು ಈ ವಾರ ಏಳು ಜನರಲ್ಲಿ ಶಾಲಿನಿ, ರೇಖಾ ಹಾಗೂ ಮೋಹನ್ ಅವರ ಹೆಸರು ನಾಮಿನೇಟ್ ಆಗಿರ್ಲಿಲ್ಲ. ಶೀತಲ್ ಶೆಟ್ಟಿ ಅವರಿಗೆ ಸಿಕ್ಕ ನೇರ ನಾಮಿನೇಟ್ ಮಾಡುವ ಅವಕಾಶದಲ್ಲಿ ಮಾಳವಿಕ ಅವರು ಹೆಸರು ಸೇರಿದಂತೆ ಈ ವಾರ ಪ್ರಥಮ್, ಕೀರ್ತಿಕುಮಾರ್ ಹಾಗೂ ಭುವನ್ ಅವರ ಹೆಸರು ನಾಮಿನೇಟ್ ಆಗಿತ್ತು. ಹೀಗಾಗಿ ಸಹಜವಾಗಿಯೆ ಈ ವಾರ ಬಿಗ್‍ಬಾಸ್ ಮನೆಯಿಂದ ಯಾರು ಹೊರ ನಡಿತಾರೆ ಎನ್ನುವ ಕುತೂಹಲ ಕಾಡ್ತಾ ಇತ್ತು..! ಆದ್ರೆ ಅದಕ್ಕೆಲ್ಲಾ ಈಗ ತೆರೆ ಬಿದ್ದಿದ್ದು ಈ ವಾರ ನಾಲ್ವರ ಪೈಕಿ ಇಬ್ಬರು ಹೊರ ನಡೆಯಲಿದ್ದಾರೆ ಎಂಬುದು ಬಿಗ್‍ಬಾಸ್ ಖಚಿತ ಪಡಿಸಿದೆಯಂತೆ..! ಹೀಗಾಗಿ ಈ ವಾರ ಇಬ್ಬರು ಪ್ರಭಾವಶಾಲಿ ಸ್ಪರ್ಧಾಳುಗಳು ಮನೆಯಿಂದ ಹೊರ ಬಿದ್ದಿದ್ದಾರಂತೆ..! ಅದ್ಯಾರ್ಯಾರು ಅನ್ನೋ ಕುತೂಹಲ ಕಾಡ್ತಾ ಇದೀಯಾ..? ಅದಕ್ಕೆಲ್ಲಾ ಉತ್ತರ ಇಲ್ಲಿದೆ ನೋಡಿ..! ಬಿಗ್‍ಬಾಸ್ ಮನೇಲಿ ಸತತ 13 ವಾರಗಳ ಕಾಲ ಎಲ್ಲಾ ಟಾಸ್ಕ್ ನಲ್ಲೂ ಇತರೆ ಸ್ಪರ್ಧಿಗಳಿಗೆ ಫೈಟ್ ನೀಡ್ತಾ ಬಂದ ಮನೆಯ ಇತರೆ ಸದಸ್ಯರಿಗೆ ತಲೆ ನೋವಾದ ಹಾಗೂ ರಾಜ್ಯದ ಜನತೆಯ ಮನೆಮಾತಾಗಿರುವ ಒಳ್ಳೆ ಹುಡ್ಗ ಪ್ರಥಮ್ ಮನೆಯಿಂದ ಹೊರ ಬಿದ್ದಿದ್ದಾರೆ ಎಂಬ ಶಾಕಿಂಗ್ ನ್ಯೂಸ್ ಹೊರ ಬಿದ್ದಿದೆ..! ಇವರ ಜೊತೆಗೆ ಬಿಗ್‍ಬಾಸ್ ಮನೇಲಿ ಸೋಲನ್ನೆ ಒಪ್ಪಿಕೊಳ್ಳೊಕೆ ತಯಾರಿರದ ನಟಿ ಮಾಳವಿಕ ಕೂಡ ಮನೆಯಿಂದ ಔಟ್ ಆಗಿದ್ದಾರೆ ಎಂಬ ಶಾಕಿಂಗ್ ನ್ಯೂಸ್ ಹೊರ ಬಿದ್ದಿದೆ. ಈ ಮೂಲಕ ಈ ಇಬ್ಬರು ಸ್ಪರ್ಧಿಗಳು ಫೈನಲ್ ಹಂತಕ್ಕೆ ತಲುಪುವ ವೇಳೆಯಲ್ಲಿಯೆ ಎಡವಿ ಬಿದ್ದಿದ್ದಾರೆ. ಇನ್ನುಳಿದಂತೆ ಈ ವಾರ ನಾಮಿನೇಟ್ ಆಗಿದ್ದ ಭುವನ್ ಹಾಗೂ ಕೀರ್ತಿ ನಿರಾಳರಾಗಿದ್ದು ಇವರ ಜೊತೆಗೆ ಶಾಲಿನಿ, ಮೋಹನ್ ಹಾಗೂ ರೇಖಾ ಬಿಗ್‍ಬಾಸ್ ಮನೆಲಿ ಉಳಿದು ಕೊಂಡಿದ್ದಾರೆ.
ಬಿಗ್‍ಬಾಸ್‍ನ ಬಿಗ್ ಟ್ವಿಸ್ಟ್..!
ಇನ್ನು ಈ ವಾರ ಯಾರೂ ಊಹೆನೂ ಮಾಡಿಕೊಳ್ಳಲಾಗದ ನಿರ್ಧಾರ ತೆಗೆದುಕೊಂಡಿರೊ ಬಿಗ್‍ಬಾಸ್ ಅಚ್ಚರಿಯಂತೆ ಪ್ರಥಮ್‍ರನ್ನು ಹೊರ ಹಾಕಿದ್ದಾರೆ. ಈ ಮೂಲಕ ರಾಜ್ಯದ ಕೋಟ್ಯಾಂತರ ಪ್ರಥಮ್ ಅಭಿಮಾನಿಗಳಿಗೆ ಇನ್ನಿಲ್ಲದ ನಿರಾಸೆ ಮೂಡಿಸಿದ್ದಾರೆ ಎನ್ನುವ ಬೆನ್ನಲ್ಲೆ ಬಿಗ್‍ಬಾಸ್ ಈ ಬಾರಿ ಸಖತ್ ಟ್ವಿಸ್ಟ್ ಇಟ್ಟಿದ್ದಾರಂತೆ..! ಈ ಬಾರಿಯ ಬಿಗ್‍ಬಾಸ್ ಕಾರ್ಯಕ್ರಮ ಇನ್ನು ಎರಡು ವಾರಗಳ ಕಾಲ ಮುಂದೂಡಲ್ಪಟ್ಟ ಕಾರಣ ಪ್ರಥಮ್ ಹಾಗೂ ಮಾಳವಿಕ ಅವರನ್ನು ಸೀಕ್ರೆಟ್ ರೂಂ ನಲ್ಲಿಟ್ಟಿದ್ದಾರೆ ಎಂಬ ಸುದ್ದಿಯೂ ಈಗ ಬಂದಿದೆ. ಒಟ್ಟಾರೆ ಪ್ರಥಮ್ ಹೊರ ಬಂದ್ರೂ ಕೂಡ ಅವರು ಸೀಕ್ರೆಟ್ ರೂಂನಲ್ಲಿರ್ತಾರೆ ಅನ್ನೋದೆ ಬಿಗ್ ಟ್ವಿಸ್ಟ್.
Like us on Facebook The New India Times
ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333
POPULAR STORIES :
ಗುಡ್ ನ್ಯೂಸ್: ಸದ್ಯದಲ್ಲೆ ಬಡವರ ಖಾತೆಗೆ ನೇರ ಹಣ ಪಾವತಿ..?
ಫಿಲ್ಮ್ ಫೇರ್‍ಗೆ ಸನ್ನಿ ಶಾರ್ಟ್ ಫಿಲ್ಮ್ ! #Sunny Leone Short film
ದಂಪತಿಗಳಿಗೆ ಉಡುಗೊರೆಯಾಗಿ ಕಾಂಡೋಮ್ ನೀಡಲಿದೆ ಸರ್ಕಾರ..!
ಸ್ಯಾಂಡಲ್‍ವುಡ್ ಕ್ವೀನ್‍ನ ಹಿಂದಿಕ್ಕಿದ್ದಾಳಂತೆ ಈ ನಟಿಮಣಿ?
ನೊಬೆಲ್ ವಿಜೇತರಿಗೆ 100 ಕೋಟಿ ಬಂಪರ್ ಆಫರ್..!
ಕ್ಯಾಪ್ಟನ್ ಕೂಲ್ ನಾಯಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾದ್ರೂ ಯಾಕೆ..?
ಹೊಸ 2000ರೂ. ನೋಟಿನಲ್ಲಿ ಕಾಣೆಯಾಗಿದ್ದಾರೆ ಗಾಂಧೀಜಿ..!!
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಇನ್ಮುಂದೆ ಮಳೆ ಬಂದ್ರೂ ಪಂದ್ಯ ರದ್ದಾಗಲ್ಲ..!!