ಸ್ಯಾಂಡಲ್‍ವುಡ್ ನ ಈ ಜೋಡಿಯಿಂದ ಜನರಿಗೆ ವಂಚನೆ…!

Date:

ನಮ್ಮಲ್ಲಿ ಹಣ ಹೂಡಿದರೆ ನಿಮಗೆ ಒಂದು ಸೈಟ್ ಕೊಡ್ತೀವಿ..! ಅಷ್ಟೇಅಲ್ಲ ಪ್ರತಿ ತಿಂಗಳು ಅಕ್ಕಿ, ಬೇಳೆ ನೀಡ್ತೀವಿ ಎಂದು ಜನರನ್ನು ನಂಬಿಸಿ ವಂಚಿಸಿದೆ ಸ್ಯಾಂಡಲ್‍ವುಡ್‍ನ ಈ ಜೋಡಿ..!
ಬಾಲಿವುಡ್‍ನ ‘ಬಂಟಿ ಔರ್ ಬಬ್ಲಿ’ ಸಿನಿಮಾದಲ್ಲಿ ಅಭಿಷೇಕ್ ಬಚ್ಚನ್ ಮತ್ತು ರಾಣಿ ಮುಖರ್ಜಿ ಜನರಿಗೆ ಯಾವ ರೀತಿ ಮೋಸ ಮಾಡ್ತಾರೋ ಅದೇರೀತಿ ಈ ಜೋಡಿ ಜನರಿಗೆ ಮೋಸಮಾಡಿದೆ..!


ನಟ ಹಾಗೂ ಕೋ ಆರ್ಡಿನೇಟರ್ ಆಗಿರೋ ಚಂದು ಆಚಾರ್ಯ ಹಾಗೂ ವೀಣಾ ವಂಚಕರು. ಅಸಲಿಗೆ ವೀಣಾ ಚಂದು ಆಚಾರ್ಯನ ಹೆಂಡ್ತಿ ಅಲ್ಲ. ಪಾಲಾಕ್ಷಯ್ಯ ಎಂಬುವವರ ಹೆಂಡ್ತಿ ವೀಣಾ..! ಈಕೆಗೆ ಸಿನಿಮಾದಲ್ಲಿ, ಧಾರವಾಹಿಗಳಲ್ಲಿ ಚಾನ್ಸ್ ಕೊಡಿಸ್ತೀನಿ ಅಂತ ತಲೆಕೆಡಿಸಿ ತನ್ನ ಜೊತೆ ಕರ್ಕೊಂಡು ಬಂದಿದ್ನಂತೆ ಚಂದು ಆಚಾರ್ಯ..! ಪಾಲಾಕ್ಷಯ್ಯ ಮುಂಬೈಗೆ ಹೋದಾಗ ಚಂದು ಜೊತೆ ಮನೆಬಿಟ್ಟು ತನ್ನ 15 ವರ್ಷದ ಮಗಳ ಜೊತೆ ಮನೆಬಿಟ್ಟು ಬಂದ ವೀಣಾ..ನೀನು ಅಪ್ಪನ ಜೊತೆ ಮಾತಾಡಿದ್ರೆ ವಿಷ ಕುಡಿದು ಸತ್ತೋಗ್ತೀನಿ ಅಂತ ಹೆದರಿಸ್ತಿದ್ದಳಂತೆ..! ಅಷ್ಟೇಅಲ್ಲದೆ ಚಂದು ಆಚಾರ್ಯ ಪಾಲಕ್ಷಯ್ಯ ಅವರಿಗೆ ಕೊಲೆ ಬೆದರಿಕೆ ಹಾಕಿದ್ದ ಎಂಬ ಆರೋಪ ಕೂಡ ಇದೆ..!


ಹೀಗೆ ಜೊತೆಯಾದ ವೀಣಾ ಮತ್ತು ಚಂದು ಆಚಾರ್ಯ.. ಜನರನ್ನು ವಂಚಿಸೋಕೆ ಅಂತಾಲೆ ಮಲ್ಲಸಂದ್ರದಲ್ಲಿ ಜನಸ್ಪೋಟ ಸೌಂದರ್ಯ ಕೋ-ಆಪರೇಟಿವ್ ಬ್ಯಾಂಕ್‍ನ್ನು ಸ್ಥಾಪನೆ ಮಾಡಿದ್ದಾರೆ. ನಮ್ಮಲ್ಲಿ ಹಣ ಹೂಡಿದ್ರೆ ಒಂದು ಸೈಟ್ ಕೊಡ್ತೀವಿ, ತಿಂಗಳಿಗೆ ಅಕ್ಕಿ- ಬೇಳೆ ನೀಡ್ತೀವಿ ಅಂತ ಹೇಳಿದ್ದಾರೆ. ಇದನ್ನು ನಂಬಿದ ಜನ ಹಣ ಹೂಡಿದ್ದಾರೆ..! ಈಗ ಹಣವೂ ಇಲ್ಲ, ಸೈಟೂ ಇಲ್ಲ, ಅಕ್ಕಿ-ಬೇಳೆಯೂ ಇಲ್ಲ..! ವೀಣಾ ಮತ್ತು ಚಂದು ತಲೆಮೆರೆಸಿಕೊಂಡಿದ್ದಾರೆ. ವಂಚನೆಗೆ ಒಳಗಾದ ಜನ ಬಾಗಲಕುಂಟೆ ಠಾಣೆ ಮೆಟ್ಟಿಲೇರಿದ್ದಾರೆ..! ಪಾಲಾಕ್ಷಯ್ಯ ತನಗೆ ನ್ಯಾಯ ಒದಗಿಸಿ ಕೊಡಿ ಅಂತ ಪೀಣ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...