No menu items!
12.4 C
Munich
Wednesday, April 29, 2026

ಇವರೆಂಥಾ ಬೀದಿನಾಯಿ ಪ್ರೇಮಿ..! ಬೀದಿನಾಯಿಗಳಿಗೋಸ್ಕರ 9000ಕಿ.ಮೀ ಪ್ರಯಾಣಿಸಿದ್ರು..!

Must read

ಇವತ್ತು ನಾಯಿ ಸಾಕೋದು ಫ್ಯಾಷನ್ ಆಗಿದೆ..! ಎಲ್ಲೇ ಹೋಗ್ತಾ ಇದ್ರೂ ಜೊತೆಯಲ್ಲಿ ಪ್ರೀತಿಯ ನಾಯಿಯನ್ನು ಕರ್ಕೊಂಡು ಹೋದ್ರೆನೇ ಚಂದ..! ಆದ್ರೆ ಬೀದಿ ನಾಯಿಯನ್ನು ಹತ್ತಿರ ಬಿಟ್ಟುಕೊಳ್ತೀವಾ..! ನಾಯಿ ನಾಯಿನೇ ಆದ್ರೂ ನಾವು ಮನೆಯಲ್ಲಿ ಮುದ್ದಿನಿಂದ ಸಾಕೋ ನಾಯಿನೇ ಬೇರೆ ಬೀದಿ ನಾಯಿನೇ ಬೇರೆ..! ಬೀದಿನಾಯಿಯ ಬಗ್ಗೆ ಕಾಳಜಿ ತೋರುವವರನ್ನು ನೀವು ನೋಡಿದ್ದೀರಾ..!? ನೋಡಿರಲ್ಲ ಅನ್ಕೋತ್ತೀನಿ..! ಇವತ್ತು ನಿಮಗೊಬ್ಬ “ಬೀದಿ ನಾಯಿ” ಪ್ರೇಮಿಯನ್ನು ಪರಿಚಯ ಮಾಡಿಕೊಡ್ತಾ ಇದ್ದೀವಿ. ಇಂಥವರೂ ಇದ್ದಾರ ಅಂತ ಕೇಳ್ಬೇಡಿ.. ಇಂಥವರೂ ಇದ್ದಾರೆ ಸ್ವಾಮಿ..!
ಈ ಬೀದಿ ನಾಯಿ ಪ್ರೇಮಿ ಮೂಲತಃ ಮುಂಬೈ ಅವರು..! ಆದ್ರೆ ಕಳೆದ 5 ವರ್ಷದಿಂದ ನಮ್ಮ ಬೆಂಗಳೂರಲ್ಲಿದ್ದಾರೆ..! ಈ ಬೀದಿನಾಯಿ ಪ್ರೇಮಿ ಹೆಸರು `ಸುಶಾಂತ್ ಅಜ್ನಿಕರ್’. ಚಿಕ್ಕ ವಯಸ್ಸಲ್ಲೇ, ಅಂದ್ರೆ ಸರಿ ಸುಮಾರು 8 ವರ್ಷದವರಿರುವಾಗಲೇ ಸಂಪೂರ್ಣ ಸಸ್ಯಹಾರಿ ಆಗ್ಬಿಟ್ರು..! ಮಾಂಸವನ್ನು ತಿನ್ನೋದನ್ನು ಬಿಟ್ಟು, ಪ್ರಾಣಿಗಳನ್ನು ತುಂಬಾ ಅಂದ್ರೆ ತುಂಬಾನೇ ಇಷ್ಟಪಡೋಕೆ ಶುರು ಮಾಡಿದ್ರು..! ಅವುಗಳಿಗೆ ಬೇಕಾದ ಆಹಾರವನ್ನು ಹಾಕ್ತಾ ಇದ್ರು..! ಎಲ್ಲಾ ಸಾಕುನಾಯಿಗಳನ್ನು ಇಷ್ಟ ಪಡ್ತಾರೆ..! ಆದ್ರೆ ಇವರು ಇಷ್ಟ ಪಡೋದು ಬೀದಿನಾಯಿಗಳನ್ನು..! ಇವರು ಬೀದಿನಾಯಿಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸೋಕೆ ಅಂತ.., ಬೆಂಗಳೂರಿನಿಂದ ಲೇಹ್ ಗೆ ತನ್ನ ಎನ್ಫೀಲ್ಡ್ ಬೈಕಿನಲ್ಲಿ ಪ್ರಯಾಣ ಮಾಡಿದ್ದಾರೆ..! ಇಲ್ಲಿತನಕ ಅವರು ಬೀದಿನಾಯಿಗಳ ರಕ್ಷಣೆ, ಅವುಗಳಿಗೆ ಆಹಾರ, ಅವುಗಳ ಬಗ್ಗೆ ಕಾಳಜಿ, ಅರಿವು ಮೂಡಿಸೋಕೆ ಅಂತ ಬರೊಬ್ಬರಿ ಸುಮಾರು 9ಸಾವಿರ ಕಿಲೋಮೀಟರ್ ಪ್ರಯಾಣಿಸಿದ್ದಾರಂತೆ..! 200ಕ್ಕೂ ಅಧಿಕ ಬೀದಿ ನಾಯಿಗಳನ್ನು ದತ್ತು ತಗೊಂಡು ಅವುಗಳ ಆಹಾರೋಪಚಾರವನ್ನು ಪ್ರಯಾಣದ ಸಂದರ್ಭದಲ್ಲಿ ಮಾಡಿದ್ದಾರೆ..! ಈ ಬೀದಿನಾಯಿಗಳಿಗಳಿಗೆ ಸಂಬಂಧಿಸಿದಂತೆ ಕಚಿತಿ ಠಜಿ ಟಿಜಚಿ ಅನ್ನೋ ಫೇಸ್ಬುಕ್ ಪೇಜ್ ಕೂಡ ಮಾಡಿಕೊಂಡಿದ್ದಾರೆ..!
ಬೀದಿನಾಯಿಗಳ ಹಾವಳಿಯನ್ನು ತಾಳಲಾಗದೇ ಕೊಲ್ಲುವವರ ನಡುವೆ ಸುಶಾಂತ್ ಭಿನ್ನವಾಗಿ ಕಾಣುತ್ತಾರೆ..! ಆದ್ರೆ ನಮ್ಮ ತಲೆ ಕೊರೆಯುವ ಪ್ರಶ್ನೆ ಒಂದೇ.. ಇವರೆಂಥಾ ಬೀದಿನಾಯಿ ಪ್ರೇಮಿ..?!~

  • ಶಶಿಧರ ಡಿ ಎಸ್ ದೋಣಿಹಕ್ಲು

If you Like this Story , Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

POPULAR  STORIES :

ಅವಳು ಸುಶ್ರಾವ್ಯ, ಇವನು ಸುಶಾಂತ್..! ಅವರ ಪ್ರೀತಿ ಕುರುಡಲ್ಲ…! ಅವನು ನೂರು ಸಲ ಐ ಲವ್ ಯೂ ಅಂದ್ರೂ ಅವಳು ಏನೂ ಹೇಳಲಿಲ್ಲ..

ನಿಮಗೆ ಸ್ಟೇಜ್ ಫಿಯರ್ ಇದ್ಯಾ..? ಡೋಂಟ್ ವರಿ ಭಯದ ಮುಂದೆ ಜಯವಿದೆ..! ಈ ಸ್ಟೋರಿ ಓದಿ..!

ಬರಲಿದೆ `ಬಲೂನ್ ಇಂಟರ್ನೆಟ್..’! ಹೊಸ ಯೋಜನೆಯಲ್ಲಿ ಭಾರತ ಸರ್ಕಾರದ ಜೊತೆ ಕೈ ಜೋಡಿಸಿದ ಗೂಗಲ್..!

ದೇಶದ ಮೊದಲ `ಅಂಧರ ಸ್ನೇಹಿ’ ರೈಲ್ವೇ ನಿಲ್ದಾಣ..! ಮೈಸೂರು ರೈಲ್ವೇ ನಿಲ್ದಾಣದಲ್ಲೀಗ ಬ್ರೈಲ್ ಲಿಪಿಯಲ್ಲಿ ರೈಲ್ವೇ ವೇಳಾಪಟ್ಟಿ..!

ನಮ್ ಟೈಮು ಸರಿಇಲ್ಲ ಅಂತಾದ್ರೆ ಏನೆಲ್ಲಾ ಆಗುತ್ತೆ ಗೊತ್ತಾ…?! ಕನ್ನಡದ ಹುಡುಗರು ಮಾಡಿದ ಈ ಕಿರುಚಿತ್ರ ನೋಡಿ ಗೊತ್ತಾಗುತ್ತೆ..!

ಸ್ಮೋಕಿಂಗ್ ಈಸ್ ಇಂಜ್ಯೂರಿಯಸ್ ಟು ಹೆಲ್ತ್, ಹಾರ್ಟ್ ಅಂಡ್ ಫ್ಯಾಮಿಲಿ..! ಧೂಮಪಾನ ತ್ಯಜಿಸಿದ 20 ನಿಮಿಷದಿಂದಲೇ ಹಂತಹಂತವಾಗಿ ಮೊದಲಿನಂತೆಯೇ ಆಗ್ತೀರಿ..!

ಚೋಟಾ ಟೀಚರ್ ಬಂದ್ರು ದಾರಿ ಬಿಡಿ..! 11ರ ಪೋರ 125 ಗ್ರಾಮಕ್ಕೆ ಅಕ್ಷರದಾನ ಮಾಡುತ್ತಿದ್ದಾನೆ..!

`ವಾಸ್ತುಪ್ರಕಾರ’ ಮನೆಮುಂದೆ ಮರಗಳು ಇರಬಾರದಂತೆ..! ವಾಸ್ತುಪ್ರಕಾರ ಮರಗಳನ್ನು ಸಾಯಿಸುತ್ತಿರೊ ಇವರೆಂಥಾ ಅವಿವೇಕಿಗಳು..!

ಬ್ರಿಟಿಷ್ ಏರ್ ವೇಸ್ ವಿಮಾನದಲ್ಲಿ ಕನ್ನಡ ಕಲರವ..! ರಾಜ್ಯೋತ್ಸವದ ದಿನ ಕನ್ನಡಿಗರಿಗೆ ಕನ್ನಡದಲ್ಲೇ ಸ್ವಾಗತ..!

ನಮ್ಮ ಕನ್ನಡ ಹುಡುಗರ ಕನ್ನಡ ಹಾಡು..! ಕನ್ನಡ ಕನ್ನಡ ಕನ್ನಡ ಅಂತ ಹೆಮ್ಮೆಯಿಂದ ಹಾಡಿದ್ದಾರೆ ನಮ್ಮ ಹೊಸಪೇಟೆ ಹುಡುಗರು

17ರ ಪೋರ ಈಗ `ನಾಸ’ ಉದ್ಯೋಗಿ..! ಕ್ಯಾವೆಲಿನ್ ಗೆ ಇನ್ನೂ 17ವರ್ಷ ಈಗಲೇ ವಿಮಾನ ಹಾರಿಸಬಲ್ಲ..!

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article