No menu items!
8 C
Munich
Wednesday, April 15, 2026

ವಾಟರ್ ಮ್ಯಾನ್ ಆಫ್ ಇಂಡಿಯಾ `ರಾಜೇಂದ್ರ ಸಿಂಗ್'…! ಇವರೊಬ್ಬ `ನೀರಿನ ಸಂರಕ್ಷಕ'..!

Must read

ನೀರು ಅತ್ಯಂತ ಅಮೂಲ್ಯವಾದ ಸಂಪನ್ಮೂಲ. ವಿಪರ್ಯಾಸವೆಂದರೆ, ನೀರನ್ನು ವ್ಯರ್ಥಮಾಡುವ ಮೊದಲು ಈ ಬಗ್ಗೆ ಯಾರೂ ಯೋಚಿಸುವುದೇ ಇಲ್ಲ..! ಕೆಲವರಿಗೆ ನೀರನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂಬ ಸಾಮಾನ್ಯ ಜ್ಞಾನವೂ, ವಿವೇಕವೂ ಇಲ್ಲ..! ಅನವಶ್ಯಕವಾಗಿ ನೀರನ್ನು ಬಳಸುವ ಮೊದಲು ಎರಡೆರಡು ಬಾರಿ ಯೋಚನೆ ಮಾಡುವವರಿದ್ದಾರೆಯೇ..?! ಹೀಗೆ ನೀರಿನ ಬಗ್ಗೆ ಯೋಚನೆ ಮಾಡೋ ಮಂದಿ ತುಂಬಾನೇ ಕಡಿಮೆ..! ಬೆರಳೆಣಿಕೆಯಷ್ಟೂ ಇಲ್ಲ..! ಆದರೆ ಇಲ್ಲೊಬ್ಬರು ಇಂತವರ ನಡುವೆ ಭಿನ್ನವಾಗಿ ಗುರುತಿಸಿಕೊಂಡಿದ್ದಾರೆ..! ಇವರು ವಾಟರ್ ಮ್ಯಾನ್ ಆಫ್ ಇಂಡಿಯಾ ಅಂತಲೂ ಕರೆಯಲ್ಪಡುತ್ತಿದ್ದಾರೆ..! ಇವರ ಕಿರುಪರಿಚಯಮಾಡಿಕೊಡ್ತಾ ಇದ್ದೇನೆ..! ಓದಿ.
ವಾಟರ್ ಮ್ಯಾನ್ ಆಫ್ ಇಂಡಿಯಾ ಎಂದು ಕರೆಯಲ್ಪಡುವ ಸಹೃದಯಿ ಹೆಸರು `ರಾಜೇಂದ್ರ ಸಿಂಗ್’. ರಾಜಸ್ತಾನದವರಾದ ಇವರೊಬ್ಬ `ನೀರಿನ ಸಂರಕ್ಷಕ’..! ಇವರದ್ದೊಂದು ಸರ್ಕಾರೇತರ ಸಂಸ್ಥೆಯಿದೆ. ಅದರ ಹೆಸರು “ತರುಣ್ ಭಾರತ್ ಸಂಘ್”..! ಈ ಸಂಸ್ಥೆ ಮೂಲಕ ಅನೇಕ ಹಳ್ಳಿಗಳಿಗೆ ನೀರಿನ ಸೌಕರ್ಯವನ್ನು ಒದಗಿಸಿದ್ದಾರೆ..! ಐದು ನದಿಗಳ ಹರಿವಿನ ದಿಕ್ಕನ್ನು ಬದಲಾಯಿಸೋ ಮೂಲಕ 1000 ಹಳ್ಳಿಗಳಿಗೆ ನೀರಿನ ಸೌಕರ್ಯವನ್ನು ಕಲ್ಪಿಸಿದ್ದಾರೆ..! ಎಲ್ಲೋ ಹರಿದು ಹೋಗುತ್ತಿದ್ದ ನೀರನ್ನು ಜನಾನುಕೂಲಕ್ಕಾಗಿ ಬಳಸಿದ ಇವರಿಗೆ ನೀರಿಗಾಗಿ ಕೊಡುವ ನೋಬೆಲ್ ಪಾರಿತೋಷಕವೆಂದೇ ಕರೆಯಲ್ಪಡುವ “ಸ್ಟಾಕ್ಹೋಮ್ ವಾಟರ್” ಪ್ರಶಸ್ತಿ ಕೂಡ ಲಭಿಸಿದೆ..!
ಅತ್ಯಂತ ಶುಷ್ಕ ಪ್ರದೇಶದಲ್ಲಿ ಮಳೆನೀರು ಕೊಯ್ಲು, ಚೆಕ್ ಡ್ಯಾಂಗಳು, ನದಿ ನೀರಿನ ದಿಕ್ಕನ್ನು ಬದಲಾಯಿಸುವ ತಂತ್ರಗಾರಿಕೆ ಮೊದಲಾದವುಗಳಿಂದಾಗಿ ನೀರಿನ ನಿರ್ವಹಣೆಯನ್ನು ಮಾಡಿದ್ದಾರೆ..! ಹೀಗೆ ನೀರಿನ ಮಿತ ಬಳಕೆಯ ಬಗ್ಗೆ ಅರಿವು ಮೂಡಿಸುವ, ವ್ಯರ್ಥವಾಗುವ ನೀರನ್ನು ಅನುಕೂಲಯೋಗ್ಯವನ್ನಾಗಿ ಮಾಡುತ್ತಿರುವ ಇವರನ್ನು ಆರಂಭದಲ್ಲೇ ಹೇಳಿರುವಂತೆ ` ವಾಟರ್ ಮ್ಯಾನ್ ಆಫ್ ಇಂಡಿಯಾ’ ಎಂದು ಕರೆಯುತ್ತಾರೆ..! ನೀರಿನ ಸಂರಕ್ಷಣೆಗೆ ಅವಿರತವಾಗಿ ಶ್ರಮಿಸುತ್ತಿರೋ ಇವರಿಗೆ ನಾವೆಲ್ಲಾ ಕೈ ಜೋಡಿಸೋಣ..! ನೀರನ್ನು ಮಿತವಾಗಿ ಬಳಸಿ, ಬಳಸುವಂತೆ ಬೇರೆಯವರಿಗೂ ತಿಳಿಹೇಳಿ..! ಅದೇರೀತಿ ಈ ನಮ್ಮ ರಾಜೇಂದ್ರ ಸಿಂಗ್ ಅವರನ್ನು ಎಲ್ಲರಿಗೂ ಪರಿಚಯಿಸುವುದನ್ನು ಮಾತ್ರ ಮರೆಯಬೇಡಿ..! ಯಾಕಂದ್ರೆ ಇಂತವರು ಕೋಟಿಗೊಬ್ಬರು..!

  • ಶಶಿಧರ ಡಿ ಎಸ್ ದೋಣಿಹಕ್ಲು

If you Like this Story , Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

POPULAR  STORIES :

ಅವಳು ಸುಶ್ರಾವ್ಯ, ಇವನು ಸುಶಾಂತ್..! ಅವರ ಪ್ರೀತಿ ಕುರುಡಲ್ಲ…! ಅವನು ನೂರು ಸಲ ಐ ಲವ್ ಯೂ ಅಂದ್ರೂ ಅವಳು ಏನೂ ಹೇಳಲಿಲ್ಲ..

ನಿಮಗೆ ಸ್ಟೇಜ್ ಫಿಯರ್ ಇದ್ಯಾ..? ಡೋಂಟ್ ವರಿ ಭಯದ ಮುಂದೆ ಜಯವಿದೆ..! ಈ ಸ್ಟೋರಿ ಓದಿ..!

ಬರಲಿದೆ `ಬಲೂನ್ ಇಂಟರ್ನೆಟ್..’! ಹೊಸ ಯೋಜನೆಯಲ್ಲಿ ಭಾರತ ಸರ್ಕಾರದ ಜೊತೆ ಕೈ ಜೋಡಿಸಿದ ಗೂಗಲ್..!

ದೇಶದ ಮೊದಲ `ಅಂಧರ ಸ್ನೇಹಿ’ ರೈಲ್ವೇ ನಿಲ್ದಾಣ..! ಮೈಸೂರು ರೈಲ್ವೇ ನಿಲ್ದಾಣದಲ್ಲೀಗ ಬ್ರೈಲ್ ಲಿಪಿಯಲ್ಲಿ ರೈಲ್ವೇ ವೇಳಾಪಟ್ಟಿ..!

ನಮ್ ಟೈಮು ಸರಿಇಲ್ಲ ಅಂತಾದ್ರೆ ಏನೆಲ್ಲಾ ಆಗುತ್ತೆ ಗೊತ್ತಾ…?! ಕನ್ನಡದ ಹುಡುಗರು ಮಾಡಿದ ಈ ಕಿರುಚಿತ್ರ ನೋಡಿ ಗೊತ್ತಾಗುತ್ತೆ..!

ಸ್ಮೋಕಿಂಗ್ ಈಸ್ ಇಂಜ್ಯೂರಿಯಸ್ ಟು ಹೆಲ್ತ್, ಹಾರ್ಟ್ ಅಂಡ್ ಫ್ಯಾಮಿಲಿ..! ಧೂಮಪಾನ ತ್ಯಜಿಸಿದ 20 ನಿಮಿಷದಿಂದಲೇ ಹಂತಹಂತವಾಗಿ ಮೊದಲಿನಂತೆಯೇ ಆಗ್ತೀರಿ..!

ಚೋಟಾ ಟೀಚರ್ ಬಂದ್ರು ದಾರಿ ಬಿಡಿ..! 11ರ ಪೋರ 125 ಗ್ರಾಮಕ್ಕೆ ಅಕ್ಷರದಾನ ಮಾಡುತ್ತಿದ್ದಾನೆ..!

`ವಾಸ್ತುಪ್ರಕಾರ’ ಮನೆಮುಂದೆ ಮರಗಳು ಇರಬಾರದಂತೆ..! ವಾಸ್ತುಪ್ರಕಾರ ಮರಗಳನ್ನು ಸಾಯಿಸುತ್ತಿರೊ ಇವರೆಂಥಾ ಅವಿವೇಕಿಗಳು..!

ಬ್ರಿಟಿಷ್ ಏರ್ ವೇಸ್ ವಿಮಾನದಲ್ಲಿ ಕನ್ನಡ ಕಲರವ..! ರಾಜ್ಯೋತ್ಸವದ ದಿನ ಕನ್ನಡಿಗರಿಗೆ ಕನ್ನಡದಲ್ಲೇ ಸ್ವಾಗತ..!

ನಮ್ಮ ಕನ್ನಡ ಹುಡುಗರ ಕನ್ನಡ ಹಾಡು..! ಕನ್ನಡ ಕನ್ನಡ ಕನ್ನಡ ಅಂತ ಹೆಮ್ಮೆಯಿಂದ ಹಾಡಿದ್ದಾರೆ ನಮ್ಮ ಹೊಸಪೇಟೆ ಹುಡುಗರು

17ರ ಪೋರ ಈಗ `ನಾಸ’ ಉದ್ಯೋಗಿ..! ಕ್ಯಾವೆಲಿನ್ ಗೆ ಇನ್ನೂ 17ವರ್ಷ ಈಗಲೇ ವಿಮಾನ ಹಾರಿಸಬಲ್ಲ..!

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article