No menu items!
23.6 C
Munich
Tuesday, July 28, 2026

ಆಗಸ್ಟ್ 1ರಿಂದ ಹೊಸ ವಾಹನಗಳ ಬೆಲೆ ಏರಿಕೆ; ಪ್ರಯಾಣಿಕರಿಗೆ ಮತ್ತೊಂದು ಶಾಕ್, ಟ್ರಾವೆಲ್ಸ್ ದರವೂ ಹೆಚ್ಚಳ ಸಾಧ್ಯತೆ

Must read

ಆಗಸ್ಟ್ 1ರಿಂದ ಹೊಸ ವಾಹನಗಳ ಬೆಲೆ ಏರಿಕೆ; ಪ್ರಯಾಣಿಕರಿಗೆ ಮತ್ತೊಂದು ಶಾಕ್, ಟ್ರಾವೆಲ್ಸ್ ದರವೂ ಹೆಚ್ಚಳ ಸಾಧ್ಯತೆ

ನವದೆಹಲಿ: ದಿನದಿಂದ ದಿನಕ್ಕೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ಸಂಕಷ್ಟ ಅನುಭವಿಸುತ್ತಿರುವ ನಡುವೆಯೇ, ಆಗಸ್ಟ್ 1ರಿಂದ ಹೊಸ ವಾಹನಗಳ ಬೆಲೆ ಹೆಚ್ಚಳವಾಗಲಿದ್ದು, ಇದರ ಪರಿಣಾಮ ವಾಹನ ಖರೀದಿದಾರರು ಹಾಗೂ ಪ್ರಯಾಣಿಕರ ಮೇಲೂ ಬೀಳುವ ಸಾಧ್ಯತೆ ಇದೆ.
ಜಾಗತಿಕ ಮಟ್ಟದಲ್ಲಿ ಉಂಟಾಗಿರುವ ಯುದ್ಧದ ಪರಿಣಾಮ, ಹಣದುಬ್ಬರ ಹಾಗೂ ಉಕ್ಕು, ಅಲ್ಯೂಮಿನಿಯಂ, ರಬ್ಬರ್, ಪ್ಲಾಸ್ಟಿಕ್, ಎಲೆಕ್ಟ್ರಾನಿಕ್ ಚಿಪ್ಗಳು, ಬ್ಯಾಟರಿಗಳು ಮತ್ತು ಇತರೆ ಬಿಡಿಭಾಗಗಳ ಬೆಲೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ವಾಹನ ತಯಾರಿಕಾ ಕಂಪನಿಗಳು ಹೊಸ ವಾಹನಗಳ ದರವನ್ನು ಹೆಚ್ಚಿಸಲು ಮುಂದಾಗಿವೆ.
ವಾಹನಗಳ ಉತ್ಪಾದನಾ ವೆಚ್ಚ ಹೆಚ್ಚಿರುವುದರಿಂದ ಕಂಪನಿಗಳು ಈ ಹೆಚ್ಚುವರಿ ಹೊರೆಯನ್ನು ವಾಹನಗಳ ಬೆಲೆಯಲ್ಲಿ ಪ್ರತಿಬಿಂಬಿಸಲು ನಿರ್ಧರಿಸಿದ್ದು, ಇದರ ನೇರ ಪರಿಣಾಮ ಗ್ರಾಹಕರ ಮೇಲೆ ಬೀಳಲಿದೆ.
ಇನ್ನೊಂದೆಡೆ, ಹೊಸ ವಾಹನಗಳ ಬೆಲೆ ಏರಿಕೆಯಿಂದ ಟ್ರಾವೆಲ್ಸ್ ಉದ್ಯಮಕ್ಕೂ ಹೊಡೆತ ಬೀಳುವ ಸಾಧ್ಯತೆ ಇದೆ. ಕಾರುಗಳು, ಟಿಟಿ ಹಾಗೂ ಇತರೆ ಹೈಎಂಡ್ ವಾಹನಗಳನ್ನು ಖರೀದಿಸುವ ವೆಚ್ಚ ಹೆಚ್ಚಲಿರುವ ಕಾರಣ ಟ್ರಾವೆಲ್ಸ್ ಸಂಸ್ಥೆಗಳು ತಮ್ಮ ಸೇವಾ ದರಗಳನ್ನು ಪರಿಷ್ಕರಿಸಲು ಮುಂದಾಗಿವೆ.
ಈಗಾಗಲೇ ಪೆಟ್ರೋಲ್, ಡೀಸೆಲ್, ಟೋಲ್ ಶುಲ್ಕ ಸೇರಿದಂತೆ ವಾಹನ ನಿರ್ವಹಣಾ ವೆಚ್ಚಗಳು ಏರಿಕೆಯಾಗಿರುವ ಹಿನ್ನೆಲೆಯಲ್ಲಿ, ಹೊಸ ವಾಹನಗಳ ದರ ಹೆಚ್ಚಳದಿಂದ ಹೆಚ್ಚುವರಿ ಆರ್ಥಿಕ ಹೊರೆ ಉಂಟಾಗಲಿದೆ. ಇದರ ಪರಿಣಾಮವಾಗಿ ಪ್ರತಿ ಪ್ರಯಾಣದ ಬಾಡಿಗೆಯಲ್ಲೂ ಹೆಚ್ಚಳ ಮಾಡುವ ಸಾಧ್ಯತೆ ಇದೆ ಎಂದು ಕರ್ನಾಟಕ ಟ್ರಾವೆಲ್ಸ್ ಅಸೋಸಿಯೇಷನ್ ಮುನ್ಸೂಚನೆ ನೀಡಿದೆ.
ಈ ನಡುವೆ ಕೆಲವು ಪ್ರಮುಖ ವಾಹನ ತಯಾರಿಕಾ ಕಂಪನಿಗಳು ಆಗಸ್ಟ್ 1ರಿಂದ ಜಾರಿಗೆ ಬರುವ ಬೆಲೆ ಏರಿಕೆ ಕುರಿತು ತಮ್ಮ ಅಧಿಕೃತ ವೆಬ್ಸೈಟ್ಗಳಲ್ಲಿ ಈಗಾಗಲೇ ಮಾಹಿತಿ ಪ್ರಕಟಿಸಿವೆ. ಹೀಗಾಗಿ ಹೊಸ ವಾಹನ ಖರೀದಿಸಲು ಯೋಜಿಸಿರುವ ಗ್ರಾಹಕರು ಹೆಚ್ಚುವರಿ ವೆಚ್ಚ ಭರಿಸಲು ಸಿದ್ಧರಾಗಬೇಕಾದ ಪರಿಸ್ಥಿತಿ ಎದುರಾಗಲಿದೆ.

- Advertisement -spot_img

More articles

- Advertisement -spot_img

Latest article