No menu items!
11.1 C
Munich
Wednesday, April 29, 2026

ಆಕೆಗೆ 24 ವರ್ಷ.. ತೂಕ ಬರೋಬ್ಬರಿ 250 ಪೌಂಡ್..! ಈಕೆಯ ತೂಕ ಇನ್ನೂ ಹೆಚ್ಚಾಗಬೇಕಂತೆ..!

Must read

ಈ ಭೀಮ ಕಾಯದ ಹುಡುಗಿಯನ್ನು ನೋಡಿದರೆ ಚಿಕ್ಕಮಕ್ಕಳು ರೊಯ್ಯನೆ ಅತ್ತುಬಿಡುತ್ತವೆ. ಇಲ್ಲವೇ ಗೊಳ್ಳನೇ ನಕ್ಕುಬಿಡುತ್ತವೆ. ಅಷ್ಟೊಂದು ಭಾರವಾಗಿದ್ದಾಳೆ ಈ ಹುಡುಗಿ. ನಾವು ಸ್ವಲ್ಪ ತೂಕ ಹೆಚ್ಚಾದರೆ ಸಾಕು ಆಕಾಶವೇ ತಲೆ ಮೇಲೆ ಬಿದ್ದಂತೆ ಆಡುತ್ತೇವೆ. ಡಯಟ್ ಮಾಡಲು ಆರಂಭಿಸುತ್ತೇವೆ. ಆದರೆ ಇಲ್ಲೊಬ್ಬಳು ಹುಡುಗಿ ಇದ್ದಾಳೆ ನೋಡಿ. ಇವಳಿಗೆ ತೂಕ ಹೆಚ್ಚಿಸಿಕೊಳ್ಳುವದೆಂದರೆ ಇನ್ನಿಲ್ಲದ ಖುಷಿಯಂತೆ..! ಜಗತ್ತಿನಲ್ಲಿ ಯಾರಿಗೂ ಇಲ್ಲದ ಹುಚ್ಚು ಇವಳಿಗೆ ಬಂದಿದೆ ಎಂದರೆ ವಿಧಿಯಿಲ್ಲ.
ಟಾಮಿ ಜಾಂಗ್ ಎಂಬ 24 ವರ್ಷದ ಹುಡುಗಿ ತಾನು ದಢೂತಿಯಾಗಿ ಇರಬೇಕೆಂಬುದು ಈಕೆಯ ಬಯಕೆ. ಇದಕ್ಕಾಗಿಯೇ ಈಕೆ ಸದಾ ಏನಾದರೂ ತಿನ್ನುತ್ತಲೇ ಇರುತ್ತಾಳೆ. ಇವಳ ಬಾಯ್ ಫ್ರೆಂಡ್ ಕೂಡಾ ಈಕೆಗೆ ನೆರವಾಗುತ್ತಿದ್ದಾನೆ..! ವಿಶೇಷವೆಂದರೆ ಈಕೆಗೆ ಐಸ್ ಕ್ರೀಮ್ ತಿನ್ನಿಸುವುದು ಈತನೇ..! ಏನೆಲ್ಲಾ ತಿನ್ನಲಿಕ್ಕೆ ಆಗುತ್ತದೋ ಅದನ್ನು ತಿಂದು ಮುಗಿಸುತ್ತಾಳೆ ಇಕೆ. ತೂಕ ಹೆಚ್ಚಿದಂತೆಲ್ಲಾ ಟಾಮಿ ಸಖತ್ ಖುಷಿಪಡುತ್ತಾಳೆ..!
ಈ ಧೈತ್ಯ ಮಹಿಳೆ ತಿನ್ನುವುದಕ್ಕಾಗಿಯೇ ತಿಂಗಳಿಗೆ 2100 ಡಾಲರ್ ವ್ಯಯಿಸುತ್ತಾಳಂತೆ. ಭಾರತೀಯ ರೂಪಾಯಿಯಲ್ಲಿ ಹೇಳುವುದಾದರೆ ಬರೋಬ್ಬರಿ 139460.89 ರೂಪಾಯಿಗಳು..!
ದಿನವೊಂದಕ್ಕೆ 70 ಡಾಲರ್ ಮೊತ್ತದ ಜಂಕ್ ಫುಡ್ ಗಳು ಈಕೆಗೆ ಬೇಕೇ ಬೇಕು. ಅದನ್ನು ಆಕೆಯ ಗೆಳೆಯ ಜೋಹಾನ್ ಭರಿಸುತ್ತಾನೆ. ಏಕೆಂದರೆ ಟಾಮಿ ಸಂತೋಷವಾಗಿದ್ದರೆ ಆತನೂ ಸಂತೋಷವಾಗಿರುತ್ತಾನಂತೆ.
ವೈದ್ಯರು ಮಾತ್ರ ಈಕೆಯ ತೂಕದ ಹೆಚ್ಚಳದ ಬಗ್ಗೆ ಎಚ್ಚರಿಕೆ ಕೊಟ್ಟಿದ್ದಾರೆ. ಜೀವಕ್ಕೆ ಕುತ್ತು ಬಂದರೂ ಅಚ್ಚರಿ ಇಲ್ಲ ಎಂಬ ಎಚ್ಚರಿಕೆಯ ಸಂದೇಶವನ್ನೂ ವೈದ್ಯರು ನೀಡಿದ್ದಾರೆ. ಆದರೆ ಟಾಮಿಯ ಗಮನ ಕೇವಲ ತಿನ್ನುವುದರತ್ತ ಇರುತ್ತದೆ ಆದ್ದರಿಂದ ವೈದ್ಯರ ಮಾತು ಆಕೆಯ ಕಿವಿಗೆ ಬಿದ್ದಿಲ್ಲ ಅನ್ನಿಸುತ್ತದೆ..!

  • ರಾಜಶೇಖರ ಜೆ

If you Like this Story , Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

POPULAR  STORIES :

ಇವರು ಬೆಂಗಳೂರಿನ ಉಕ್ಕಿನ ಮನುಷ್ಯ..! ಇಂಥಾ ಕೆಲಸ ಮಾಡೋರು ತುಂಬಾ ಅಪರೂಪ..!

ಈತನೇ ನೋಡಿ ವಿಶ್ವದ ಅತಿ ಶ್ರೀಮಂತ ಕ್ಷೌರಿಕ..! ಈತನ ಬಳಿ ಇವೆ 250ಕ್ಕೂ ಹೆಚ್ಚು ಐಶಾರಾಮಿ ಕಾರುಗಳು..!

ಅಹಂಕರಾರ, ಹಠಮಾರಿತನ ಕೊಂದ ಪ್ರೀತಿ ಇದು..! ಈ ಸ್ಟೋರಿ ಓದಿದ್ರೆ, ಖಂಡಿತಾ ನೀವು ನಿಮ್ಮ ಪ್ರೀತಿಯನ್ನು, ಸ್ನೇಹವನ್ನೂ ಉಳಿಸಿಕೊಳ್ತೀರ..!

ವಿದೇಶಿಯರ ಬಾಯಲ್ಲೂ ಕನ್ನಡ ಕನ್ನಡ ಕನ್ನಡ..! ವಿದೇಶಿ ಮಹಿಳೆಯೊಬ್ಬರು ಹಚ್ಚೇವು ಕನ್ನಡದ ದೀಪ.. ಅಂತ ಹಾಡ್ತಾ ಇದ್ದಾರೆ..!

ಲಾಭದಾಯಕ ಕೆಲಸವನ್ನು ಬಿಟ್ಟು ಬಂದವರು..! ಅಷ್ಟಕ್ಕೂ ಇವರೆಲ್ಲಾ ಕೆಲಸ ಬಿಟ್ಟಿದ್ದೇಕೆ ಗೊತ್ತಾ..?!

ಅಲ್ಲಿ ಏನೆಲ್ಲಾ ಬಾಡಿಗೆ ಸಿಗುತ್ತೆ ಗೊತ್ತಾ..? ಜಪಾನಿಗರ ಬಾಡಿಗೆ ಪ್ರೀತಿ..!

ನಮ್ಮ ಶಂಕ್ರಣ್ಣ ಇನ್ನೂ ಇರಬೇಕಾಗಿತ್ತು..! ಹುಟ್ಟು ಹಬ್ಬದ ಶುಭಾಶಯಗಳು ಶಂಕ್ರಣ್ಣ..! ಶಂಕರ್ ನಾಗ್ ಮತ್ತೆ ಹುಟ್ಟಿಬನ್ನಿ…

ಆಕೆಗೂ ತಾನು ಗರ್ಭಿಣಿ ಅಂತ ಗೊತ್ತೇ ಇರ್ಲಿಲ್ಲ..! ಇದ್ದಕ್ಕಿದ್ದಂತೆ ಮಗು ಹುಟ್ಟಿ ಬಿಡುತ್ತೆ..!

ಒಂಬತ್ತು ವರ್ಷದ ಪೋರ ಕಂಪನಿಯೊಂದರ ಸಿಇಒ..! ಈ ಪೋರ ಆ್ಯಪ್ ಡೆವಲಪರ್, ಸೈಬರ್ ಸೆಕ್ಯುರಿಟಿ ಎಕ್ಸ್ ಪರ್ಟ್..!

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article