ಇವರು ಬೆಂಗಳೂರಿನ ಉಕ್ಕಿನ ಮನುಷ್ಯ..! ಇಂಥಾ ಕೆಲಸ ಮಾಡೋರು ತುಂಬಾ ಅಪರೂಪ..!

0
74

ಬೆಳಿಗ್ಗೆ ಎದ್ದು ಗಡಿಬಿಡಿಯಲ್ಲಿ ಆಫೀಸಿಗೆ ಹೋಗೋದು, ಸಂಜೆ ಆಯ್ತು ಅಂದ್ರೆ ಮನೆ ಸೇರಿಕೊಳ್ಳೋದನ್ನು ನೋಡೋದು..! ಅಷ್ಟುಬಿಟ್ರೆ ಬೇರೆ ಏನೂ ಮಾಡಲ್ಲ..! ದಾರಿಯಲ್ಲಿ ಯಾರಿಗಾದ್ರು ಆ್ಯಕ್ಸಿಡೆಂಟ್ ಆಗಿದ್ರೂ ಸುಮ್ಮನೇ ನೋಡ್ಕೊಂಡು ಹೋಗೋ ಜನರೇ ಜಾಸ್ತಿ..! ಇಂಥಾ ಹಲವಾರು ಜನರ ನಡುವೆ ಇಲ್ಲೊಬ್ಬರು ತುಂಬಾ ವಿಶೇಷ ಅನಿಸ್ತಾರೆ..! ನೀವು ಬೈಕಲ್ಲೋ ಕಾರಲ್ಲೋ ಬನಶಂಕರಿಯಿಂದ ಬೆಳಂದೂರಿಗೆ 45 ನಿಮಿಷದಲ್ಲಿ ಹೋಗ್ಬುದು..! ಐದು ನಿಮಿಷ ಹೆಚ್ಚು ಕಡಿಮೆ ಅಷ್ಟೇ..! ಆದ್ರೆ ಈ ವಿಶೇಷ ಬೆಂಗಳೂರಿಗರೊಬ್ಬರು 1ಗಂಟೆಗಿಂತಲೂ ಹೆಚ್ಚು ಸಮಯವನ್ನು ತೆಗೆದುಕೊಳ್ತಾರೆ..! ಇಷ್ಟೊಂದು ಸಮಯ ತಗೋಳ್ತಾರೆ ಅಂದ್ರೆ ಗಾಡಿ ಓಡ್ಸೋಕೆ ಬರಲ್ಲ ಅಂತ ಅನ್ಕೊಳ್ಬೇಡಿ..! ಇವರು ಇಷ್ಟು ನಿಧಾನಕ್ಕೆ ಹೋಗೋದ್ರಿಂದ ಅನೇಕ ಜನರ ವಾಹನಗಳ ಟೈಯರ್ಗಳು ಪಂಚರ್ ಆಗೋದು ತಪ್ಪಿದೆ..! ಸಣ್ಣ ಪುಟ್ಟ ಅಪಘಾತಗಳೂ ತಪ್ಪಿವೆ..! ಅಯ್ಯೋ ಇವರು ನಿಧಾನ ಹೋಗುವುದಕ್ಕೂ ಟೈಯರ್ ಪಂಚರ್ ಆಗೋದಕ್ಕೂ ಏನು ಸಂಬಂಧ..? ಇವರು ಹೇಗೆ ಅಪಘಾತ ತಪ್ಪಿಸ್ತಾ ಇದ್ದಾರೆ..? ಇಂಥಾ ಪ್ರಶ್ನೆಗಳಿಗೆ ಉತ್ತರ ಈ ಸ್ಟೋರಿಯಲ್ಲಿದೆ..!
ಇವರು “ಬೆಂಗಳೂರಿನ ಉಕ್ಕಿನ ಮನುಷ್ಯ”,ಐರನ್ ಮ್ಯಾನ್ ಆಫ್ ಬೆಂಗಳೂರು…! ಹೆಸರು, `ಬ್ಯಾನೆಡೆಕ್ಟ್ ಜೇಬಕುಮಾರ್’. ಬನಶಂಕರಿ ವಾಸಿ ಆಗಿರೋ ಇವರು ದಿನಾ ಬೆಳಿಗ್ಗೆ ಬೆಳಂದೂರಿಗೆ ಹೋಗುವಾಗ ಮತ್ತು ಅಲ್ಲಿಂದ ಸಂಜೆ ವಾಪಸ್ಸು ಆಗುವಾಗ ದಾರಿಯಲ್ಲಿ ಬಿದ್ದರುವ ಮೊಳೆಗಳು, ಕಬ್ಬಿಣದ ಚೂರುಗಳನ್ನು ಸಂಗ್ರಹಿಸ್ತಾರೆ..! ಹಂಗಂತ ಇವರು ಅದನ್ನು ಮಾರಿ ದುಡ್ಡು ಮಾಡ್ಬೇಕು ಅಂತ ಈ ಕೆಲಸ ಮಾಡ್ತಾ ಇಲ್ಲ..! ಬೆಂಗಳೂರಿಗೆ ಬಂದ ಆರಂಭದಲ್ಲಿ ಇವರು ದಿನಾ ಓಡಾಡುವಾಗ ಮೊಳೆಗಳನ್ನು ನೋಡ್ತಾ ಇದ್ರು..! ಆಮೇಲೆ ಇದರಿಂದ ಬೇರೆ ಯವರಿಗೆ ತೊಂದ್ರೆ ಆಗ್ತಾ ಇರೋದನ್ನು ತಿಳಿತಾರೆ..! ತೊಂದ್ರೆ ಆಗ್ತಾ ಇದ್ರೂ ಯಾರೂ ಆ ಬಗ್ಗೆ ಗಮನ ಕೊಡ್ತಾ ಇರ್ಲಿಲ್ಲ..! ಆಗಿನಿಂದಲೇ ಇವರು ದಾರಿಯಲ್ಲಿನ ಮೊಳಗಳನ್ನು ಸಂಗ್ರಹಿಸೋಕೆ ಶುರುಮಾಡಿದ್ರು..! ದಿನೇ ದಿನೇ ಸಂಗ್ರಹಿಸಿದ ಮೊಳೆಗಳನ್ನು ತನ್ನ “ಮೈ ರೋಡ್ ಮೈ ರೆಸ್ಪಾನ್ಸಿಬಿಲಿಟಿ’ ಅನ್ನೋ ತಮ್ಮ ಫೇಸ್ ಬುಕ್ ಪೇಜಲ್ಲಿ ಫೋಟೋ ಹಾಕಿ ದಾಖಲಿಸ್ತಾ ಬಂದಿದ್ದಾರೆ..! 2014ರಿಂದ ಇಲ್ಲಿಯವರೆಗಿನ ದಾಖಲೆ ಪ್ರಕಾರ ಬರೊಬ್ಬರಿ ಕೇವಲ ಬನಶಂಕರಿ- ಬೆಳಂದೂರು ರಸ್ತೆಯಲ್ಲಿ ಓಡಾಡುತ್ತಾ ಸಂಗ್ರಹಿಸಿದ ಮೊಳೆಯೇ 6 ಕೆ.ಜಿ..!
ನೋಡಿದ್ರಲ್ಲಾ ಇವರು ಮಾಡೋ ಸಣ್ಣ ಕೆಲಸ ಇದಾಗಿರ ಬಹುದು..! ಆದರೆ ಇಂಥಾ ಕೆಲಸ ಮಾಡೋರು ತುಂಬಾ ಅಪರೂಪ ಅಲ್ವೇನ್ರೀ..! ಇಂಥವರನ್ನು ಗುರುತಿಸಿ ಪ್ರೋತ್ಸಾಹಿಸೋ ಕೆಲಸ ನಮ್ಮಿಂದ ಆಗಬೇಕಿದೆ..! ಇವರಿಗೆ ಶುಭಕೋರಿ. ಇವರ ಫೇಸ್ ಬುಕ್ ಪೇಜ್ MyRoadMyResponsibility ಯನ್ನು ನೋಡಿ ಇಷ್ಟವಾದ್ರೆ ಲೈಕ್ ಮಾಡಿ..! ಇವರ ಚಟುವಟಿಕೆಗಳನ್ನು ನೋಡ್ತಾ ಇರಿ..!

  • ಶಶಿಧರ ಡಿ ಎಸ್ ದೋಣಿಹಕ್ಲು

If you Like this Story , Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : [email protected]

POPULAR  STORIES :

ಈತನೇ ನೋಡಿ ವಿಶ್ವದ ಅತಿ ಶ್ರೀಮಂತ ಕ್ಷೌರಿಕ..! ಈತನ ಬಳಿ ಇವೆ 250ಕ್ಕೂ ಹೆಚ್ಚು ಐಶಾರಾಮಿ ಕಾರುಗಳು..!

ಅಹಂಕರಾರ, ಹಠಮಾರಿತನ ಕೊಂದ ಪ್ರೀತಿ ಇದು..! ಈ ಸ್ಟೋರಿ ಓದಿದ್ರೆ, ಖಂಡಿತಾ ನೀವು ನಿಮ್ಮ ಪ್ರೀತಿಯನ್ನು, ಸ್ನೇಹವನ್ನೂ ಉಳಿಸಿಕೊಳ್ತೀರ..!

ವಿದೇಶಿಯರ ಬಾಯಲ್ಲೂ ಕನ್ನಡ ಕನ್ನಡ ಕನ್ನಡ..! ವಿದೇಶಿ ಮಹಿಳೆಯೊಬ್ಬರು ಹಚ್ಚೇವು ಕನ್ನಡದ ದೀಪ.. ಅಂತ ಹಾಡ್ತಾ ಇದ್ದಾರೆ..!

ಲಾಭದಾಯಕ ಕೆಲಸವನ್ನು ಬಿಟ್ಟು ಬಂದವರು..! ಅಷ್ಟಕ್ಕೂ ಇವರೆಲ್ಲಾ ಕೆಲಸ ಬಿಟ್ಟಿದ್ದೇಕೆ ಗೊತ್ತಾ..?!

ಅಲ್ಲಿ ಏನೆಲ್ಲಾ ಬಾಡಿಗೆ ಸಿಗುತ್ತೆ ಗೊತ್ತಾ..? ಜಪಾನಿಗರ ಬಾಡಿಗೆ ಪ್ರೀತಿ..!

ನಮ್ಮ ಶಂಕ್ರಣ್ಣ ಇನ್ನೂ ಇರಬೇಕಾಗಿತ್ತು..! ಹುಟ್ಟು ಹಬ್ಬದ ಶುಭಾಶಯಗಳು ಶಂಕ್ರಣ್ಣ..! ಶಂಕರ್ ನಾಗ್ ಮತ್ತೆ ಹುಟ್ಟಿಬನ್ನಿ…

ಆಕೆಗೂ ತಾನು ಗರ್ಭಿಣಿ ಅಂತ ಗೊತ್ತೇ ಇರ್ಲಿಲ್ಲ..! ಇದ್ದಕ್ಕಿದ್ದಂತೆ ಮಗು ಹುಟ್ಟಿ ಬಿಡುತ್ತೆ..!

ಒಂಬತ್ತು ವರ್ಷದ ಪೋರ ಕಂಪನಿಯೊಂದರ ಸಿಇಒ..! ಈ ಪೋರ ಆ್ಯಪ್ ಡೆವಲಪರ್, ಸೈಬರ್ ಸೆಕ್ಯುರಿಟಿ ಎಕ್ಸ್ ಪರ್ಟ್..!

LEAVE A REPLY

Please enter your comment!
Please enter your name here