ನೀವಿನ್ನೂ ‘ಟಕಿಲ’ ನೋಡಿಲ್ವಾ…?

admin
By admin
1 Min Read

ಕನ್ನಡದ ರ್ಯಾಪರ್ ಚಂದನ್ ಶೆಟ್ಟಿ ಅವರ ಹೊಸ ವೀಡಿಯೋ ಸಾಂಗ್ ನಿನ್ನೆ ರಿಲೀಸ್ ಆಗಿದೆ. ಅದುವೇ ಟಕಿಲ. ಅತ್ತ ಕನ್ನಡ ಬಿಗ್ ಬಾಸ್ ಸೀಸನ್ 5ರಲ್ಲಿ ಸ್ಪರ್ಧಿಸಿರೋ ಚಂದನ್ ಬಿಗ್ ಬಾಸ್ ಮನೆಯಲ್ಲಿ ಚೆನ್ನಾಗಿ ಆಡ್ತಿದ್ದಾರೆ. ವೀಕ್ಷಕರ ನೆಚ್ಚಿನ ಸ್ಪರ್ಧಿಯಾಗಿದ್ದಾರೆ. ಇತ್ತ ಚಂದನ್ ಅವರ ಹೊಸ ವೀಡಿಯೋ ಸಾಂಗ್ ರಿಲೀಸ್ ಆಗಿದೆ.


‘ನನ್ ಪಾಡಿಗೆ ನಾನ್ ಇದ್ದೆ ಶಾಣಿ ಮಕ್ಳ ನಿಮ್ಮ ಸಂಘ ಸೇರಿ ಹಾಳಾದೆ..’ ಅಂತ ‘ಮೂರೇ ಮೂರು ಪೆಗ್ಗಿಗೆ ತಲೆ ಗಿರ ಗಿರ ಗಿರ ಗಿರ ಅಂದಿದೆ..’ ಎನ್ನುತ್ತಾ ‘ಸಖತ್ ಚಾಕಲೇಟ್ ಗರ್ಲ್ ಇವಳು ಸಖತ್ ಚಾಕ್ಲೇಟ್ ಗರ್ಲ್’ ಅಂತ ಸಿಕ್ಕಾಪಟ್ಟೆ ಸದ್ದು ಮಾಡಿರೋ ಚಂದನ್ ಈಗ ‘ ಎಲ್ಲಾರೂ ಸೇರಿ ಇಂದು ಎಣ್ಣೆ ಹಾಕುವ.. ಗಂಗವ್ವ ಬರ್ತ ಬಿಂದ್ಗೆ ನೀರು ತಾರವ್ವ’ ಅಂತ ಮತ್ತೊಂದು ಸಖತ್ತಾಗಿರೋ ರ್ಯಾಪ್ ಸಾಂಗ್ ಮೂಲಕ ಬಂದಿದ್ದಾರೆ…! ನಿನ್ನೆಯಷ್ಟೇ ರಿಲೀಸ್ ಆಗಿರೋ ಈ ಟಕಿಲ ವೀಡಿಯೋ ಸಾಂಗನ್ನು 7 ಲಕ್ಷಕ್ಕು ಅಧಿಕ ಮಂದಿ ವೀಕ್ಷಿಸಿದ್ದಾರೆ…! ಹಾಡು ನಿಜಕ್ಕೂ ಸಖತ್ ಆಗಿದೆ…! ನೀವಿನ್ನೂ ನೋಡಿಲ್ಲ ಅಂತಾದ್ರೆ ಈಗಲೇ ನೋಡಿ…

 

Share This Article