ಶಿವಣ್ಣ ವಿರುದ್ಧ ಅಸಮಧಾನ ಹೊರಹಾಕಿದ ಹುಚ್ಚ ವೆಂಕಟ್…! ಇನ್ಯಾವತ್ತೂ ನಿಮ್ಮ‌‌ ಮನೆಮುಂದೆ ಬರಲ್ಲ, ಇನ್ನಾದರೂ ಅಭಿಮಾನಿಗಳಿಗೆ ನೀರು ಕೊಡಿ ಅಂದ ವೆಂಕಟ್…!

Date:

ನಟ ಹುಚ್ಚವೆಂಕಟ್ ಕರುನಾಡ ಚಕ್ರವರ್ತಿ , ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ವಿರುದ್ಧ ಅಸಮಧಾನ ಹೊರಹಾಕಿದ್ದಾರೆ.
ಫೇಸ್ ಬುಕ್ ನಲ್ಲಿ ವೆಂಕಟ್ ವೀಡಿಯೋ ವೊಂದನ್ನು ಹರಿಬಿಟ್ಟು ಶಿವರಾಜ್ ಕುಮಾರ್ ವಿರುದ್ಧ ಮಾತಾಡಿದ್ದಾರೆ.


‘ಶಿವರಾಜ್ ಕುಮಾರ್ ಅವರೇ ನಾನು‌ ಎರಡು ದಿನದಿಂದ ನಿಮ್ಮನ್ನು ಭೇಟಿ ಮಾಡ್ಬೇಕು ಅಂತ ಪ್ರಯತ್ನ ಪಡ್ತಿದ್ದೀನಿ. ನಿಮ್ಮ ಡ್ರೈವರ್ ನಂಬರ್ ತಗೊಂಡೆ, ನಾನು ಯಾರನ್ನೂ ಭೇಟಿ ಮಾಡಲ್ಲ. ಏಕಂದ್ರೆ ವಿಷ್ಣುವರ್ಧನ್ ಅವರನ್ನು ಬಿಟ್ಟರೆ ಸಿನಿಮಾ ರಂಗದಲ್ಲಿ ಯಾರನ್ನೂ ಇಷ್ಟಪಟ್ಟಿಲ್ಲ, ಇಷ್ಟಪಡಲ್ಲ. ಆದರೆ ಈಗ ನಿಮ್ಮನ್ನೆಲ್ಲಾ ಇಷ್ಟಪಡಬೇಕು ಅಂತ ಆಸೆಪಟ್ಟೆ. ನಿಮ್ಮ ಡ್ರೈವರ್ ನಂಬರ್ ತಗೊಂಡ್ರೆ ಅವನು ಹೇಗೆ ಕಟ್ ಮಾಡ್ತಾನೆ ಗೊತ್ತಾ? ಫೋನ್ ಕಟ್ ಮಾಡ್ಲಿ, ನಾನು ಎದುರುಗಡೆ ಇರುವಾಗ ಅವನೇ ಇರಲ್ಲ…!

ಆಮೇಲೆ ನೆಕ್ಸ್ಟ್ ನಿನ್ನೆ ನಿಮ್ ಜೊತೇನೆ ಇದ್ದ ನಿಮ್ ಡ್ರೈವರ್. ಫೋನ್ ಒಂದ್ ಗಂಟೇಲಿ ಕೊಡ್ತೀನಿ ಅಂದ. ಮನೆ ಹತ್ರ ಬಂದೆ. ನೀವು ಬಿಟ್ಟಿದ್ದೀರಿ ಅಂತ ಗೊತ್ತಾಯ್ತು. ಆಮೇಲೆ ಶಿವರಾಜ್ ಕುಮಾರ್ ಅವರೇ ಫೋನ್ ಮಾಡ್ತಾರಂತೆ. ಅವ್ರಿಗೆ ನಂಬರ್ ಕೊಟ್ಟಿದ್ದೀನಿ ಅಂದ ಅದು ಬೇಜಾರಾಯ್ತು.‌ ಒಂದೇ ಒಂದು ನಿಮಿಷ ನನ್ ಜೊತೆ ಮಾತಾಡಕ್ಕೆ ಆಗಲ್ವಲ್ಲ ಶಿವರಾಜ್ ಕುಮಾರ್ ಅವರೇ. ನನ್ ಮೇಲೆ ಅಷ್ಟೂ ಪ್ರೀತಿ ಇಲ್ವ? ಮತ್ತೆ ನಾನ್ಯಾಕೆ ನಿಮ್ಮನ್ನು ಅಷ್ಟು ಪ್ರೀತಿಸ್ಬೇಕು. ಬೇರೆ ಅವ್ರನ್ನ ವಿರೋಧ ಕಟ್ಕೋ ಬೇಕು. ಸೂರಿ ಅಂತವರನ್ನು ಬೈಬೇಕು.

ಪಕ್ಕದಲ್ಲೇ ಇದ್ರಂತೆ ಅವ್ನಂದ. ಸಾರ್ ಗೆ ಕೊಟ್ಟೆ ಅವ್ರೇ ಫೋನ್ ಮಾಡ್ತಾರಂತೆ ಅಂದ. ನೀವು ಫೋನ್ ಮಾಡಿಲ್ಲ. ನಿಮ್ಮ ಬಾಡಿಗಾರ್ಡ್ ಗೆ ಫೋನ್ ಮಾಡಿದ್ರೆ ಪೂರ್ತಿ ಮಾತಾಡಕ್ಕೇ ಬಿಡದೆ ಕಟ್ ಮಾಡ್ ಬಿಡ್ತಾನೆ. ಈ ಮಾತುಗಳನ್ನು ನಾನ್ಯಾಕೆ ಹೇಳ್ತಿದ್ದೀನಿ ಗೊತ್ತಾ? ಇದು ನನ್ನ ಸ್ಟೈಲ್ ಅಲ್ಲ. ಎಷ್ಟೋ ಜನ ಆಶ್ಚರ್ಯ ಪಡಬಹುದು.‌ ನನ್ನ ಸ್ಟೈಲ್ ಏನು ಅಂತ ಎಲ್ರಿಗೂ ಗೊತ್ತು. ಆದರೆ, ನನಗೆ ಆಗಿರೋದಿಲ್ಲಿ ನೋವು‌. ಕೋಪ ಅಲ್ಲ ನೋವು. ನಾನು ಯಾರನ್ನು ಬಹಳಾ ಪ್ರೀತಿಸ್ತೀನೋ ಅವ್ರು ನನ್ನ ಮಿಸ್ ಯೂಸ್ ಮಾಡಿಕೊಳ್ತಾರಲ್ವಾ? ವಿಷ್ಣುವರ್ಧನ್ ಅವ್ರು ಸಾಕು ನನಗೆ. ಕನ್ನಡ ಇಂಡಸ್ಟ್ರಿಲಿ ಇನ್ಯಾವ ಆರ್ಟಿಸ್ಟ್ ಬೇಡ. ಮೊದಲನೇ ಟೈಮ್ ನನ್ನ ಜೀವನದಲ್ಲಿ ವಿಷ್ಣುವರ್ಧನ್ ಅವರನ್ನು ಬಿಟ್ಟು , ಅಂದ್ರೆ ಮರೆತಲ್ಲ ಅವರನ್ನು ಬಿಟ್ಟು ಇನ್ನೊಬ್ಬ ಆರ್ಟಿಸ್ಟ್‌ ನ ಇಷ್ಟಪಡೋಕೆ ಹೋದೆ. ಇವತ್ತು ವಿಷ್ಣುವರ್ಧನ್ ಅವ್ರು ತಿಳಿಸಿಕೊಟ್ರು ನನ್ ಥರ ಎಲ್ಲಾ ಇರಲ್ಲ. ಅದನ್ನೀಗ ನನಗೆ ಜ್ಞಾಪಿಸಿದ್ರಿ ಶಿವರಾಜ್ ಕುಮಾರ್ ಅವರೇ.

ಇನ್ಯಾವತ್ತೂ ಬರಲ್ಲ. ಅಟ್ಲೀಸ್ಟ್ ಮನೆವರೆಗೆ ಯಾರಾದ್ರೂ ಬಂದ್ರೆ ನಿಮ್ ಸೆಕ್ಯುರಿಟಿ ಗಾರ್ಡ್ ಗೆ ಹೇಳಿ, ಒಂದು ಗ್ಲಾಸ್ ನೀರು ಕುಡಿಯೋಕೆ ಕೊಡೋಕೆ. ನೀರಿಗೆ ಬರ ಇದ್ರೆ ಈ ಹುಚ್ಚವೆಂಕಟ್ ನಂಬರ್ ಗೆ ಕಾಲ್ ಮಾಡೋಕೆ‌ ಹೇಳಿ. ಟ್ಯಾಂಕರ್ ಕಳುಹಿಸ್ತೀನಿ.‌ಅದು ಎಷ್ಟು ಟ್ಯಾಂಕ್ ಬೇಕು ಅಷ್ಟು. ಒಂದು ಅಭಿಮಾನಿಗೆ ನೀರು ಕೊಡ್ಲಿಲ್ಲ ಅಂದ್ರೆ ತಪ್ಪು. ನಾನು ಹುಚ್ಚವೆಂಕಟ್. ಯಾವ ಹುಚ್ಚವೆಂಕಟ್ ನಿಮ್ಮ ಪರವಾಗಿ ನಿಂತ್ನೋ, ಒಂದ್ ಗ್ಲಾಸ್ ನೀರಿಲ್ಲ, ಗೇಟ್ ಕೂಡ ತೆಗೆಯಲ್ಲ, ಮನೆಗೇಟು. ನಾ ಬರ್ಬಾದಿತ್ತು. ಇನ್ಯಾವತ್ತೂ ಬರಲ್ಲ‌ ಶಿವರಾಜ್ ಕುಮಾರ್ ಅವರೇ.


ನೀವು ಫೋನ್ ಮಾಡ್ತೀನಿ ಅಂದ್ರಿ ಅಂತ ನಿಮ್ಮ ಡ್ರೈವರ್ ಹೇಳಿದ್ರು. ಫೋನ್ ಮಾಡಿಲ್ಲ. ಚೆನ್ನಾಗಿರಿ, ಹುಚ್ಚವೆಂಕಟ್ ವ್ಯಾಲ್ಯೂ ಯಾವತ್ತು ಕಮ್ಮಿ ಆಗಿಲ್ಲ,ಕಮ್ಮಿ ಆಗಲ್ಲ. ಆದ್ರೆ, ಇವತ್ತು ನನಗೆ ಗೊತ್ತಾಗಿದ್ದು ವಿಷ್ಣುವರ್ಧನ್ ಅವ್ರು ಬಿಟ್ರೆ ನನಗೆ ಆಗೋದು ಮಾಧ್ಯಮವ್ರು, ಪತ್ರಕರ್ತರು, ಮೀಡಿಯಾ, ಪ್ರೆಸ್ . ಯಾಕಂದ್ರೆ ಹುಚ್ಚವೆಂಕಟ್ ಮನೆಯವ್ರಿಗೇ ಬರೋಕೆ ಬಿಡಲ್ಲ. ಹುಚ್ಚವೆಂಕಟ್ ನ ಮನೆಗೆ ಬಂದು ಎತ್ತಾಕ್ಕೊಂಡು ಹೋಗ್ತಾರೆ. ನನ್ನ ಈಗೋ ನೆಸ್, ಅಹಂಕಾರ, ದುರಾಹಂಕಾರ ಎಲ್ಲಾ ಬಿಟ್ಟಿ ನಿಮ್ ಮನೆಮುಂದೆ ನಿಂತು ಮಾತಾಡ್ತಿದ್ದೀನಿದು. ಇದು ಎರಡನೇ ದಿನ ನಿಮ್ಮ ಮನೆಮುಂದೆ ಬಂದಿರೋದು. ಇನ್ಯಾವತ್ತೂ ಬರಲ್ಲ. ಬಂದೋರಿಗೆ ನೀರು ಕೊಡೋದನ್ನು ಮರಿಬೇಡಿ. ಹುಚ್ಚವೆಂಕಟ್ ಪೆಪ್ಸಿ ಕೊಟ್ಟವನೇ, ತಂಬ್ಸಪ್ ಕೊಟ್ಟವನೆ‌, ಟೀ ಕೊಟ್ಟವನೆ, ಕಾಫಿ ಕೊಟ್ಟವನೇ ಅಭಿಮಾನಿಗಳಿಗೆ. ನನಗೆ ನೀರುಕೊಟ್ಟಿಲ್ಲ ಅಂತ ಬೇಜಾರಿಲ್ಲ. ಅಭಿಮಾನಿಗಳಿಗಾದ್ರು ನೀರುಕೊಡೋಕೆ ಹೇಳಿ ನಿಮ್ಮ ಸೆಕ್ಯುರಿಟಿ ಗಾರ್ಡ್ ಗಳಿಗೆ ಎಂದಿದ್ದಾರೆ.

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...