No menu items!
19.6 C
Munich
Tuesday, April 28, 2026

ಬಡಪಾಯಿಗೆ ಬಂತು 2032 ಕೋಟಿ ರೂಪಾಯಿ ಕರೆಂಟ್ ಬಿಲ್

Must read

ಸಾಮಾನ್ಯವಾಗಿ ಮನೆ, ಸಣ್ಣ ಪುಟ್ಟ ವ್ಯಾಪಾಸ್ಥರಿಗೆ ಅಬ್ಬಬ್ಬಾ ಎಂದರೆ ಸಾವಿರಗಳ ಲೆಕ್ಕದಲ್ಲಿ ವಿದ್ಯುತ್ ಬಿಲ್ ಬರಬಹುದು. ಆದರೆ ಕೆಲವೊಮ್ಮೆ ತಾಂತ್ರಿಕ ಕಾರಣಗಳಿಂದ ದುಬಾರಿ ಮೊತ್ತದ ವಿದ್ಯುತ್ ಬಿಲ್ ಕೂಡ ಬಂದಿರುವ ಬಗ್ಗೆ ಹಲವಾರು ಘಟನೆಗಳನ್ನು ನೋಡಿದ್ದೇವೆ. ಅದು ಕೆಲವು ಕೋಟಿಗಳ ಲೆಕ್ಕದಲ್ಲಿ ಇದ್ದಿದ್ದನ್ನೂ ನೋಡಿದ್ದೇವೆ. ಆದರೆ 2032 ಕೋಟಿ ರೂಪಾಯಿ ಮೊತ್ತದ ವಿದ್ಯುತ್ ಬಿಲ್ ಬಂದಿದ್ದನ್ನು ನೋಡಿದ್ದೀರಾ..? ಬಹುಶಃ ಇಲ್ಲ ಅನ್ನಿಸುತ್ತದೆ. ಆದರೆ ಇಲ್ಲೊಬ್ಬರಿಗೆ ಅಷ್ಟು ದೊಡ್ಡ ಮೊತ್ತದ ವಿದ್ಯುತ್ ಬಂದು ಅಚ್ಚರಿಗೆ ಕಾರಣವಾಗಿದೆ.
ವಿದ್ಯುತ್ ಇಲಾಖೆಯ ಯಡವಟ್ಟಿನಿಂದ ಸಣ್ಣ ವ್ಯಾಪಾರಸ್ಥರೊಬ್ಬರಿಗೆ ಬಂದಿರುವ ಬೃಹತ್ ಮೊತ್ತದ ಬಿಲ್ ಕಂಡು ಪರಾಗ್ ಎಂಬುವವರು ಹೌಹಾರಿದ್ದಾರೆ. ಹರಿಯಾಣದ ಮುರಾದಾಬಾದ್ ನಲ್ಲಿ ಹಿಟ್ಟಿನ ಗಿರಣಿ ನಡೆಸುತ್ತಿರುವ ಪರಾಗ್ ಗೆ ವಿದ್ಯುತ್ ವಿತರಣಾ ಕಂಪನಿಯು ಬರೋಬ್ಬರಿ 2032 ಕೋಟಿ ರೂಪಾಯಿ ವಿದ್ಯುತ್ ಬಿಲ್ ಕಳುಹಿಸಿದೆ.
2032 ಕೋಟಿ ರೂ. ವಿದ್ಯುತ್ ಬಿಲ್ ಬಂದಿರುವುದನ್ನು ಸರಿಪಡಿಸಿಕೊಡಬೇಕೆಂದು ಪರಾಗ್ ಸಂಬಂಧಿಸಿದ ಕಚೇರಿಗೆ ಅಲೆದಾಡಿದ್ದು, ಈ ರೀತಿಯ ಪ್ರಕರಣಗಳಲ್ಲಿ ಸಾಮಾನ್ಯವಾಗಿ ಹೇಳುವಂತೆ ಅಧಿಕಾರಿಗಳು ತಾಂತ್ರಿಕ ಸಮಸ್ಯೆಯಿಂದ ಹೀಗಾಗಿದೆ ಎಂದು ಸಿದ್ಧ ಉತ್ತರ ನೀಡಿದ್ದಾರೆ.

  • ರಾಜಶೇಖರ ಜೆ

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article