ಈ ವೀಡಿಯೋ ನೋಡಿದ್ರೆ ಹೆಲ್ಮೆಟ್ ಹಾಕಿಕೊಳ್ದೆ ನೀವು ಬೈಕ್ ಸವಾರಿ ಮಾಡಲ್ಲ…!

Must read

ಹೆಲ್ಮೆಟ್ ಹಾಕಿಕೊಂಡ್ರೆ ಜೀವ ಉಳಿಯುತ್ತೆ ಎಂಬುದಕ್ಕೆ ಈ ವೀಡಿಯೋವೇ ಸಾಕ್ಷಿ‌…!
ಲಾರಿಯಡಿ ಬಿದ್ದು , ಆ ಲಾರಿಯ ಹಿಂಬದಿ ಚಕ್ರ ಆ ಬೈಕ್ ಸವಾರನ ಮೇಲೆ ಹರಿದರೂ ಆತ ಎದ್ದು ನಿಂತ ಆಶ್ಚರ್ಯಕರ ಘಟನೆಯೊಂದು ಫಿಲಿಪೈನ್ಸ್ ನಲ್ಲಿ ನಡೆದಿದೆ.
ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಫಿಲಿಪೈನ್ಸ್ ನ ಕೈಂಟಾ ನಗರದಲ್ಲಿ ಲಾರಿಯೊಂದು ಚಲಿಸುತ್ತಿರುವಾಗ ಬೈಕ್ ಸವಾರನೊಬ್ಬ ಲಾರಿಯನ್ನು ಓವರ್ ಟೇಕ್ ಮಾಡಿ ಮುಂದೆ ಹೋಗಲು ಯತ್ನಿಸಿದ್ದಾನೆ. ಆಗ ಆಯತಪ್ಪಿ ಬಿದ್ದು ಲಾರಿ ಅಡಿ ಸಿಲುಕಿದ್ದಾನೆ. ಲಾರಿಯ ಚಕ್ರ ಆತನ ಮೇಲೆ ಹರಿದಿದೆ. ಆದರೆ, ಕೆಲವೇ ಸೆಕೆಂಡ್ ಗಳಲ್ಲಿ ಆತ ಎದ್ದು ನಿಂತಿದ್ದಾನೆ. ಹೆಲ್ಮೆಟ್ ಆತನ ಜೀವ ಉಳಿಸಿದೆ. ನೀವು ಈ ವೀಡಿಯೋ ನೋಡಿದ ಬಳಿಕ ಹೆಲ್ಮೆಟ್ ಕಡ್ಡಾಯವಾಗಿ ಧರಿಸ್ತೀರಿ…! ಹೆಲ್ಮೆಟ್ ಧರಿಸಿ ಪ್ರಾಣ ಕಾಪಾಡಿಕೊಳ್ಳಿ‌ .‌

- Advertisement -spot_img

More articles

- Advertisement -spot_img

Latest article