No menu items!
11.1 C
Munich
Wednesday, April 29, 2026

ಈ ಪಾನ್ ಗೆ ಬೆಂಕಿ ಹಚ್ಕೊಂಡ್ ತಿನ್ನಬೇಕಂತೆ..! ಸಖತ್ ಫೇಮಸ್ ಆಗಿದೆ ಬೆಂಕಿ ಬೀಡಾ ಶಾಪ್..!

Must read

ಪಾನ್ ನಲ್ಲಿ ಏನೇನು ಇರುತ್ತದೆ ಎಂದು ಪ್ರಶ್ನೆ ಕೇಳಿದರೆ ಎಲೆ, ಅಡಕೆ, ಸುಣ್ಣ ಇತ್ಯಾದಿ ಇತ್ಯಾದಿ ಅಂತ ಹೇಳಬಹುದು. ಪಾನ್ ಬೀಡಾ ಅಥವಾ ಎಲೆ ಅಡಿಕೆ ನಮ್ಮ ಸಾಂಪ್ರದಾಯಿಕ ಮೌತ್ ಫ್ರೆಶ್ನರ್ ಆಗಿ ಗುರುತಿಸಿಕೊಂಡಿದೆ. ಭಾರತ, ಬಾಂಗ್ಲಾದೇಶ, ನೇಪಾಳ, ಶ್ರೀಲಂಕಾ ಮತ್ತು ವಿಯೆಟ್ನಾಂ ದೇಶಗಳ ಜನರಿಗೆ ಎಲೆ ಅಡಿಕೆ ಅಥವಾ ಪಾನ್ ಬೀಡ ಜೀವನದ ಒಂದು ಭಾಗ. ಈ ಎಲೆ ಅಡಿಕೆ ತಿನ್ನುವುದಕ್ಕೂ ಒಂದಷ್ಟು ವಿಧಾನಗಳಿವೆ. ಹಲವು ವಸ್ತುಗಳ ಮಿಶ್ರಣದಿಂದ ಎಲೆ ಅಡಿಕೆ ಸಿದ್ಧವಾಗುತ್ತದೆ. ಆದರೆ, ಈ ಸಾಂಪ್ರದಾಯಿಕ ಪದ್ಧತಿಯನ್ನು ಬಿಟ್ಟು ಬೇರೊಂದು ಪದ್ಧತಿ ಈಗ ಬೆಳಕಿಗೆ ಬರುತ್ತಿದೆ. ಅದೇ `ಫ್ಲೇಮಿಂಗ್ ಪಾನ್’ ಅಥವಾ `ಫೈರ್ ಪಾನ್’. ಅಂದರೆ, ಬೆಂಕಿಯಿಟ್ಟು ಪಾನ್ ತಿನ್ನುವುದು..!
ಯೆಸ್.. ನಮ್ಮದೇ ದೇಶದ ರಾಜ್ಕೋಟ್ನಲ್ಲಿ ಈ ಪ್ರಯತ್ನ ನಡೆದಿದ್ದು, ಭರ್ಜರಿ ಯಶಸ್ಸು ಕಂಡಿದೆ..! ಈ ಪಾನ್ ನ್ನು ರಾಜ್ ಕೋಟ್ ನ ಚಿನ್ನಿ ಲಾಲ್ ಎಂಬುವವರ ಶಾಪ್ ನಲ್ಲಿ ಮಾರಾಟ ಮಾಡಲಾಗುತ್ತಿದ್ದು, ಪಾನ್ ಗೆ ಲವಂಗವನ್ನು ಸಿಕ್ಕಿಸಿ ಅದಕ್ಕೆ ಬೆಂಕಿಹಚ್ಚುತ್ತಾರೆ. ಅದನ್ನು ನೇರವಾಗಿ ಬಾಯಿಗೆ ಹಾಕಿಕೊಂಡು ಸವಿಯಬೇಕು. ವಿಶೇಷವೆಂದರೆ ಈ ಪಾನ್ ನ್ನು ತಿನ್ನಲು ಹೆಚ್ಚಿನ ಸಂಖ್ಯೆಯ ಜನರು ಆಗಮಿಸುತ್ತಿದ್ದಾರೆ.
ಚಿನ್ನಿಲಾಲ್ ರವರು ಕಳೆದ ಮೂವತ್ತು ವರ್ಷಗಳಿಂದ ಪಾನ್ ಮಾರಾಟ ಮಾಡುತ್ತಿದ್ದಾರೆ. ಈ ಬೆಂಕಿಪಾನ್ ನ್ನು ಕಳೆದ 8 ವರ್ಷದಿಂದ ಮಾರುತ್ತಿದ್ದಾರೆ. ಇದು ಸಖತ್ ಫೇಮಸ್ ಆಗಿದ್ದು, ಹೆಚ್ಚು ಹೆಚ್ಚು ಮಾರಾಟವಾಗುತ್ತಿದೆ ಎಂದು ಅವರು ಹೇಳುತ್ತಾರೆ.

  • ರಾಜಶೇಖರ ಜೆ

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

ಇಬ್ಬರ ಜೇಬಲ್ಲೂ ಉಳಿದಿದ್ದು ಮುನ್ನೂರು ರೂಪಾಯಿ ಮಾತ್ರ..! ಆದ್ರೆ…..

ಸಿಸಿಟಿವಿಯಲ್ಲಿ ಸೆರೆಯಾಯ್ತು ಸೊಸೆಯ ಕ್ರೌರ್ಯ..! ಸೊಸೆಯಿಂದಲೇ ಅತ್ತೆ ಮೇಲೆ ಮಾರಣಾಂತಿಕ ಹಲ್ಲೆ..!

ಇವರು ದಿನನಿತ್ಯ 100 ಮಂದಿಗೆ ಅನ್ನ ನೀಡುವ ಮಹಾದಾನಿ..! ಹಸಿದವರ ಹಸಿವನ್ನು ನೀಗಿಸೋ ಅನ್ನದಾತ ಅಜರ್..!

ಈ ಕನ್ನಡತಿ ಆಟೋ ಓಡಿಸುತ್ತಲೇ ಐಎಎಸ್ ಗೆ ತಯಾರಿ ನಡೆಸುತ್ತಿದ್ದಾರೆ..!

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article