ಏನಿದು ಫೇಸ್ ಬುಕ್ ವಾರ್ ರೂಂ..!

Date:

ಚುನಾವಣಾ ಸಮಯದಲ್ಲಿ ಫೇಸ್​ಬುಕ್​ ದುರ್ಬಳಕೆ ಆಗುತ್ತಿರುವುದನ್ನು, ತಪ್ಪು ಮಾಹಿತಿಗಳು, ಹಾನಿಕಾರಕ ವಿಷಯಗಳು ಹರುಡುವುದನ್ನುನಿಯಂತ್ರಣ ಮಾಡಲು ಫೇಸ್​ಬುಕ್​ನ ಮೆನ್ಲೋ ಪಾರ್ಕ್ ಪ್ರಧಾನ ಕಚೇರಿಯಲ್ಲಿ ವಾರ್​ ರೂಂನ್ನು ಸ್ಥಾಪಿಸಿದೆ.

ಯಾವುದೇ ಅನುಮಾನಾಸ್ಪದ ಚಟುವಟಿಕೆಗಳನ್ನು ಗುರುತಿಸಿ ಅದನ್ನು ತಡೆಯುವ ನಿಟ್ಟಿನಲ್ಲಿ ಸ್ಥಾಪಿತವಾದ ವಾರ್ ರೂಂನಲ್ಲಿ 20 ಮಂದಿ ಸದಾ ಕಾರ್ಯಾನ್ಮುಖರಾಗಿರುತ್ತಾರೆ‌.

ಕ್ಯಾಲಿಫೋರ್ನಿಯಾದ ಮೆನ್ಲೋಪಾರ್ಕ್​ನಲ್ಲಿ ಸ್ಥಾಪಿತವಾದ ಈ ಫೇಸ್​ಬುಕ್​ ವಾರ್​ ರೂಂ ಮುಖ್ಯವಾಗಿ ಯುನೈಟೆಡ್​ ಸ್ಟೇಟ್ಸ್​ ಹಾಗೂ ಮತ್ತಿತರ ಕಡೆಗಳಲ್ಲಿ ನಡೆಯಲಿರುವ ಚುನಾವಣೆಯ ಮೇಲೆ ಫೇಸ್​ಬುಕ್​ ಮೂಲಕ ಪ್ರಭಾವ ಬೀರಲು ಪ್ರಯತ್ನಿಸುತ್ತಿರುವ ವಿದೇಶಿ ಕುಶಲಮತಿಗಳು ತಪ್ಪು ಮಾಹಿತಿ ಬಿತ್ತರಿಸುವುದರ ವಿರುದ್ಧ ಹೋರಾಡಲಿದೆ.

ವಾರ್​ರೂಂನ ಒಳಗೋಡೆಗಳಲ್ಲಿ ಹಲವು ಗಡಿಯಾರಗಳಿದ್ದು, ಅವು ಯುಎಸ್​ ಹಾಗೂ ಬ್ರೆಜಿಲ್​ನ ವಿವಿಧ ಪ್ರದೇಶಗಳ ಸಮಯವನ್ನು ತೋರಿಸುತ್ತವೆ. ಮ್ಯಾಪ್​ ಮತ್ತು ಟಿವಿ ಪರದೆಗಳ ಮೇಲೆ ಸಿಎನ್​ಎನ್​, ಫಾಕ್ಸ್ ನ್ಯೂಸ್​, ಟ್ವಿಟರ್​ಗಳು ಕಾಣಿಸುತ್ತವೆ. ಹಾಗೇ ಮತ್ತೊಂದು ಮಾನಿಟರ್ ನೈಜ ಸಮಯದ​ ಫೇಸ್​ಬುಕ್​ ಚಟವಟಿಕೆಯ ಗ್ರಾಫ್​ ಅನ್ನು ತೋರಿಸುತ್ತಿರುತ್ತದೆ.

2016 ರ ಯುಎಸ್​ ಚುನಾವಣೆ ವೇಳೆ ರಷ್ಯಾ ಹಾಗೂ ಮತ್ತಿತರರು ಫೇಸ್​ಬುಕ್​ನಲ್ಲಿ ಸುಳ್ಳು ಮಾಹಿತಿಗಳನ್ನು ಹಬ್ಬಿಸಿದರೂ ಅದನ್ನು ತಡೆಯುವಲ್ಲಿ ವಿಫಲವಾಗಿತ್ತು. ಹಾಗೇ ನಿಂದನೆಗೆ ಒಳಗಾಗಿತ್ತು. ಅದು ಮತ್ತೆ ಮರುಕಳಿಸದೆ ಇರಲಿ ಎಂಬ ಕಾರಣಕ್ಕೆ ಫೇಸ್​ಬುಕ್​ ಈಗ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ ಎಂದು ಮೂಲಗಳು ತಿಳಿಸಿವೆ.

Share post:

Subscribe

spot_imgspot_img

Popular

More like this
Related

ಗುಡ್‌ ನ್ಯೂಸ್: ಭಾರೀ ಇಳಿಕೆ ಕಂಡ ಬಂಗಾರ! ಬೆಂಗಳೂರಿನಲ್ಲಿ ಇಂದಿನ ಚಿನ್ನ -‌ ಬೆಳ್ಳಿ ಬೆಲೆ ಎಷ್ಟಿದೆ?

ಗುಡ್‌ ನ್ಯೂಸ್: ಭಾರೀ ಇಳಿಕೆ ಕಂಡ ಬಂಗಾರ! ಬೆಂಗಳೂರಿನಲ್ಲಿ ಇಂದಿನ ಚಿನ್ನ...

ಹೋಟೆಲ್ ಮಾಲೀಕರಿಗೆ ಗುಡ್ ನ್ಯೂಸ್: ಹೆಚ್ಚುವರಿಯಾಗಿ 1 ಸಾವಿರ ಕಮರ್ಷಿಯಲ್ ಸಿಲಿಂಡರ್ ಪೂರೈಕೆ – ಕೆ.ಹೆಚ್. ಮುನಿಯಪ್ಪ

ಹೋಟೆಲ್ ಮಾಲೀಕರಿಗೆ ಗುಡ್ ನ್ಯೂಸ್: ಹೆಚ್ಚುವರಿಯಾಗಿ 1 ಸಾವಿರ ಕಮರ್ಷಿಯಲ್ ಸಿಲಿಂಡರ್...

ಡಿಕೆ ಶಿವಕುಮಾರ್ ಆಪ್ತ ಕರಿಯಣ್ಣ ಸಂಗಟಿ ನಿಧನ

ಡಿಕೆ ಶಿವಕುಮಾರ್ ಆಪ್ತ ಕರಿಯಣ್ಣ ಸಂಗಟಿ ನಿಧನ ಕೊಪ್ಪಳ: ಉಪ ಮುಖ್ಯಮಂತ್ರಿ ಡಿ.ಕೆ....

ಉಪಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಘೋಷಣೆ

ಉಪಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಗಳ ಘೋಷಣೆ ಬಾಗಲಕೋಟೆ, ಮಾ. 22: ಉಪಚುನಾವಣೆ ಹಿನ್ನೆಲೆ ಕಾಂಗ್ರೆಸ್...