ತಮ್ಮ ತಪ್ಪನ್ನು ಒಪ್ಪಿಕೊಳ್ಳದೆ ಅದೇ ಸರಿ ಎಂದು ವಾದಿಸುವ ಜನ ತುಂಬಾನೇ ಇದ್ದಾರೆ..! ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಿಲ್ಲ ಅನ್ನೋ ಹಾಗೆ..! ಹುಡುಗಿಯರಂಥೂ ಅಷ್ಟು ಸುಲಭದಲ್ಲಿ ತಮ್ಮ ತಪ್ಪನ್ನು ಒಪ್ಪಿಕೊಳ್ಳಲ್ಲ..! ಈ ವೀಡಿಯೋ ನೋಡಿ, ಇಲ್ಲಿ ಯುವತಿಯೊಬ್ಬಳು ಟ್ರಾಫಿಕ್ ಪೊಲೀಸ್ ಪೇದೆಗೆ ತಪರಾಕಿ ನೀಡ್ತಾ ಇದ್ದಾಳೆ..! ಆ ಪೋಲಿಸಪ್ಪ ಏನೋ ಪೋಲಿ ಆಟ ಆಡಿದ್ದಾನೆ ಅದಕ್ಕೆ ಈಕೆ ಹೊಡೀತಾ ಇದ್ದಾಳಂತ ತಪ್ಪು ತಿಳಿ ಬೇಡ್ರಪ್ಪೋ..! ಈ ಯುವತಿ ಒನ್ ವೇಲಿ ಬಂದಿದ್ದಕ್ಕೆ ಪೊಲೀಸ್ ಅಡ್ಡಹಾಕಿದ್ದಾರೆ..! ಅದಕ್ಕೇ ಈಕೆ ಜಗಳಕ್ಕಿಳಿದಿದ್ದಾಳಂತ ಪೆಟ್ಟು ತಿಂದ ಪೊಲೀಸ್ ಹೇಳ್ತಾ ಇದ್ದಾರೆ..! ಆದರೆ ಹುಡುಗಿ ಮಾತ್ರ ಆತ ಕಿರುಕುಳ ನೀಡ್ದ ಅದಕ್ಕೇ ಎರಡು ಬಿಟ್ಟೆ ಅಂತಿದ್ದಾಳೆ..! ಈ ಘಟನೆ ನಡೆದಿರೋದು ಹೈದರಾಬಾದ್ನಲ್ಲಿ. ಇವರ ಜಗಳಕ್ಕೆ ಅದೇನೂ ಕಾರಣ ಅಂತ ಸರಿಯಾಗಿ ಗೊತ್ತಿಲ್ಲ..! ಜಗಳ ಮಾತ್ರ ಸಿಸಿ ಟಿವಿಯಲ್ಲಿ ಸೆರೆಯಾಗಿದೆ..! ನಾರಿ ಮುನಿದರೆ ಮಾರಿ ಅಂತ ಇಂಥದ್ದನ್ನೆಲ್ಲಾ ನೋಡಿನೇ ಹಿರಿಯರು ಗಾದೆ ಮಾಡಿದ್ದಾರೋ ಏನೋ..?! ಯಾವುದಕ್ಕೂ ನೀವ್ ಒಂದ್ಸಲ ವೀಡಿಯೋ ನೋಡಿ
https://www.youtube.com/watch?v=UnMLqqzxm3g&list=PLrnE4LMxty4afSlWEs2KqGnSDq_ixdo99
Download Android App Now Click Here
Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com
114 ಸ್ವೀಪರ್ ಹುದ್ದೆಗೆ 19000 ಎಂಬಿಎ, ಇಂಜಿನಿಯರ್ ವಿದ್ಯಾರ್ಥಿಗಳಿಂದ ಅರ್ಜಿ..!
ಗೂಗಲ್ ಜೊತೆ ಕೇಂದ್ರ ಸರ್ಕಾರದ ಒಪ್ಪಂದ ಇಂದಿನಿಂದ ರೈಲು ನಿಲ್ದಾಣಗಳಲ್ಲಿ ಫ್ರೀ ವೈಫೈ..!
ಅಪ್ಪ ಕೂಲಿಯಾಳು, ಅಮ್ಮನಿಗೆ ಕಣ್ಣಿಲ್ಲ, ಕಿವಿ ಕೇಳದ ಮಗ ಮೂರು ಬಾರಿ ಐಎಎಸ್ ಪಾಸ್ ಮಾಡಿದ..!
ಕಣ್ಣಮುಂದೆಯೇ ಚಿನ್ನ ಕದ್ದೊಯ್ದ ಕಳ್ಳಿಯರು..! 4 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ ನಾಜೂಕು ನಾರಿಯರು..!