No menu items!
11.1 C
Munich
Wednesday, April 29, 2026

ರೀ ರಿಲೀಸ್ ಆಗಲಿದೆ ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾ.! ಇದರಿಂದ ಬರುವ ದುಡ್ಡಿನಲ್ಲಿ‌ ನಡೆಯಲಿದೆ ಈ ಮಹತ್ಕಾರ್ಯ.!

Must read

ರೀ ರಿಲೀಸ್ ಆಗಲಿದೆ ಅಂಬಿ ನಿಂಗ್ ವಯಸ್ಸಾಯ್ತೋ ಸಿನಿಮಾ..!! ಇದರಿಂದ ಬರುವ ದುಡ್ಡಿನಲ್ಲಿ‌ ನಡೆಯಲಿದೆ ಈ ಮಹತ್ಕಾರ್ಯ..!!

ಇಂದು ಸೂರ್ಯಾಸ್ತದ ಸಮಯಕ್ಕೆ ಕರುನಾಡಿನ ಕರ್ಣನ ಯುಗಾಂತ್ಯವಾಯಿತು.. ಕೋಟ್ಯಾಂತರ ಅಭಿಮಾನಿಗಳನ್ನ ಸಂಪಾದಿಸಿದ್ದ, ಗೆಳೆಯರ ದೊಡ್ಡ ಬಳಗವನ್ನ ಹೊಂದಿದ್ದ, ಅಂಬಿ ಅವರು ಇಂದು ಪಂಚಭೂತಗಳಲ್ಲಿ ಲೀನವಾಗಿ ಹೋದ್ರು.. ಕಂಠೀರವ ಸ್ಟುಡಿಯೋದಲ್ಲಿ ಅಭಿಮಾನಿಗಳು ಸೇರಿದಂತೆ ಕುಟುಂಬ ವರ್ಗದ ನೋವು ಎಂತಹ ಕಲ್ಲು ಹೃದಯವನ್ನು ನೀರಾಗಿಸಿತ್ತು..

ಈ ನಡುವೆ ಪೂರ್ಣ ಪ್ರಮಾಣದಲ್ಲಿ ಅಂಬಿ ನಟಿಸಿದ್ದ ಈ ಹಿಂದಿನ ಸಿನಿಮಾ ಅಂಬಿ ನಿಂಗ್ ವಯಸ್ಸಾಯ್ತೋವನ್ನ ಮತ್ತೆ ರೀ ರಿಲೀಸ್ ಮಾಡುವಂತೆ ದೇಶವಿದೇಶದಲ್ಲಿನ ಅಭಿಮಾನಿಗಳು ಒತ್ತಾಯ ಪಡೆಸಿದ್ದಾರೆ.. ಹೀಗಾಗೆ ಈ ಸಿನಿಮಾದ ನಿರ್ಮಾಪಕರಾದ ಜಾಕ್ ಮಂಜು ಮತ್ತೆ ಚಿತ್ರವನ್ನ ಬಿಡುಗಡೆ ಮಾಡಲು ಮನಸು ಮಾಡಿದ್ದಾರೆ..

ಇನ್ನು ಈ ಸಿನಿಮಾ‌ ಪ್ರದರ್ಶನದಿಂದ‌ ಬಂದ‌ ಹಣವನ್ನ‌ ಬಡವರ ಕಲ್ಯಾಣಕ್ಕಾಗಿ‌ ಬಳಸಲು ಯೋಚಿಸಿದ್ದಾರೆ ಎನ್ನಲಾಗಿದೆ.. ಅಂಬರೀಶ್ ಅವರೆಂದರೆ ತಮ್ಮ‌ ಕೊಡುಗೈ ದಾನಕ್ಕೆ‌ ಹೆಸರುವಾಸಿಯಾದವರು.. ಹೀಗಾಗೆ ಇವರ ಸಿನಿಮಾದಿಂದ ಬಂದ ಹಣವನ್ನ‌ ಬಡವರ ಪಾಲಿಗೆ ಮೀಸಲಿಡಲ್ಲಿದ್ದಾರಂತೆ..

 

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article