ಕೇಸ್ ಬುಕ್ ಆಗುತ್ತಿದ್ದ ಹಾಗೆ ಕಂಪ್ಲಿ ಶಾಸಕ ಗಣೇಶ್ ನಾಟ್ ರೀಚಬಲ್…
ಈಗಲ್ಟನ್ ರೆಸಾರ್ಟ್ ನಲ್ಲಿ ನಡೆದ ಕಂಪ್ಲಿ ಶಾಸಕ ಗಣೇಶ್ ಹಾಗು ಆನಂದ್ ಸಿಂಗ್ ನಡುವಿನ ಜಗಳದಲ್ಲಿ ಆನಂದ್ ಸಿಂಗ್ ಅವರಿಗೆ ತೀರ್ವ ಪೆಟ್ಟಾಗಿದೆ.. ಕಣ್ಣು ಮತ್ತು ಹೊಟ್ಟೆಯ ಭಾಗದಲ್ಲಿ ಇನ್ನು ನೋವಿದ್ದು ಅವರನ್ನ ಇಂದು ಸಹ ಅಪೋಲೋ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡೋದು ಡೌಟ್ ಎನ್ನಲಾಗ್ತಿದೆ.. ಇತ್ತ ಘಟನೆ ನಡೆಯುತ್ತಿದ್ದ ಹಾಗೆ ಈಗಲ್ಟನ್ ರೆಸಾರ್ಟ್ ನಲ್ಲಿ ತನಿಖೆ ನಡೆಸಿ, ಅನಂದ್ ಸಿಂಗ್ ಅವರಿಂದ ಹೇಳಿಕೆ ಪಡೆದಿರುವ ಬಿಡದಿ ಪೊಲೀಸರು ಶಾಸಕ ಗಣೇಶ್ ಬಂಧನಕ್ಕೆ ಬಲೆ ಬೀಸಿದ್ದಾರೆ…
ಇನ್ನು ಗಣೇಶ್ ಅವರ ವಿರುದ್ದ ಎಫ್ ಐಆರ್ ದಾಖಲಾಗುತ್ತಿದ್ದ ಹಾಗೆ ಈ ಶಾಸಕ ಅಜ್ಞಾತ ಸ್ಥಳ ಸೇರಿಸಿಕೊಂಡಿದ್ದಾರೆ.. ಫೋನ್ ನಾಟ್ ರೀಚಬಲ್ ಆಗಿದೆ.. ಸ್ವಕ್ಷೇತ್ರದಲ್ಲು ಶಾಸಕರಿಲ್ಲ ಎಂಬ ಮಾಹಿತಿ ಇದ್ದು, ಅವರ ಬೆಂಬಲಿಗರಿಗು ಶಾಸಕರ ಬಗ್ಗೆ ತಿಳಿದಿಲ್ಲ ಎನ್ನಲಾಗ್ತಿದೆ.. ಹೀಗಾಗೆ ಬಿಡದಿ ಹಾಗು ರಾಮನಗರ ಪೊಲೀಸರು ಗಣೇಶ್ ಅವರ ಪತ್ತೆಗೆ ಮೂರು ತಂಡ ರಚನೆ ಮಾಡಿ ಹುಡುಕಾಟ ನಡೆಸಿದ್ದಾರೆ…
ಬಂಧನ ಭೀತಿ ಎದುರಿಸುತ್ತಿರುವ ಶಾಸಕ ಗಣೇಶ್ ನಿರೀಕ್ಷಣಾ ಜಾಮೀನು ಸಿಗುವವರೆಗೂ ಪೊಲೀಸರ ಕೈಗೆ ಸಿಗದಂತೆ ಅಜ್ಞಾತ ಸ್ಥಳದಲ್ಲಿಯೇ ಇರುವ ಕುರಿತು ಯೋಚಿಸಿದ್ದಾರೆ ಎನ್ನಲಾಗ್ತಿದ್ದು, ಗಲಾಟೆಯಾದ ಸಂದರ್ಭದಲ್ಲಿ ತನ್ನ ಹತ್ಯೆಗೆ ಗನ್ ನೀಡುವಂತೆ ಗನ್ ಮನ್ ಬಳಿ ಕೇಳಿದ್ರು ಅಂತ ಆನಂದ್ ಸಿಂಗ್ ಪೊಲೀಸರಿಗೆ ತಿಳಿಸಿದ್ದಾರೆ..