No menu items!
10.8 C
Munich
Wednesday, April 29, 2026

ವೃದ್ಧ ದಂಪತಿಗಳಿಗೆ 1,00,000 ರೂ. ಮೌಲ್ಯದ ನಕ್ಲೇಸ್ ಹಿಂದಿರುಗಿಸಿದ ಆಟೋಡ್ರೈವರ್..!

Must read

ಆಟೋಡ್ರೈವರ್ ಒಬ್ಬನ ಸಾಹಯ ಗುಣ, ಒಳ್ಳೇತನವನ್ನು ಬಿಡಿಸಿ ಹೇಳುವ ರಿಯಲ್ ಸ್ಟೋರಿ..! ಅವತ್ತು ನವೆಂಬರ್ 17, 2015ನೇ ಇಸವಿ, ಮುಂಬೈನ ಘಾಟ್ಕೋಪರ್ನ ಕಾಮಾಲೇನ್ ವಾಸಿ ಸುಮಾರು 67 ವರ್ಷದ ಹಂಸರಾಜ್ ಎನ್ನುವ ವ್ಯಕ್ತಿ 62 ವರ್ಷದ ತನ್ನ ಹೆಂಡತಿ ಹಿರಮತಿ ಖತ್ರಿಯೊಡನೆ ಕಾಮಾಲೇನ್ನಿಂದ ಘಾಟ್ಕೋಪರ್ಗೆ ಆಟೋದಲ್ಲಿ ಹೊರಡುತ್ತಾರೆ. ಘಾಟ್ಕೋಪರ್ ನಲ್ಲಿ ಇಳಿದು, ಆಟೋಚಾಲಕನಿಗೆ ಹಣವನ್ನು ಕೊಟ್ಟು, ತಮ್ಮಪಾಡಿಗೆ ತಾವು ಹೋಗ್ತಾರೆ.., ಆಟೋಚಾಲಕ ಅರುಣ್ ಶಿಂಧೆ(50ವರ್ಷ), ಕೂಡ ಹಣ ತೆಗೆದುಕೊಂಡು ಅಲ್ಲಿಂದ ಹೊರಡ್ತಾನೆ. ಆಟೋ ಪಾಸ್ ಆದ್ಮೇಲೆ ನೋಡ್ತಾರೆ, ನೆಕ್ಲೇಸ್ ಇರಲ್ಲ..! ಆ ದಂಪತಿಗಳು ಒಂದು ಲಕ್ಷ ರೂಪಾಯಿ ಬೆಲೆ ಬಾಳುವ ನೆಕ್ಲೇಸ್ ಅನ್ನು ಮಿಸ್ ಮಾಡ್ಕೊಂಡಿರ್ತಾರೆ..! ಆಟೋಡ್ರೈವರ್ನನ್ನು ಹುಡುಕ್ತಾರೆ, ಆತ ಸಿಗಲ್ಲ..!
ಸ್ವಲ್ಪ ಹೊತ್ತಿನ ನಂತರ ಅರುಣ್ಗೆ ತನ್ನ ಆಟೋದಲ್ಲಿದ್ದ ಆ ನಕ್ಲೇಸ್ ಸಿಗುತ್ತೆ..! ಇದು ಬೆಳಿಗ್ಗೆ, ಘಾಟ್ಕೋಪರ್ಗೆ ಡ್ರಾಪ್ ಮಾಡಿದ ವೃದ್ಧ ದಂಪತಿಗಳದ್ದೆ ಎಂದು ಗೊತ್ತಾಗುತ್ತೆ..! ಅವರನ್ನು ಹುಡುಕ್ತಾನೆ, ಅವರು ಸಿಕ್ಕಿರಲ್ಲ..!
ಹೀಗೆ ಎರಡು ತಿಂಗಳಿನಿಂದ ಹಂಸರಾಜ್ ದಂಪತಿಗಳು ಆಟೋಡ್ರೈವರ್ ಅರುಣ್ನನ್ನೂ, ಅರುಣ್ ಈ ದಂಪತಿಗಳನ್ನು ಹುಡುಕ್ತಾನೇ ಇರ್ತಾರೆ..! ದಿನಾಲೂ ತಾವು ಆಟೋ ಹತ್ತಿದ್ದ ಜಾಗಕ್ಕೆ ಬಂದು, ಇದೇ ದಾರಿಯಲ್ಲಿ ಆ ಆಟೋಡ್ರೈವರ್ ಬಾರ್ತಾನ ಅಂತ ಎದುರು ನೋಡ್ತಾ ಇರ್ತಾರೆ ವೃದ್ಧದಂಪತಿಗಳು..! ಆದರೂ…ಆಟೋಡ್ರೈವರ್ಗೂ ಈ ದಂಪತಿಗಳು ಸಿಗಲ್ಲ, ಅವರಿಗೂ ಈತ ಸಿಗಲ್ಲ..!
ಜನವರಿ 17, 2016 ಅಂದರೆ ದಂಪತಿಗಳು ನೆಕ್ಲೇಸ್ ಮಿಸ್ ಮಾಡಿಕೊಂಡ ಎರಡು ತಿಂಗಳ ನಂತರ ಅರುಣ್ ಆ ದಂಪತಿಗಳ ಮನೆಯ ಹತ್ತಿರ ಮಾರ್ಕೆಟ್ ಏರಿಯಾದಲ್ಲಿ ಹೋಗ್ತಾ ಇರುವಾಗ ಹಿರಾಮತಿ (ಹಂಸರಾಜ್ರ ಹೆಂಡತಿ)ಯನ್ನು ನೋಡ್ತಾರೆ..! ಆದರೆ ಹಿರಾಮತಿಗೆ ಈತ ಯಾರೆಂದು ನೆನಪು ಬರ್ಲಿಲ್ಲ..! ಆಗ ಸ್ವತಃ ಆಟೋಡ್ರೈವರ್ ಅರುಣ್ ಎಲ್ಲಾ ವಿಚಾರವನ್ನು ವಿವರಿಸಿ, ತನ್ನ ಮನೆಗೆ ಬಂದು ನೆಕ್ಲೇಸ್ ತೆಗೆದುಕೊಂಡು ಹೋಗಿ ಎಂದು ಹೇಳ್ತಾನೆ..! ಆ ದಂಪತಿಗಳು ಅರುಣ್ ಮನೆಗೆ ಹೋಗಿ ನೆಕ್ಲೇಸ್ ತಗೊಳ್ತಾರೆ..! ತಮ್ಮ ನೆಕ್ಲೇಸ್ ವಾಪಸ್ಸು ಕೊಟ್ಟದಕ್ಕೆ ಕೃತಜ್ಞರಾಗಿ ಅರುಣ್ರನ್ನು ಪುರಸ್ಕರಿಸಲು ದಂಪತಿಗಳು ಮನಸ್ಸು ಮಾಡ್ತಾರೆ..! ಆದರೆ ಅದನ್ನು ಒಪ್ಪದ ಆಟೋಡ್ರೈವರ್ ಅರುಣ್, ಇದು ನನ್ನ ಸಣ್ಣ ಸಹಾಯವಷ್ಟೇ ಎಂದು ಹೇಳಿ ರಿವಾರ್ಡನ್ನು ನಗುತ್ತಲೇ ತಿರಸ್ಕರಿಸುತ್ತಾರೆ..!
ಅರುಣ್ ಎಂಥಾ ನಿಷ್ಠಾವಂತರಲ್ವೇ..?! ಇಂಥಾ ವ್ಯಕ್ತಿಗಳು ತುಂಬಾ ಅಪರೂಪ..! ಆಟೋರಾಜ ಅರುಣ್ ಗೊಂದು ಸಲಾಂ..! ರಿಯಲ್ಲೀ ಯೂ ಆರ್ ಗ್ರೇಟ್..ಅರುಣ್, ಒಳ್ಳೇದಾಗ್ಲಿ ನಿಮಗೆ.

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

ಸಾವು ಗೆದ್ದು ಬಂದ ಕನ್ನಡದ ವೀರಯೋಧ..! 25 ಅಡಿ ಆಳದ ಹಿಮರಾಶಿಯಲ್ಲಿ ಜೀವಂತವಾಗಿ ಪತ್ತೆಯಾದ ಯೋಧ..! Video

ಎರಡೂ ಕೈಲಿ ಬೌಲಿಂಗ್ ಮಾಡುವ ಭಾರತದ ಸ್ಪಿನ್ನರ್..! ಇವರು ಎಡಗೈ ಮತ್ತು ಬಲಗೈಲೂ ಬೌಲ್ ಮಾಡ್ತಾರೆ..!

20 ರೂಪಾಯಿ ಎಲ್ಲಿ..? 160 ರೂಪಾಯಿ ಎಲ್ಲಿ..? ಇದು ಹಗಲು ದರೋಡೆ ಅಲ್ಲದೇ ಇನ್ನೇನು..?

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article