No menu items!
11.1 C
Munich
Wednesday, April 29, 2026

ಕಾಂಪಿಟೇಷನ್ ಇದ್ರೆ ಮಾತ್ರ ಗೆಲ್ಲಲು ಸಾಧ್ಯ..! ಓದುವ ಸಲುವಾಗಿ ಶಾಲಾ ಕಾಂಪಿಟೇಷನ್ ಗಳಲ್ಲೆಲ್ಲಾ ಭಾಗವಹಿಸಿ ಗೆಲ್ತಾ ಇದ್ರು..!

Must read

ಇವರು ಸ್ಪರ್ಧೆಗಳನ್ನು ಎದುರಿಸಿದ್ದೇ ಬದುಕಿನಲ್ಲಿ ಗೆಲ್ಲಲು..!

ಪ್ರತಿಯೊಬ್ಬರ ಲೈಫ್ ಸ್ಟೋರಿಯೂ ಇನ್ನೊಬ್ಬರಿಗೆ ಪಾಠ ಆಗಬಲ್ಲದು, ಇಲ್ಲವೇ ಸ್ಪೂರ್ತಿ ಆಗಬಲ್ಲದು..! ಅಂತೆಯೇ ಶ್ವೇತಾ ಬಂತನಲ್ ಅವರ ಲೈಫ್ ಸ್ಟೋರಿ..! ಇದು ಚಿಕ್ಕ ಬರಹವೆ. ಆದರೆ ಇಲ್ಲಿ ಹೇಳ್ತಾ ಇರೋ ಶ್ವೇತಾ ಬಂತಲನ್ ಅವರ ಲೈಫ್ ಇದೆಯಲ್ಲಾ ಎಷ್ಟೋ ಜನರಿಗೆ, ಎಷ್ಟೋ ಮಕ್ಕಳಿಗೆ ಸ್ಪೂತರ್ಿಯ ಚಿಲುಮೆ ಆಗುವುದರಲ್ಲಿ ನೋ ಡೌಟ್..!
ನಮ್ಮ ಕನ್ನಡತಿ ಈ ಶ್ವೇತಾ ಬಂತಲ್. ಕರ್ನಾಟಕದ ಮುಧೋಳ್ ಎಂಬ ಹಳ್ಳಿಯವರು..! ಚಿಕ್ಕವಯಸ್ಸಲ್ಲಿ ತಂದೆಯನ್ನು ಕಳೆದಕೊಂಡ ಮೇಲೆ ಶಾಲೆಯನ್ನು ಅರ್ಧಕ್ಕೇ ಬಿಟ್ಟು ಬಿಡಬೇಕಾದ ಸ್ಥಿತಿ ಇತ್ತು. ಆದರೆ ಶ್ವೇತಾ ಶಾಲೆ ಬಿಡಲಿಲ್ಲ. ಅಪ್ಪನ ಸಾವಿನ ನೋವು, ಸಾವಿನ ನಂತರದ ಕುಟುಂಬ ಪರಿಸ್ಥಿತಿಯನ್ನು ಸವಾಲಾಗಿ ಸ್ವೀಕರಿಸಿದ್ರು..! ಓದುವುದೊಂದೇ ಒಳ್ಳೆಯ ಜೀವನಕ್ಕೆ ಬುನಾದಿ ಆಗುತ್ತಂತ ಅವರಿಗೆ ಗೊತ್ತಿತ್ತು. ಶಾಲೆಗೆ ಹೋದ್ರು. ಎಲ್ಲಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಗೆಲುವನ್ನು ಪಡೆಯುತ್ತಾ ಅಲ್ಲಿ ಬಹುಮಾನದ ರೂಪದಲ್ಲಿ ಸಿಕ್ಕ ಹಣವನ್ನು ತನ್ನ ಶೈಕ್ಷಣಿಕ ಅವಶ್ಯಕತೆಗೆ ಬಳಸಿಕೊಳ್ಳ ತೊಡಗಿದ್ರು..! ಓದುವುದರಲ್ಲಂತೂ ಮುಂದೆಯೇ.. ಇದರ ಜೊತೆಗೆ ಎಲ್ಲಾ ಪಠ್ಯೇತರ ಚಟುವಟಿಕೆಗಳಲ್ಲಿ ಎತ್ತಿದ ಕೈ ಶ್ವೇತ ಆಗಿದ್ರು..! ಯಾವುದೇ ಸ್ಪರ್ಧೆ ಇರಲಿ, ಅದಕ್ಕೆ ಶ್ವೇತ ಭಾಗವಹಿಸಿಯೇ ಭಾಗವಹಿಸ್ತಾ ಇದ್ರು..! ಅವರಿಗೆ ಅಲ್ಲಿ ಗೆಲುವು ಮುಂದಿನ ಓದಿಗೆ ಅನಿವಾರ್ಯವೂ ಆಗಿತ್ತು…! ಒಳ್ಳೆಯ ಓದು ಮತ್ತುದ್ವಿತೀಯ ಪಿಯುಸಿಯಲ್ಲಿನ ಉತ್ತಮ ಅಂಕ, ಪಠ್ಯೇತರ ಚಟುವಟಿಕೆಗಳಲ್ಲಿನ ಭಾಗವಹಿಸುವಿಕೆಯಿಂದಲೂ `ಹೆಲ್ಪ್ ಎ ಚೈಲ್ಡ್’ ಎಂಬ ಸಂಸ್ಥೆಯ ಕಣ್ಣಿಗೆ ಬಿದ್ದರು. ಅದು ಅವರಿಗೆ ಸಹಾಯ ಮಾಡಿತು..! ಬಿಇ ಪದವಿಯನ್ನು ಪಡದು ಒಳ್ಳೆಯ ಉದ್ಯೋಗವನ್ನೂ ಗಿಟ್ಟಿಸಿಕೊಂಡರು..! ಬೆಂಗಳೂರಿನಲ್ಲಿ ಹೆಚ್ಪಿ ಕಂಪನಿಯಲ್ಲಿ ಸೇವೆ ಸಲ್ಲಿಸ್ತಾ ಇದ್ದಾರೆ. ಈಗ ಮದುವೆಯೂ ಆಗಿ ಇಬ್ಬರು ಮಕ್ಕಳ ತಾಯಿಯೂ ಆಗಿದ್ದಾರೆ. ಸಹೋದರಿಯರ ಉನ್ನತ ವ್ಯಾಸಂಗಕ್ಕೂ ಇವರು ಹಣಕಾಸಿನ ನೆರವು ನೀಡ್ತಾ.. ಕುಟುಂಬವನ್ನೂ ನಿರ್ವಹಿಸ್ತಾ ಇದ್ದಾರೆ..! ಶಿಕ್ಷಣ ಇವರ ಬದುಕನ್ನು ಬದಲಾಯಿಸಿತು…! ಬಡತನದಿಂದ ಇವರನ್ನು ಆಚೆ ತಂದಿತು..! ಆ ಶಿಕ್ಷಣಕ್ಕಾಗಿ ಶಾಲಾ ದಿನಗಳಲ್ಲಿ ಅವರಿಗೆ ಕಾಂಪಿಟೇಷನ್ ನಲ್ಲಿ ಭಾಗವಹಿಸುವಿಕೆ ಅನಿವಾರ್ಯವಾಗಿತ್ತು..! ಕಾಂಪಿಟೇಷನ್ ಇದ್ರೆ ಮಾತ್ರ ಗೆಲ್ಲಲು ಸಾಧ್ಯ ಅಲ್ಲವೇ..! ಗೆಲುವು ಬೇಕಂದ್ರೆ ಸ್ಪರ್ಧೆಯನ್ನು ಎದುರಿಸಲೇಬೇಕು..

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

ಇವನಿಗೆ ಚಪ್ಪಲಿಯೇ ಆಟ ಆಡಿಸ್ತಾ ಇದೆ..! ಇದು ಎಕ್ಕಡದ ಶಾಪವೋ.. ಪರಮಾತ್ಮನ ಆಟವೋ..!?

ಸಾವು ಗೆದ್ದು ಬಂದ ಕನ್ನಡದ ವೀರಯೋಧ..! 25 ಅಡಿ ಆಳದ ಹಿಮರಾಶಿಯಲ್ಲಿ ಜೀವಂತವಾಗಿ ಪತ್ತೆಯಾದ ಯೋಧ..! Video

ಎರಡೂ ಕೈಲಿ ಬೌಲಿಂಗ್ ಮಾಡುವ ಭಾರತದ ಸ್ಪಿನ್ನರ್..! ಇವರು ಎಡಗೈ ಮತ್ತು ಬಲಗೈಲೂ ಬೌಲ್ ಮಾಡ್ತಾರೆ..!

20 ರೂಪಾಯಿ ಎಲ್ಲಿ..? 160 ರೂಪಾಯಿ ಎಲ್ಲಿ..? ಇದು ಹಗಲು ದರೋಡೆ ಅಲ್ಲದೇ ಇನ್ನೇನು..?

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article