ಸ್ಯಾಂಡಲ್ವುಡ್ ನಲ್ಲಿ ತನ್ನ ನಟನೆಯಿಂದ್ಲೇ ಮಿಂಚಿದ ನಟ ಚಿರಂಜೀವಿ ಸರ್ಜಾ ಪತ್ನಿ ಮೇಘನ ರಾಜ್ ಈಗ ನಾಯಕಿಯಿಂದ ನಿರ್ಮಾಪಕಿಯಾಗಿ ಬಡ್ತಿಯಾಗಿದ್ದಾರೆ.
‘ಮೇಘನಾ ಸಿನಿಮಾಸ್’ ಎನ್ನುವ ಹೊಸ ಪ್ರೊಡಕ್ಷನ್ ಸಂಸ್ಥೆ ಮೂಲಕ ಮೇಘನಾ ತಮ್ಮ ಕನಸ್ಸನ್ನು ನನಸು ಮಾಡಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಬಾಲ್ಯದಿಂದಲೂ ಮಕ್ಕಳ ಸಿನಿಮಾಗಳನ್ನು ನೋಡಿ ಬೆಳೆದಿದ್ದ ಮೇಘನಾಗೆ ತಾವು ಮಕ್ಕಳ ಸಿನಿಮಾ ನಿರ್ದೇಶನ ಮಾಡ್ಬೇಕು ಅನ್ನೋ ಆಸೆಯಿತ್ತಂತೆ.
ಹೀಗಾಗಿ ತಮ್ಮ ಬ್ಯಾನರ್ ನಲ್ಲಿ ಪುಟಾಣಿ ಪಂಟರ್ಸ್ ಎಂಬ ಸಿನಿಮಾಗೆ ಹಣ ಹೂಡಲು ರೆಡಿಯಾಗಿದ್ದಾರೆ. ಹಾಸ್ಯ ನಟನಾಗಿ ಕಿರುತೆರೆ ಹಾಗೂ ಬೆಳ್ಳಿ ತೆರೆಮೇಲೆ ಗುರುತಿಸಿಕೊಂಡಿದ್ದ ಪವನ್ ಈ ಚಿತ್ರಕ್ಕೆ ಆಯಕ್ಷನ್ ಕಟ್ ಹೇಳ್ತಿದ್ದು, ಮೇಘನಾ ತಾಯಿ ಪ್ರಮೀಳಾ ಜೋಷಾಯ್, ತಂದೆ ಸುಂದರ್ ರಾಜ್, ಹಾಗೂ ಸ್ಪರ್ಶ ಚಿತ್ರದ ಖ್ಯಾತಿಯ ರೇಖಾ ಸೇರಿದಂತೆ ಹಲವು ಹಿರಿಯ ಕಲಾವಿದರು ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.
ಒಟ್ಟಿನಲ್ಲಿ ಈ ಮೂಲಕ ಇಷ್ಟುದಿನ ಬಹುಬಾಷಾ ನಾಯಕಿಯಾಗಿ ಗುರುತಿಸಿಕೊಂಡಿದ್ದ ನಟಿ ಮೇಘನಾ ರಾಜ್ ಕೇವಲ ನಟನೆಯಲ್ಲ ನಿರ್ಮಾಣ ಮಾಡೋದಕ್ಕು ಸೈ ಅಂತಿದ್ದಾರೆ.