No menu items!
9.3 C
Munich
Wednesday, April 29, 2026

ತಮ್ಮ ಮನದಾಳದ ಆಸೆಯನ್ನು ಹೇಳಿಕೊಂಡ ಚಹಾಲ್ ,

Must read

ಅದೃಷ್ಟ ಎಂಬುದು ರಾಯಲ್ ಚಾಲೆಂಜರ್ಸ್​​ ಬೆಂಗಳೂರು ತಂಡಕ್ಕೆ ದೂರದ ಬೆಟ್ಟವಿದ್ದಂತೆ. ಇದಕ್ಕೆ ಸಾಕ್ಷಿ ತಂಡದಲ್ಲಿ ಘಟಾನುಘಟಿ ಆಟಗಾರರು ಇದ್ದ ಹೊರತಾಗಿಯೂ ಈವರೆಗೆ ಒಂದು ಬಾರಿಯೂ ಕಪ್ ಗೆದ್ದಿಲ್ಲ. ಹೀಗಿರುವಾಗ ಕೆಲ ಆಟಗಾರರು ಆರ್​ಸಿಬಿ ತಂಡ ಸೇರಿದ್ದಕ್ಕೆ ಬೇಸರಗೊಂಡಿದ್ದು ಇದೆಯಂತೆ. ಈ ಮಧ್ಯೆ ಆರ್​ಸಿಬಿ ಆಟಗಾರನೋರ್ವ ನನ್ನ ಕ್ರಿಕೆಟ್ ಜೀವನ ಅಂತ್ಯವಾಗುವವರೆಗೆ ಆರ್​ಸಿಬಿ ಬಿಟ್ಟು ಬೇರೆ ತಂಡ ಸೇರಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

ಈ ರೀತಿಯ ಹೇಳಿಕೆ ನೀಡಿದ್ದು ಟೀಂ ಇಂಡಿಯಾದ ಯುವ ಪ್ರತಿಭಾನ್ವಿತ ಲೆಗ್​ ಸ್ಪಿನ್ನರ್ ಯಜುವೇಂದ್ರ ಚಹಾಲ್. ‘ಆರ್​ಸಿಬಿ ನನಗೆ ಕುಟುಂಬವಿದ್ದಂತೆ. ನಾನು 2014 ರಲ್ಲಿ ಐಪಿಎಲ್​​ಗೆ ಕಾಲಿಟ್ಟಾಗ ಆರ್​ಸಿಬಿ ಪ್ರಾಂಚೈಸಿಯಲ್ಲಿ ಆಡುತ್ತೇನೆ ಎಂಬ ಕಲ್ಪನೆಯೂ ಇರಲಿಲ್ಲ. ನನಗೆ ಬೆಂಗಳೂರಿಗೆ ಬರುವುದು ಎಂದರೆ ತುಂಬಾನೆ ಖುಷಿ.ಮತ್ತು ಐಪಿಎಲ್​​​ನಲ್ಲಿ ನಾನು ಆಡುವುದಾದರೆ ಅದು ಆರ್​ಸಿಬಿಯಲ್ಲಿ ಮಾತ್ರ ‘ಎಂದು ಚಹಾಲ್ ಹೇಳಿದ್ದಾರೆ

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article