ಮಾರಿಮುತ್ತು ಮೊಮ್ಮಗಳು ಜಯಶ್ರೀ ಈಗ ತೆಲುಗು ಚಿತ್ರದ ನಾಯಕಿ !?

Date:

ಶಶಿಕಲಾ ಲವ್ವರ್ ಆಫ್ ಪುಟ್ಟರಾಜು’ ಚಿತ್ರದ ಮೂಲಕ ಚಿತ್ರರಂಗಕ್ಕೆ ನಾಯಕಿಯಾಗಿ ಎಂಟ್ರಿ ಕೊಟ್ಟವರು ಜಯಶ್ರೀ . ಇವರು ಮಾರಿಮತ್ತು ಎಂದು ಜನಪ್ರಿಯರಾಗಿರುವ ಸರೋಜಮ್ಮನವರ ಮೊಮ್ಮಗಳು. ಇದೀಗ ಸ್ಯಾಂಡಲ್ ವುಡ್ ನಿಂದ ಟಾಲಿವುಡ್ ನತ್ತ ಮುಖ ಮಾಡಿದ್ದಾರೆ.ಹೌದು, ತೆಲುಗಿನ ‘ಮೇರಾ ದೋಸ್ತ್’ ಚಿತ್ರಕ್ಕೆ ಆಯ್ಕೆಯಾಗಿರುವ ಜಯಶ್ರೀ ಈ ಚಿತ್ರದ ಬಗ್ಗೆ ಸಾಕಷ್ಟು ವಿಶ್ವಾಸವನ್ನು ವ್ಯಕ್ತಪಡಿಸುತ್ತಾರೆ.

ಇನ್ನು ಈ ಚಿತ್ರದ ಮೂಲಕ ವಿಜಯ್ ಎಂಬ ಪ್ರತಿಭೆ ನಾಯಕನಟರಾಗಿ ಪರಿಚಿತರಾಗುತ್ತಿದ್ದಾರೆ. ಅಂದ ಹಾಗೆ ಇದೊಂದು ಗೆಳೆತನ ಮತ್ತು ಪ್ರೀತಿ ನಡುವಿನ ಕಥೆ. ಈಗಿನ ಟ್ರೆಂಡ್ ಗೆ ತಕ್ಕಂತಹ ಕಥೆಯನ್ನು ಒಳಗೊಂಡ ಸಿನಿಮಾ.

‘ಕನ್ನಡದಲ್ಲಿ ಒಂದೆರಡು ಮಾತುಕತೆ ನಡೆಯುತ್ತಿದ್ದು, ಈ ಚಿತ್ರ ಮುಗಿಸಿಕೊಂಡು ಪುನಃ ಕನ್ನಡದಲ್ಲೇ ಕೆಲಸ ಮಾಡ್ತೀನಿ. ಒಳ್ಳೆಯ ಅವಕಾಶ ಸಿಕ್ಕರೆ ಮಾತ್ರ ಯಾವ ಭಾಷೆ ಇದ್ದರೂ ಮಾಡ್ತೀನಿ” ಎನ್ನುತ್ತಾರೆ ಜಯಶ್ರೀ

ಇನ್ನು ಈ ಚಿತ್ರದಲ್ಲಿ ಜಯಶ್ರೀ ಎರಡು ಶೇಡ್ ಇರುವ ಪಾತ್ರ ಮಾಡುತ್ತಿದ್ದು, ಒಂದರಲ್ಲಿ ಹಳ್ಳಿ ಹುಡುಗಿಯಾಗಿ, ಇನ್ನೊಂದು ಕಾಲೇಜು ಓದುವ ಮಾರ್ಡನ್ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು, ‘ಮೇರಾ ದೋಸ್ತ್’ ಚಿತ್ರ ಮೇ 6 ರಿಂದ ಚಿತ್ರೀಕರಣ ಶುರುವಾಗಲಿದೆ.

Share post:

Subscribe

spot_imgspot_img

Popular

More like this
Related

ಕರ್ನಾಟಕ ರಾಜ್ಯೋತ್ಸವ 2025 ನೇ ಸಾಲಿನ ಪ್ರಶಸ್ತಿ ಪ್ರಕಟ; ಪ್ರಕಾಶ್‌ ರಾಜ್‌ ಸೇರಿ 70 ಮಂದಿಗೆ ಗೌರವ

ಕರ್ನಾಟಕ ರಾಜ್ಯೋತ್ಸವ 2025 ನೇ ಸಾಲಿನ ಪ್ರಶಸ್ತಿ ಪ್ರಕಟ; ಪ್ರಕಾಶ್‌ ರಾಜ್‌...

ಚಿತ್ತಾಪುರದಲ್ಲಿ RSS ಪಥಸಂಚಲನ: ಕಲಬುರಗಿ ಹೈಕೋರ್ಟ್ ಮಹತ್ವದ ಸೂಚನೆ

ಚಿತ್ತಾಪುರದಲ್ಲಿ RSS ಪಥಸಂಚಲನ: ಕಲಬುರಗಿ ಹೈಕೋರ್ಟ್ ಮಹತ್ವದ ಸೂಚನೆ ಕಲಬುರಗಿ: ಚಿತ್ತಾಪುರದಲ್ಲಿ ನವೆಂಬರ್...

ಟನಲ್ ರಸ್ತೆ ಬೇಡ ಹೇಳುವುದಕ್ಕೆ ಈ ತೇಜಸ್ವಿ ಸೂರ್ಯ ಯಾರು?: ಡಿಸಿಎಂ ಡಿ.ಕೆ.ಶಿವಕುಮಾರ್ ವಾಗ್ದಾಳಿ

ಟನಲ್ ರಸ್ತೆ ಬೇಡ ಹೇಳುವುದಕ್ಕೆ ಈ ತೇಜಸ್ವಿ ಸೂರ್ಯ ಯಾರು?: ಡಿಸಿಎಂ...

ಮತ್ತೆ ಇಳಿಕೆಯ ಹಾದಿಗೆ ಬಂದ ಚಿನ್ನ, ಬೆಳ್ಳಿ ಬೆಲೆ! ಹೀಗಿದೆ ದರ

ಮತ್ತೆ ಇಳಿಕೆಯ ಹಾದಿಗೆ ಬಂದ ಚಿನ್ನ, ಬೆಳ್ಳಿ ಬೆಲೆ! ಹೀಗಿದೆ ದರ ಬೆಂಗಳೂರು:...