ದರ್ಶನ್ ಅನ್ನ ಕಿತ್ತುಕೊಂಡ ತರುಣ್ ಸುಧೀರ್..!?

Must read

ಇಂದು ಬನಶಂಕರಿ ದೇವಲಯದಲ್ಲಿ ಚಿತ್ರತಂಡ ಪೂಜೆ ಮಾಡುವ ಮೂಲಕ ರಾಬರ್ಟ್ ಸಿನಿಮಾದ ಶುಭಾರಂಭವಾಗಿದೆ. ಸಿನಿಮಾದ ಬಗ್ಗೆ ಮಾತನಾಡಿರುವ ದರ್ಶನ್ ನಾವು ಏನೋ ಮಾಡಿಬಿಡುತ್ತೇವೆ ಎನ್ನುವುದಕ್ಕಿಂತ ಒಂದು ಒಳ್ಳೆಯ ಸಿನಿಮಾ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ ಹಾಗೂ ಸಿನಿಮಾದ ಬಗ್ಗೆ ಕೆಲ ಮಾಹಿತಿಗಳನ್ನೂ ಸಹ ಹಂಚಿಕೊಂಡಿದ್ದಾರೆ.

ಒಂದು ಒಳ್ಳೆಯ ಸಿನಿಮಾ ಮಾಡುತ್ತಿದ್ದೇವೆ ಇಂದಿನಿಂದ ಚಿತ್ರೀಕರಣ ಆರಂಭವಾಗಿದೆ ಹಾಗೂ ಸದ್ಯದಲ್ಲೆ ಚಿತ್ರದಲ್ಲಿನ ನನ್ನ ಲುಕ್ ರಿವೀಲ್ ಆಗಲಿದೆ ಎಂದು ಹೇಳುವ ಮೂಲಕ ಫಸ್ಟ್ ಲುಕ್ ಗಾಗಿ ಕಾಯುತ್ತಿರುವ ತಮ್ಮ ಅಭಿಮಾನಿಗಳಿಗೆ ಖುಷಿಯ ಸುದ್ದಿಯನ್ನು ನೀಡಿದ್ದಾರೆ.

ಇದೇ ವೇಳೆ ನಿರ್ದೇಶಕರ ಬಗ್ಗೆ ಮಾತನಾಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್, ಈ ಸಿನಿಮಾ ಮುಗಿಯುವ ವರೆಗೂ ತರುಣ್ ಹೇಳಿದ ಹಾಗೆ ಕೇಳೋದಷ್ಟೆ ನನ್ನ ಕೆಲಸ, ಅವರು ಏನು ಹೇಳುತ್ತಾರೋ ಅದನ್ನು ಮಾಡುತ್ತೇನೆ ಈಗಾಗಲೇ ನಿರ್ದೇಶಕರು ಇಂದಿನಿಂದ ರೈಸ್ ತಿನ್ನಬಾರದು ಅಂತ ಹೇಳಿ ಊಟ ಕಿತ್ತುಕೊಂಡಿದ್ದಾರೆ ಎಂದು ಹೇಳುವ ಮೂಕಲ ಹಾಸ್ಯ ಚಟಾಕಿಯನ್ನು ಹಾರಿಸಿದ್ರು.

ಮಾದ್ಯಮಗಳಲ್ಲಿ ರಾಬರ್ಟ್ ಚಿತ್ರಕ್ಕೆ ಬಂದ ಐಶ್ವರ್ಯ ರೈ ನಾಯಕಿ ಎನ್ನುವ ಸುದ್ದಿಗೆ ಪ್ರತಿಕ್ರಿಯೆ ನೀಡಿದ ದಾಸ ಅಯ್ಯೋ ಅಷ್ಟೊಂದು ಎಲ್ಲ ಇಲ್ಲ ಸಾರ್.” ಎನ್ನುವ ಮೂಲಕ ಐಶ್ವರ್ಯ ರೈ ಗಾಸಿಪ್ ಗೆ ತೆರೆ ಎಳೆದಿದ್ದಾರೆ.

 

- Advertisement -spot_img

More articles

- Advertisement -spot_img

Latest article