No menu items!
10.8 C
Munich
Wednesday, April 29, 2026

ಆನೆ ಹೋಗುವಾಗ ನಾಯಿಗಳು ಬೊಗಳುತ್ತವೆ ! ಎಸ್.ಟಿ. ಸೋಮ ಶೇಖರ್,

Must read

ನಾವು ಕೂಡ ಮೈತ್ರಿಯನ್ನು ಹಿಡಿದುಕೊಂಡು ಕುಳಿತಿಲ್ಲ ಎಂದು ಕಾಂಗ್ರೆಸ್ ಶಾಸಕ ಎಸ್.ಟಿ. ಸೋಮ ಶೇಖರ್, ಜೆಡಿಎಸ್ ರಾಜ್ಯ ಸಭಾ ಸದಸ್ಯ ಕುಪೇಂದ್ರ ರೆಡ್ಡಿ ಅವರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಪೇಂದ್ರರೆಡ್ಡಿ ಯಾರು? ಮೈತ್ರಿ ಸರ್ಕಾರದ ಬಗ್ಗೆ ಹೇಳಿಕೆ ನೀಡಲು ದೇವೇಗೌಡರು ಕುಪೇಂದ್ರರೆಡ್ಡಿಗೆ ಅಧಿಕೃತವಾದ ಅಧಿಕಾರ ನೀಡಿದ್ದಾರೆಯೇ? ಕುಪೇಂದ್ರ ರೆಡ್ಡಿ ಬೇಕಿದ್ದರೆ ಜೆಡಿಎಸ್ ಕುರಿತು ಅಧಿಕೃತವಾಗಿ ಹೇಳಿಕೆ ನೀಡಲು ಅಧಿಕಾರ ಹೊಂದಿದ್ದಾರೆ ಎಂದು ದೇವೇಗೌಡರಿಂದ ಜಿಪಿಎ ತೆಗೆದುಕೊಂಡು ಬರಲಿ,ನಂತರ ಮಾತನಾಡಲಿ.

ಅವರು ಸಂಸದರೇ ಇರಬಹುದು, ಆದರೆ ಬಾಯಿಗೆ ಬಂದಂತೆ ಮಾತನಾಡಬಾರದು.ಆನೆ ನಡೆದುಹೋಗುತ್ತಿರುತ್ತದೆ, ನಾಯಿಗಳು ಬೊಗಳುತ್ತಿರುತ್ತವೆ. ಆದರೆ ಆನೆಗೆ ಏನೂ ಆಗುವುದಿಲ್ಲ. ಸಿದ್ದರಾಮಯ್ಯ ಆನೆ ಇದ್ದಂತೆ ಹೊಗಳಿಕೆಗೆ ಹಿಗ್ಗುವುದೂ ಇಲ್ಲ, ತೆಗಳಿಕೆಗೆ ತಗ್ಗುವುದೂ ಇಲ್ಲ ಎಂದು ಹೇಳಿದ್ದಾರೆ.

ಮೈತ್ರಿ ಸರ್ಕಾರ ಇರಬೇಕೋ, ಬೇಡವೋ ಎಂದು ಹೇಳುವಷ್ಟು ದೊಡ್ಡವನು ನಾನಲ್ಲ. ಸಮ್ಮಿಶ್ರ ಸರ್ಕಾರ ರಾಹುಲ್‍ಗಾಂಧಿ, ದೇವೇಗೌಡರ ಮಟ್ಟದಲ್ಲಿ ಚರ್ಚೆಯಾಗಿ ರಚನೆಯಾಗಿದೆ. ಆ ಬಗ್ಗೆ ಮಾತನಾಡಲು ನನಗಾಗಲೀ, ಕುಪೇಂದ್ರ ರೆಡ್ಡಿಗಾಗಲೀ ಅಧಿಕಾರ ಇಲ್ಲ ಎಂದು ಹೇಳಿದರು.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article