ಎಲ್ಲರಿಗೂ ತಿಳಿದಿರುವಂತೆ ಸೆಕ್ಸ್ ಬಹಳ ಇಂಪಾರ್ಟೆಂಟ್ ಬರೀ ದಾಂಪತ್ಯ ಜೀವನಕ್ಕೆ ಅಲ್ಲ ಆರೋಗ್ಯಕ್ಕೂ ಸೂಪರ್
ಹೌದು ಸಂಶೋಧನೆಯೊಂದು ಸೆಕ್ಸ್, ಹೃದಯಾಘಾತವನ್ನು ಕಡಿಮೆ ಮಾಡುತ್ತದೆ ಎಂದಿದೆ. ಸೆಕ್ಸ್ ನಲ್ಲಿ ಸಕ್ರಿಯವಾಗಿರುವ ಪುರುಷರಿಗೆ ಹೃದಯಾಘಾತವಾಗುವ ಪ್ರಮಾಣ ಕಡಿಮೆಯಂತೆ. ವಾರದಲ್ಲಿ ಎರಡು ಬಾರಿ ಸಂಬಂಧ ಬೆಳೆಸುವ ಪುರುಷರ ಹೃದಯ ತಿಂಗಳಲ್ಲಿ ಒಂದು ಬಾರಿ ಸಂಬಂಧ ಬೆಳೆಸುವ ಪುರುಷರ ಹೃದಯಕ್ಕಿಂತ ಹೆಚ್ಚು ಆರೋಗ್ಯಕರವಾಗಿರುತ್ತದೆಯಂತೆ.
ಮನೆ, ಕೆಲಸದ ಒತ್ತಡದಲ್ಲಿರುವವರಿಗೆ ಬೆಡ್ ರೂಂ ಒಳ್ಳೆಯ ಮದ್ದು. ಸೆಕ್ಸ್ ಒತ್ತಡವನ್ನು ಕಡಿಮೆ ಮಾಡಲು ನೆರವಾಗುತ್ತದೆ. ಬೆಡ್ ರೂಮ್ ನಲ್ಲಿ ಹೆಚ್ಚು ಸಕ್ರಿಯವಾಗಿರುವವರು ಸಮಸ್ಯೆಯನ್ನು ಸುಲಭವಾಗಿ ನಿಭಾಯಿಸುತ್ತಾರಂತೆ.
ಸೆಕ್ಸ್ ನಲ್ಲಿ ಪರಾಕಾಷ್ಠೆ ತಲುಪಿದಾಗ ತಲೆನೋವಿನ ಜೊತೆ ಅನೇಕ ನೋವುಗಳು ಕಡಿಮೆಯಾಗುತ್ತವೆ. ಸೆಕ್ಸ್ ರಕ್ತ ಪರಿಚಲನೆಗೆ ಸಹಾಯ ಮಾಡುತ್ತದೆ. ಪ್ರತಿಯೊಂದು ಅಂಗದಲ್ಲೂ ರಕ್ತ ಸಂಚಾರ ಸುಗಮವಾಗಲು ಸೆಕ್ಸ್ ಕಾರಣವಾಗುತ್ತದೆ.
ಸಂಭೋಗದ ನಂತ್ರ ಒತ್ತಡ ಕಡಿಮೆಯಾಗಿ ಮನಸ್ಸು ರಿಲ್ಯಾಕ್ಸ್ ಆಗುವುದ್ರಿಂದ ಸುಖ ನಿದ್ರೆ ಆವರಿಸುತ್ತದೆ. ಆದ್ದರಿಂದ ಮದುವೆ ಆಗಿರುವವರು ತಪ್ಪದೇ ರತಿಕ್ರೀಡೆ ಆಡಿ.