ಇವಳಿಗಿಂತ ಇವರೇ ಎಷ್ಟೋ ಬೆಸ್ಟ್ ಎಂದ ಕನ್ನಡಿಗರು..?

admin
By admin
1 Min Read

ಕನ್ನಡತಿ ಮಂಗಳೂರು ಮೂಲದ ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ ತನ್ನದೇ ಛಾಪನ್ನು ಮೂಡಿಸಿ ಮಿಂಚುತ್ತಿರುವ ನಟಿ ಅನುಷ್ಕಾ ಶೆಟ್ಟಿ ತಮ್ಮ ತಾಯಿಗೆ ಕನ್ನಡದಲ್ಲಿ ಹುಟ್ಟುಹಬ್ಬದ ಶುಭಾಶಯ ತಿಳಿಸುವ ಮೂಲಕ ಕೋಟಿ ಕೋಟಿ ಕನ್ನಡಿಗರ ಪ್ರಶಂಸೆಗೆ ಕಾರಣರಾಗಿದ್ದಾರೆ.

ಅನುಷ್ಕಾ ಶೆಟ್ಟಿ ಅವರ ತಾಯಿ ಪ್ರಫುಲ್ಲಾ ಅವರು ಇಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು ಇದರ ಸಲುವಾಗಿ ಅನುಷ್ಕಾ ಶೆಟ್ಟಿ ಅವರು ತಮ್ಮ ತಾಯಿ ಸೇರಿದಂತೆ ಕುಟುಂಬದವರ ಜೊತೆ ತೆಗೆಸಿಕೊಂಡಿರುವ ಫೋಟೋವನ್ನು ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡುವ ಮೂಲಕ ಎಲ್ಲರ ಅಚ್ಚರಿಗೆ ಕಾರಣರಾಗಿದ್ದಾರೆ.

ಅಷ್ಟಕ್ಕೂ ಅನುಷ್ಕಾ ಶೆಟ್ಟಿ ಕೋಟಿ ಕೋಟಿ ಕನ್ನಡಿಗರ ಪ್ರಶಂಸೆ ಗಳಿಸಲು ಕಾರಣವೇನೆಂದರೆ ತನ್ನ ತಾಯಿ ಮತ್ತು ಕುಟುಂಬದವರೊಂದಿಗೆ ಇರುವ ಫೋಟೋ ಹಾಕಿ ಅದಕ್ಕೆ, “ಜನ್ಮ ದಿನದ ಹಾರ್ದಿಕ ಶುಭಾಶಯಗಳು ಅಮ್ಮಾ” ಎಂದು ಬರೆದುಕೊಂಡಿದ್ದಾರೆ. ಅನುಷ್ಕಾ ಶೆಟ್ಟಿ ಅವರ ಕನ್ನಡ ಪ್ರೇಮ ನೋಡಿ ಅಭಿಮಾನಿಗಳು ಖುಷಿಯಾಗಿದ್ದು, ಕಮೆಂಟ್ ಮಾಡುವ ಮೂಲಕ ತಮ್ಮ ಖುಷಿಯನ್ನು ವ್ಯಕ್ತಪಡಿಸಿದ್ದಾರೆ.

ಒಂದು ಕಡೆ ಅನುಷ್ಕಾ ಶೆಟ್ಟಿ ಅವರ ಈ ಕಾರ್ಯಕ್ಕೆ ಅಭಿಮಾನಿಗಳು ಖುಷಿಯನ್ನು ವ್ಯಕ್ತಪಡಿಸಿದ್ದರೆ ಮತ್ತೊಂದು ಕಡೆ ಮೊನ್ನೆಮೊನ್ನೆಯಷ್ಟೇ ಡಿಯರ್ ಕಾಮ್ರೆಡ್ ಚಿತ್ರದ ಪ್ರಚಾರ ಕಾರ್ಯಕ್ರಮದಲ್ಲಿ ನನಗೆ ಕನ್ನಡ ತುಂಬಾ ಕಷ್ಟ ಎಂದು ಕನ್ನಡಕ್ಕೆ ಅವಮಾನ ಮಾಡಿದ್ದ ಮಡಿಕೇರಿ ಮೂಲದ ನಟಿ ರಶ್ಮಿಕಾ ಮಂದಣ್ಣ ಅವರನ್ನ ಅನುಷ್ಕಾ ಶೆಟ್ಟಿ ಅವರ ಜೊತೆ ಹೋಲಿಕೆ ಮಾಡಿ ಇವರನ್ನು ನೋಡಿ ಕಲಿಯಿರಿ ಇವರು ಕೂಡ ಕನ್ನಡದವರು ಆದರೆ ನಿಮ್ಮ ಹಾಗೆ ಇವರು ಕನ್ನಡವನ್ನು ಮರೆತಿಲ್ಲ ಎಂದು ಸಿಕ್ಕಾಪಟ್ಟೆ ಕ್ಲಾಸ್ ತೆಗೆದುಕೊಂಡಿದ್ದಾರೆ.

Share This Article