No menu items!
18 C
Munich
Thursday, June 18, 2026

ಅಭಿಮಾನಿಗಳಿಗೆ ದರ್ಶನ್, ಸುದೀಪ್ ಸಂಕ್ರಾಂತಿ ಗಿಫ್ಟ್!

Must read

ನಾಡಿನೆಲ್ಲೆಡೆ ಸಂಕ್ರಾಂತಿ ಸಂಭ್ರಮ ಮನೆ ಮಾಡಿದೆ. ಹಬ್ಬಕ್ಕೆ ಸ್ಟಾರ್ ನಟರಾದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಭರ್ಜರಿ ಗಿಫ್ಟ್ ಕೊಟ್ಟಿದ್ದಾರೆ. ಒಂದು ಕಾಲದ ಕುಚಿಕುಗಳು ಒಟ್ಟಿಗೇ ಅಭಿಮಾನಿಗಳಿಗೆ ಹಬ್ಬದ ಉಡುಗೊರೆ ನೀಡಿದ್ದು ವಿಶೇಷ.
ಕಿಚ್ಚ – ದಚ್ಚು ಅಭಿಮಾನಿಗಳಿಗೆ ಅದೆಂಥಾ ಗಿಫ್ಟ್ ಕೊಟ್ಟಿದ್ದಾರೆ ಎಂಬ ಕುತೂಹಲವೇ?

ಆ ಕುತೂಹಲಕ್ಕೆ ಇಲ್ಲಿದೆ ಉತ್ತರ. ಸುದೀಪ್ ಅವರ ಕೋಟಿಗೊಬ್ಬ 3 ಮತ್ತು ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಬಗ್ಗೆ ನಿಮಗೆ ಗೊತ್ತಿದೆ. ಸಂಕ್ರಾಂತಿ ಹಬ್ಬದ ಪ್ರಯುಕ್ತ ಈ ಸಿನಿಮಾಗಳ ಮೋಷನ್ ಪೋಸ್ಟರ್ ರಿಲೀಸ್ ಆಗಿದೆ.

ಕೋಟಿಗೊಬ್ಬ -3 ಸಿನಿಮಾ ಮೋಷನ್ ಪೋಸ್ಟರ್ ಹಾಗೂ ರಾಬರ್ಟ್ ಸಿನಿಮಾದ ಸೆಕೆಂಡ್ ಲುಕ್ ಮೋಷನ್ ಪೋಸ್ಟರ್ ಸಂಕ್ರಾಂತಿಗೆ ಗಿಫ್ಟ್ ರೂಪದಲ್ಲಿ ಅಭಿಮಾನಿಗಳಿಗೆ ಸಿಕ್ಕಿದೆ.

ಕೋಟಿಗೊಬ್ಬ 3 ಶಿವಕಾರ್ತಿಕ್ ನಿರ್ದೇಶನದ ಸಿನಿಮಾ. ಈ ಸಿನಿಮಾದಲ್ಲಿ ಸುದೀಪ್ ಜೊತೆಗೆ ಮಡೋಣ ಸೆಬಾಸ್ಟಿನ್ ಮತ್ತು ಶ್ರದ್ಧಾ ದಾಸ್ ನಟಿಸಿದ್ದಾರೆ. ಸೂರಪ್ಪ ಬಾಬು ನಿರ್ಮಿಸಿದ್ದಾರೆ.
ರಾಬರ್ಟ್​ಗೆ ತರುಣ್ ಸುಧೀರ್ ಆ್ಯಕ್ಷನ್ ಕಟ್ ಹೇಳಿದ್ದು, ಉಮಾಪತಿ ಬಂಡವಾಳ ಹೂಡಿದ್ದಾರೆ. ಆಶಾಭಟ್ ದರ್ಶನ್​ಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನೂ ಈ ಎರಡೂ ಸಿನಿಮಾಕ್ಕೂ ಅರ್ಜುನ್ ಜನ್ಯಾ ಸಂಗೀತ ನೀಡಿದ್ದಾರೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article