No menu items!
12.1 C
Munich
Saturday, May 2, 2026

ಇಡೀ ದಿನ ಚೆನ್ನಾಗಿರಬೇಕೆ..? ಹಾಗಾದ್ರೆ ಟಿಪ್ಸ್ ಗಳನ್ನು ಫಾಲೋ ಮಾಡಿ

Must read

ನಿಮ್ಮ ಇಡೀ ದಿನ ಚೆನ್ನಾಗಿರಬೇಕು ಎಂದಾದರೆ ಈ ಟಿಪ್ಸ್ ಗಳನ್ನು ಫಾಲೋ ಮಾಡಿ,. ಇದನ್ನು ಫಾಲೋ ಮಾಡಿದ್ರೆ ನಿಮ್ಮ ಇಡೀ ದಿನ ಫ್ರೆಶ್ ಆಗಿರುತ್ತದೆ.

 ಮಲಗುವ ಮುನ್ನವೆ ಬೆಳಿಗ್ಗೆ ಏನು ಮಾಡಬೇಕೆಂದು ದಿನಚರಿ ರೂಢಿಸಿಕೊಳ್ಳಿ ಸಾಧ್ಯವಾದಷ್ಟು ಬೇಗೆನೆ ಊಟ ಸೇವಿಸಿ. ಬೇರೆ ಬೇರೆ ಕೆಲಸಗಳಿದ್ದರೆ ಅದನ್ನು ಪೂರ್ಣಗೊಳಿಸಿ ನಿದ್ರೆಗೆ ಜಾರಿ. ಈ ರೀತಿ ಮಾಡುವುದರಿಂದ ಬೆಳಗಿನ ನಿಮ್ಮ ದಿನಚರಿಗಳು ಸುಗಮವಾಗಿರುತ್ತವೆ.

ನಾಳೆ ಯಾವ ಕೆಲಸಗಳನ್ನು ಮಾಡಬೇಕೆಂದು ರಾತ್ರಿಯೇ ಸಿದ್ದತೆ ಮಾಡಿಕೊಳ್ಳಿ. ಕಾಲಹರಣ ಮಾಡಬೇಡಿ ಕಾಲಹರಣ ಮಾಡಿದರೆ ಬೆಳಗಿನ ಕೆಲಸಗಳು ಗಡಿಬಿಡಿಯಾಗುತ್ತವೆ. ಅವಸರವಾಗಿ ಎಲ್ಲ ಕೆಲಸಗಳು ಆಗುವುದರಿಂದ ನೀವು ಒತ್ತಡಕ್ಕೆ ಒಳಗಾಗುತ್ತೀರಿ.

ರಾತ್ರಿಯೇ ನಾಳೆ ಏನು ಅಡುಗೆ ಮಾಡಬೇಕು, ಕಚೇರಿಗೆ ಏನು ಊಟ ತೆಗೆದುಕೊಂಡು ಹೋಗಬೇಕು, ಭೋಜನಕ್ಕೆ ಹೊರಗಡೆ ಹೋಗಬೇಕೆ, ಸ್ನೇಹಿತರು ನಿಮ್ಮನ್ನು ಆಹ್ವಾನಿಸಿದ್ದಾರೆಯೇ ಮುಂಚೆಯೇ ಯೋಜಿಸಿ ಮುನ್ನಡೆಯಿರಿ.

ಸಾಮಾನ್ಯವಾಗಿ ಬೆಳಿಗ್ಗೆ ಬೇಗ ಏಳಲು ಮೊಬೈಲ್ ಅಲಾರಾಂ ಬಳಸುತ್ತಾರೆ. ಆದರೆ ಕೆಲವರು ತೊಂದರೆಯಾಗಬಾರದೆಂದು ಮೊಬೈಲ್’ಅನ್ನು ಸೈಲೆಂಟ್ ಅಥವಾ ವೈಬ್ರೈಟ್ ಮೂಡಿನಲ್ಲಿ ಇಟ್ಟಿರುತ್ತಾರೆ. ಬೆಳಿಗ್ಗೆ ಬೇಗ ಏಳದಿದ್ದರೆ ದಿನವಿಡಿ ನಿಮ್ಮನ್ನು ಒತ್ತಡಕ್ಕೀಡು ಮಾಡುವ ಸಾಧ್ಯತೆಯಿದೆ.

ಒಂದು ವೇಳೆ ಮೊಬೈಲ್ ಫೋನಿನಲ್ಲಿ ಅಲರಾಂ ಇಟ್ಟುಕೊಂಡಿದ್ದರೆ ಹೆಚ್ಚು ಶಬ್ದ, ಕರ್ಕಶವಿರುವ ಟ್ಯೂನ್’ಗಳನ್ನು ಸೆಟ್ ಮಾಡಿಕೊಳ್ಳುವುದು ಬಿಟ್ಟು ತಂಪಾದ, ಹಿತವಾದ ಟೋನ್’ಗಳನ್ನು ಅಳವಡಿಸಿಕೊಳ್ಳಿ.

ರಿಂಗ್ ಟೋನ್’ನಲ್ಲಿ ಸ್ನೂಜ್ ಬಟನ್’ಗಳನ್ನು ಆದಷ್ಟು ಕಡಿಮೆ ಮಾಡಿ ಒಂದು ಬಾರಿ ಅಲಾರಂ ಆದರೆ ಆಗಲೆ ಎದ್ದರೆ ಉತ್ತಮ.

ಬಹುತೇಕರು ಬೆಳೆಗ್ಗೆ ಎದ್ದ ನಂತರ ಸೋಮಾರಿತನ ಕೆಲ ಹೊತ್ತು ಏಳದೆ ಸೋಮಾರಿತನ ಬೆಳಸಿಕೊಳ್ಳುವುದು ಸಹಜ.  ರೀತಿಯ ಸೋಮಾರಿತನವನ್ನು ಕಡಿಮೆ ಮಾಡಿ ದಿನಚರಿಯನ್ನು ಆರಂಭಿಸಿ.

ವ್ಯದ್ಯರ ಸಲಹೆಯಂತೆ ಬೆಳಿಗ್ಗೆ ಎದ್ದ ಕೂಡಲೆ ಕೆಲ ಹೊತ್ತು ನಿಮ್ಮ ಮೈಕೈಗೆ ವ್ಯಾಯಾಮ ಅಗತ್ಯ. ಇದರಿಂದ ನಿಮ್ಮ ದೇಹ ನಿತ್ಯದ ಚಟುವಟಿಕೆಗಳಿಗೆ ಅರಾಮದಾಯಕ ನೀಡುತ್ತದೆ.

ಒಳ್ಳೆಯ ಮನಸ್ಸಿನಿಂದ ದಿನವನ್ನು ಆರಂಭಿಸಿದರೆ ನಿಮ್ಮ ಕೆಲಸಗಳು ಸುಲಲಿತವಾಗಿ ಆಗುತ್ತದೆ.

 

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article