ನೀವು ಲೈಂಗಿಕ ಸಮಸ್ಯೆಯಿಂದ ಬಳಲುತ್ತಿದ್ದೀರಾ ? ಲೈಂಗಿಕ ಚಟುವಟಿಕೆಯಿಂದ ನೀವು ನಿರಾಸಕ್ತಿ ಹೊಂದಿದ್ದೀರಾ? ಇವೆಲ್ಲಾ ಸಮಸ್ಯೆಗಳಿಗೆ ರಾಮಬಾಣ ದಾಳಿಂಬೆ ಹಣ್ಣಿನ ಜ್ಯೂಸ್…
ಹೌದು, ಎಡಿನ್‍ಬರ್ಗ್‍ನ ಕ್ವೀನ್ ಮಾರ್ಗರೇಟ್ ವಿಶ್ವವಿದ್ಯಾನಿಲಯದ ಸಂಶೋಧಕರು 21 ರಿಂದ 64 ವರ್ಷ ವರ್ಗದ 58 ಜನರ ಮೇಲೆ ನಡೆಸಿದ ಅಧ್ಯಯನ ಪ್ರಕಾರ ದಾಳಿಂಬೆ ಹಣ್ಣಿನ ಜ್ಯೂಸ್ ಪ್ರತಿ ದಿನ ಸೇವನೆಯಿಂದ ಮಹಿಳೆ ಮತ್ತು ಪುರುಷರ ಲೈಂಗಿಕ ಶಕ್ತಿ ಹೆಚ್ಚುತ್ತದೆ ಎಂದು ಹೊಸ ಅಧ್ಯಯನದಲ್ಲಿ ತಿಳಿಸಿದೆ.
ಲೈಂಗಿಕ ತುಡಿತ ಹೆಚ್ಚಿಸಿಕೊಳ್ಳಬೇಕೆಂದು ಅನೇಕ ರೀತಿಯಲ್ಲಿ ಕಸರತ್ತು ಮಾಡಿಕೊಳ್ಳುತ್ತಿದ್ದರೆ ಅಥವಾ ಮಾತ್ರೆ ಸೆವನೆಯ ಮೊರೆ ಹೋಗಿದ್ದಲ್ಲಿ ಅದನ್ನೆಲ್ಲಾ ಬಿಟ್ಟು ಹೆಚ್ಚು ಹೆಚ್ಚು ದಾಳಿಂಬೆ ಜ್ಯೂಸ್ ಮಾಡಿ ಸೇವಿಸಿ ಸಾಕು.
ಪ್ರತಿ ನಿತ್ಯ ದಾಳಿಂಬೆ ಜ್ಯೂಸ್ ಕುಡಿಯುವುದರಿಂದ ಶರೀರದಲ್ಲಿ ಹಾರ್ಮೋನ್ ಟೆಸ್ಟಾಸ್ಟೆರಾನ್‍ನ ಪ್ರಮಾಣ ಹೆಚ್ಚುತ್ತದೆ. ಇದರಿಂದ ಶೇ. 16 ರಿಂದ 30ರ ವರೆಗೆ ಲೈಂಗಿಕ ಶಕ್ತಿ ಹೆಚ್ಚಿಸುತ್ತದೆ ಎಂದು ವರದಿ ಮಾಡಿದೆ. ಈ ದಾಳಿಂಬೆ ರಸ ಸ್ತ್ರೀ ಮತ್ತು ಪುರುಷರಲ್ಲಿ ಕಾಮೋತ್ತೇಜಕವಾಗಿ ಕಾರ್ಯನಿರ್ವಹಿಸುದರ ಜೊತೆಗೆ ಮೂಳೆ ಮತ್ತು ಸ್ನಾಯುಗಳನ್ನು ಸಧೃಡವಾಗರಲು ಸಹಕಾರಿ. ಲೈಂಗಿಕ ಶಕ್ತಿಯ ಹೆಚ್ಚಿಸುವ ಜೊತೆಗೆ ನೆನಪಿನ ಶಕ್ತಿ ಹಾಗೂ ಒತ್ತಡವನ್ನು ಕಡಿಮೆ ಮಾಡಿಸುತ್ತದೆ ಎಂದಿದ್ದಾರೆ. ಒಟ್ಟಾರೆಯಾಗಿ ದಾಳಿಂಬೆ ಜ್ಯೂಸ್ ಸೇವನೆಯಿಂದ ನಿಮ್ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುವುದಲ್ಲದೇ ಕಾಮೋತ್ತೇಜಕವಾಗಿಯೂ ಕೆಲಸ ಮಾಡುತ್ತದೆ. ರಕ್ತದೊತ್ತಡ ಹೃದಯ ಸಂಬಂಧಿ ಕಾಯಿಲೆ, ಮಧುಮೇಹ ಕಾಯಿಲೆಗಳಿಗೆ ಇದು ರಾಮಬಾಣ ಎಂದಿದ್ದಾರೆ ಸಂಶೋಧಕರು.