ಬಿಹಾರದಲ್ಲಿ ಹೆಚ್ಚುತ್ತಿರುವ ಅಗ್ನಿ ಅವಗಢಗಳನನ್ನು ತಡೆಯೋ ನಿಟ್ಟಿನಲ್ಲಿ ಬಿಹಾರ ಸರ್ಕಾರ ಒಂದು ಅಪರೂಪದ ಆದೇಶ ಹೊರಡಿಸಿದೆ. ಅದು ಬೆಳಗ್ಗೆ 9ರಿಂದ ಸಂಜೆ 6ರವರೆಗೆ ಯಾರೂ ಹೋಮ, ಹವನ, ಪೂಜೆ ಇತ್ಯಾದಿಗಳನ್ನು ನಡೆಸಬಾರದು. ಏನಿದ್ದರೂ ಬೆಳಗ್ಗೆ 9 ಗಂಟೆಗೆ ಮುನ್ನ ನಡೆಸಬೇಕು. ಜೊತೆಗೆ ಅಡುಗೆಯನ್ನು ಬೆಳಗ್ಗೆ 9ರ ಒಳಗೆ ಮಾಡಿಕೊಳ್ಳಬೇಕು. ಹೆಚ್ಚುತ್ತಿರೋ ಬಿಸಿಲಿನ ತಾಪಾವನ್ನು ಇಳಿಸೋದಕ್ಕೆ ಈ ರೀತಿಯ ಆದೇಶವನ್ನ ಬಿಹಾರ ಸಿಎಂ ನಿತೀಶ್ ಕುಮಾರ್ ಹೊರಡಿಸಿದ್ದಾರೆ.. ಆದೇಶವನ್ನು ಉಲ್ಲಂಘನೆ ಮಾಡಿದವರಿಗೆ ಎರಡು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸುವ ಆದೇಶವನ್ನು ಸರಕಾರ ಹೊರಡಿಸಿದೆ. ಆದ್ರೆ ಈ ಆದೇಶಕ್ಕೆ ಜನರು ಅಸಮಾಧಾನ ವ್ಯಕ್ತಪಡಿಸಿದ್ದು, ಧಾರ್ಮಿಕ ಕಾರ್ಯಕ್ರಮಗಳಿಗೆ ಅವಕಾಶ ಇಲ್ಲದ್ದಂತಾಗಿದೆ ಎಂದಿದ್ದಾರೆ. ಬಿಹಾರದಲ್ಲಿ ಹೆಚ್ಚುತ್ತಿರುವ ಅಗ್ನಿ ಅವಘಡಗಳಿಂದ ಇಲ್ಲಿಯವರೆಗೆ 66 ಮಂದಿ ಅಸುನೀಗಿದ್ದು 1,200 ಪ್ರಾಣಿಗಳು ಮೃತಪಟ್ಟಿವೆ. ಬಿರುಬಿಸಿಲಿನಿಂದಾಗಿ ಅಗ್ನಿ ಅವಘಡಗಳು ಸಂಭವಿಸುವುದನ್ನು ತಪ್ಪಿಸಲು ಮುಖ್ಯಮಂತ್ರಿ ಈ ರೀತಿ ಆದೇಶವನ್ನ ಹೊರಡಿಸಿದ್ದಾರೆ. ಬೆಂಕಿ ಅವಘಡಗಳಿಗೆ ತುತ್ತಾಗಿರುವವರ ಕುಟುಂಬಗಳಿಗೆ ತತ್ ಕ್ಷಣ ಪರಿಹಾರ ನೀಡುವಂತೆ ಮತ್ತು ಹೆಚ್ಚಿನ ಅಗ್ನಿಶಾಮಕಗಳನ್ನು ಖರೀದಿಸಿ ಸೇವೆಗೆ ಒದಗಿಸುವಂತೆ ನಿತೀಶ್ ಕುಮಾರ್ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.
- ರಘು ಕುಮಾರ್
POPULAR STORIES :
ನಾಗರಹಾವಿಗೆ ಎರಡು ಕಾಲು..! ಜನರು ದಂಗುಬಡಿದು ಹೋದರು..!
ಬಾಲಿವುಡ್ ಮಂದಿಯ ತಲೆ ಖಾಲಿಯಾಗಿದೆ..! ಅದು ಬಾಲಿವುಡ್ ಅಲ್ಲ, `ಖಾಲಿವುಡ್’
ಬ್ಲೂಫಿಲಂ ವೀಕ್ಷಿಸುವಾಗ ಅವಳ ವಯಸ್ಸು ಕೇವಲ ಒಂಬತ್ತು..! ಇದು ಹದಿನಾರರಲ್ಲಿ ಕನ್ಯತ್ವ ಕಳೆದುಕೊಂಡ ಸನ್ನಿಯ ಜೀವನಗಾಥೆ
ಅಫ್ರಿದಿ ಮಗಳಿಗೆ ಕ್ಯಾನ್ಸರ್..! ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ ಸಾವಿನ ಸುದ್ದಿ..!
ಈ ವ್ಯಕ್ತಿಯನ್ನ ಗರ್ಭಿಣಿ ಅನ್ನೋಕೆ ಕಾರಣವೇನು ಗೊತ್ತಾ..? ಹೊಟ್ಟೆಯಲ್ಲಿದ್ದದ್ದು ಮಗುವಲ್ಲದೆ ಮತ್ತೇನು..?
ಒಂದು ವಾರ ಉಚಿತ ಯೋಗ ವಿತ್ ಹಿರೋಯಿನ್ ಸಂಜನಾ..!!
ಸತ್ತಮೇಲೂ ಇವರು ಗ್ರೇಟ್..!! ಸೆಲೆಬ್ರಿಟಿಗಳೆಂದರೇ ಹೀಗಿರಬೇಕು..?
ಬ್ಲೂ ಫಿಲಂ ನಟಿ ಶಕೀಲಾಳನ್ನು ಅವಳಪ್ಪ ಹೊಡೆದು ಸಾಯಿಸಿಬಿಡುತ್ತಿದ್ದ..! ಶಕೀಲಾ ಲೈಫ್ ಸ್ಟೋರಿ.