No menu items!
9.3 C
Munich
Wednesday, April 29, 2026

‘ರೋಹಿಣಿ ವಾಪಸ್ ಆಂಧ್ರಕ್ಕೆ ಹೋಗಿ ಮಕ್ಕಳನ್ನು ಆಡಿಸಲಿ’

Must read

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಸದ್ದು ಮಾಡುತ್ತಿರುವ ಭೂ ಒತ್ತುವರಿ ವಿಷಯಕ್ಕೆ ಸಂಬಂಧಿಸಿದಂತೆ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಕೆ.ಆರ್ ನಗರ ಶಾಸಕ ಸಾ.ರಾ ಮಹೇಶ್ ಸಮರ ಸಾರಿದ್ದಾರೆ.

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ರಾಜಕಾಲುವೆ ಒತ್ತುವರಿ ಕುರಿತು ನಿರ್ಗಮಿತ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಮ್ಮ ವಿರುದ್ಧ ಮಾಡಿರುವ ಆರೋಪ ಸುಳ್ಳಾದರೆ ಅವರನ್ನು ಐಎಎಸ್ ಹುದ್ದೆಯಿಂದ ಅಮಾನತು ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಅಷ್ಟೇ ಅಲ್ಲದೆ ರೋಹಿಣಿ ಸಿಂಧೂರಿಯನ್ನು ಮಕ್ಕಳನ್ನು ಆಡಿಸಿಕೊಂಡು, ಅಡಿಗೆ ಮಾಡಿಕೊಂಡಿರಲು ಅವರನ್ನು ಆಂಧ್ರಪ್ರದೇಶಕ್ಕೆ ಕಳುಹಿಸಬೇಕು ಎಂದು ಜೆಡಿಎಸ್ ಶಾಸಕ ಸಾ.ರಾ ಮಹೇಶ್ ಟೀಕಿಸಿದ್ದಾರೆ.

 

ಮೈಸೂರಿನ ಪ್ರಾದೇಶಿಕ ಆಯುಕ್ತರ ಕಚೇರಿ ಬಳಿ ಪ್ರತಿಭಟನೆ ನಡೆಸಿ ಮಾತಾಡಿದ ಸಾ.ರಾ ಮಹೇಶ್, ಮೈಸೂರಿನ ದಟ್ಟಗಳ್ಳಿಯಲ್ಲಿನ ಸಾರಾ ಕನ್ವೆನ್ಷನ್ ಹಾಲ್ ರಾಜಕಾಲುವೆ ಮೇಲೆ ನಿರ್ಮಾಣವಾಗಿದೆ ಎಂದು ಮೈಸೂರಿನ ನಿರ್ಗಮಿತ ಡಿಸಿ ರೋಹಿಣಿ ಸಿಂಧೂರಿ ದಾಖಲೆ ಬಿಡುಗಡೆ ಮಾಡಿದ್ದಾರೆ. ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ದಾಖಲೆ ಪ್ರಕಾರ ಅದು ನಿಜವೇ ಆಗಿದ್ದರೆ, ಇಡೀ ಕನ್ವೆನ್ಷನ್ ಹಾಲ್ ಗವರ್ನರ್ ಹೆಸರಿಗೆ ಬರೆದುಕೊಡ್ತೇನೆ. ಕಾನೂನು ವಿರುದ್ಧವಾಗಿ ನಾನು ಏನೇ‌ ಮಾಡಿದರೂ ಕ್ರಮ ಕೈಗೊಳ್ಳಿ. ನನ್ನ ಒಡೆತನದಲ್ಲಿರುವ ಸಾ‌.ರಾ ಕಲ್ಯಾಣ ಮಂಟಪ ರಾಜಕಾಲುವೆ ಮೇಲೆ ನಿರ್ಮಾಣ ಆಗಿಲ್ಲ ಅಂತ ಸ್ಪಷ್ಟ ಪಡಿಸಿದರು.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article