ಕರಿಯ, ಎಕ್ಸ್ ಕ್ಯೂಸ್ ಮಿ ಮತ್ತು ಜೋಗಿ ಮೂಲಕ ಹ್ಯಾಟ್ರಿಕ್ ಬ್ಲಾಕ್ ಬಸ್ಟರ್ ಚಿತ್ರಗಳನ್ನು ನಿರ್ದೇಶನ ಮಾಡಿದ ಜೋಗಿ ಪ್ರೇಮ್ ತದನಂತರ ಉತ್ತಮ ಕಥೆ ಕಟ್ಟಿಕೊಂಡು ಚಿತ್ರ ಮಾಡುವುದರಲ್ಲಿ ಎಡವಿದರು. ಹೀಗಾಗಿ ಜೋಗಿ ಪ್ರೇಮ್ ಮಾಡಿದ ಚಿತ್ರಗಳು ನೆಲಕಚ್ಚಲು ಆರಂಭಿಸಿದವು. ಅಷ್ಟೇ ಅಲ್ಲದೆ ಪ್ರೇಮ್ ಚಿತ್ರಗಳೆಂದರೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮೆಟೀರಿಯಲ್ ಆಗಿ ಕಾಣತೊಡಗಿದವು. ಆದರೂ ತಲೆಕೆಡಿಸಿಕೊಳ್ಳದ ಪ್ರೇಮ್ ರಕ್ಷಿತಾ ಪ್ರೇಮ್ ಅವರ ತಮ್ಮ ರಾಣಾಗೆ ಏಕ್ ಲವ್ ಯಾ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.
ಇನ್ನೂ ಏಕೆ ಲವ್ ಯಾ ಸಿನಿಮಾ ಮುಗಿದ ನಂತರ ಜೋಗಿ ಪ್ರೇಮ್ ಯಾವ ಚಿತ್ರವನ್ನು ನಿರ್ದೇಶನ ಮಾಡಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲಿಯೂ ಇದೆ. ಇದೀಗ ಈ ಕುತೂಹಲಕ್ಕೆ ಉತ್ತರವೆಂಬಂತೆ ಹೊಸದೊಂದು ಸುದ್ದಿ ಹರಿದಾಡುತ್ತಿದ್ದು ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕೆ ಜೋಗಿ ಪ್ರೇಮ್ ನಿರ್ದೇಶನ ಮಾಡಲಿದ್ದಾರೆ ಎನ್ನಲಾಗುತ್ತಿದೆ.
ಏಕ್ ಲವ್ ಯಾ ಸಿನಿಮಾ ಮುಗಿದ ನಂತರ ಜೋಗಿ ಪ್ರೇಮ್ ಈ ಚಿತ್ರದ ಕೆಲಸವನ್ನು ಶುರು ಮಾಡಲಿದ್ದಾರೆ ಎನ್ನಲಾಗುತ್ತಿದ್ದು ಧ್ರುವ ಸರ್ಜಾ ಎಪಿ ಅರ್ಜುನ್ ನಿರ್ದೇಶನದ ಸಿನಿಮಾದಲ್ಲಿ ಅಭಿನಯಿಸಿದ ನಂತರ ಜೋಗಿ ಪ್ರೇಮ್ ಚಿತ್ರದಲ್ಲಿ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಇದೆ.