No menu items!
11.1 C
Munich
Wednesday, April 29, 2026

ಮುಳುಗಡೆಯಾದ ಹಂಪಿಯ ಸ್ಮಾರಕಗಳು

Must read

ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಅಧಿಕ ಮಳೆಯಾದ ಹಿನ್ನೆಲೆಯಲ್ಲಿ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದ್ದು, ತುಂಗಭದ್ರಾ ಜಲಾಶಯ ತುಂಬಿರುವ ಪರಿಣಾಮ 60 ಸಾವಿರ ಕ್ಯೂಸೆಕ್ ನೀರನ್ನು ಹೊರಕ್ಕೆ ಬಿಡಲಾಗಿದೆ ಎಂದು ಜಲಾಶಯ ಬೋರ್ಡ್ ಸ್ಪಷ್ಟನೆ ನೀಡಿದೆ.

 

ವಿಜಯನಗರ ಜಿಲ್ಲೆಯ ಹೊಸಪೇಟೆ ಬಳಿ ಇರುವ ತುಂಗಭದ್ರಾ ಜಲಾಶಯದಿಂದ ನೀರು ಬಿಡುಗಡೆ ಕುರಿತು ಮಂಗಳವಾರವೇ ಬಳ್ಳಾರಿ, ವಿಜಯನಗರ, ಕೊಪ್ಪಳ, ರಾಯಚೂರು, ಕಡಪ, ಅನಂತಪುರ ಹಾಗೂ ಮೆಹಬೂಬ್ ನಗರ ಜಿಲ್ಲಾಡಳಿತಗಳಿಗೆ ತುಂಗಭದ್ರಾ ಜಲಾಶಯ ಬೋರ್ಡ್ ಮಾಹಿತಿ ರವಾನಿಸಿತ್ತು.

 

ಈಗಾಗಲೇ 60 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಿರುವುದರಿಂದ ವಿಶ್ವವಿಖ್ಯಾತ ಹಂಪಿಯ ಹಲವು ಸ್ಮಾರಕಗಳು, ಮಂಟಪಗಳು ಮುಳುಗಡೆಯಾಗಿವೆ. ಪ್ರಮುಖವಾಗಿ ಪುರಂದರದಾಸರ ಮಂಟಪ, ಧಾರ್ಮಿಕ ವಿಧಿವಿಧಾನ ಮಂಟಪ ಮುಳುಗಡೆಯಾಗಿವೆ. ಇನ್ನು ಈಗಾಗಲೇ ಸ್ಥಳೀಯ ಆಡಳಿತಗಳ ನೆರವಿನಿಂದ ಆಯಾ ಜಿಲ್ಲಾಡಳಿತಗಳೂ ಸಹ ಜನರಿಗೆ ನದಿಪಾತ್ರದ ಕಡೆ ಸುಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಆದರೆ ಜನರಲ್ಲಿ ಮತ್ತೆ ಪ್ರವಾಹದ ಭೀತಿ ಕಾಡುತ್ತಿದೆ.

 

 

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article