No menu items!
16.9 C
Munich
Monday, June 15, 2026

ಅಮ್ಮನಾಣೆ ನಾನು ಅಪ್ಪು ಜಗಳ ಆಡಿಲ್ಲ: ಶಿವಣ್ಣ

Must read

ತಾಯಾಣೆಗೂ ನಾನು ಮತ್ತು ಅಪ್ಪು ಎಂದಿಗೂ ಜಗಳವಾಡಿಲ್ಲ ಎಂದು ನಟ ಶಿವರಾಜ್‍ಕುಮಾರ್ ಹೇಳಿದರು. ನಗರದ ಶಕ್ತಿಧಾಮಕ್ಕೆ ಇಂದು ಭೇಟಿ ನೀಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಶಿವರಾಜ್‍ ಕುಮಾರ್, ಅವನ ಪ್ರತಿಭೆ ನೋಡಿ ಬಹಳ ಸಂತೋಷಪಟ್ಟಿದ್ದೇವೆ.ಅಪ್ಪುದು ನಿಷ್ಕಳಂಶ ಆತ್ಮ ಎಂದು ನೆನದರು.

ನೋವಿನ ಜೊತೆ ತಮ್ಮನನ್ನು ಜೀವಂತವಾಗಿ ಇಟ್ಟುಕೊಳ್ಳುವ ಪ್ರಯತ್ನ ಮಾಡುತ್ತಿದ್ದೇನೆ. ಅಳುವುದರಿಂದ ಅಪ್ಪುವನ್ನು ಕಳೆದುಕೊಂಡು ಬಿಡುತ್ತೇವೆ. ಅವನನ್ನು ಜೊತೆಯಲ್ಲಿಟ್ಟುಕೊಂಡು ಬದುಕಬೇಕು. ಅಪ್ಪು ಕಣ್ಣುಗಳು ಇವತ್ತು ಸಮಾಜ ನೋಡುತ್ತಿವೆ. ಇಡೀ ಕರುನಾಡಿನ ನೈತಿಕ ಬೆಂಬಲ ನಮ್ಮ ಕುಟುಂಬಕ್ಕೆ ಸಿಕ್ಕಿದೆ.

ನೋವಿನ ಜೊತೆ ಬದುಕುವುದು ಅನಿವಾರ್ಯ ಎಂದು ಭಾವುಕವಾಗಿ ನುಡಿದರು. ಶಕ್ತಿಧಾಮವನ್ನು ಇನ್ನೂ ಚೆನ್ನಾಗಿ ನಡೆಸಿಕೊಂಡು ಹೋಗಬೇಕು. ಎರಡು ಮೂರು ವಾರದಲ್ಲಿ ಶಕ್ತಿಧಾಮದಲ್ಲಿ ಶಾಲೆ ನಿರ್ಮಾಣದ ಬಗ್ಗೆ ಸ್ಪಷ್ಟ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article