No menu items!
12.1 C
Munich
Wednesday, May 20, 2026

ವಿಶೇಷ ರೀತಿಯಲ್ಲಿ ಪುನೀತ್ ಪುತ್ಥಳಿ ನಿರ್ಮಿಸಿದ ಅಭಿಮಾನಿಗಳು

Must read

ಎಲ್ಲರ ಮನದಲ್ಲು ಅಚ್ಚಳಿಯದೆ ಉಳಿದಿರುವ ಪುನೀತ್ ರಾಜ್‌ಕುಮಾರ್‌ ಪುತ್ಥಳಿಯನ್ನು ಹೊಸಕೊಪ್ಪದ ಗ್ರಾಮಸ್ಥರು ಪ್ರತಿಷ್ಠಾಪಿಸಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹೊಸಕೊಪ್ಪದಲ್ಲಿ ಗ್ರಾಮಸ್ಥರು ಸ್ವತಃ ದೇಣಿಗೆ ಸಂಗ್ರಹಿಸಿ ತಮ್ಮ ನೆಚ್ಚಿನ ಪುನೀತ್ ಪುತ್ಥಳಿಯನ್ನು ಪ್ರತಿಷ್ಠಾಪನೆ ಮಾಡಿ ಅಭಿಮಾನ ಮೆರೆದಿದ್ದಾರೆ.

ಅಪ್ಪು ನೆನಪಿಗೆ ಗ್ರಾಮಸ್ಥರು 3.5 ಅಡಿ ಎತ್ತರ ಪುತ್ಥಳಿಯನ್ನು ಸ್ಥಾಪಿಸಿದ್ದಾರೆ. ಪುತ್ಥಳಿ ನಿರ್ಮಾಣಕ್ಕಾಗಿ ಗ್ರಾಮಸ್ಥರು 80,000 ರೂಗಳನ್ನು ದೇಣಿಗೆ ಸಂಗ್ರಹಿಸಿದ್ದರು. ಇದೀಗ ಗ್ರಾಮದ ಹಿರಿಯರಿಂದ ಪುತ್ಥಳಿಯನ್ನು ಅನಾವರಣ ಮಾಡಲಾಗಿದೆ. ಪುತ್ಥಳಿ ಪ್ರತಿಷ್ಠಾಪನೆಗೂ ಮೊದಲು ಎತ್ತಿನ ಗಾಡಿಯಲ್ಲಿ ಪುನೀತ್ ಭಾವಚಿತ್ರವಿಟ್ಟು ಮೆರವಣಿಗೆ ಮಾಡಲಾಗಿತ್ತು. ಪುನೀತ್ ಪುತ್ಥಳಿಯ ಸ್ಥಾಪನೆ ಬಳಿಕ ಕನ್ನಡ ಧ್ವಜಾರೋಹಣ ಮಾಡಲಾಗಿದೆ.
ಪುತ್ಥಳಿಯ ಕೆಳಗೆ ಬರೆದಿರುವ ಬರಹವಿದು. ಈ ಮೂಲಕ ಗ್ರಾಮಸ್ಥರು ನೆಚ್ಚಿನ ಅಪ್ಪುಗೆ ನಮನ ಸಲ್ಲಿಸಿದ್ದಾರೆ.

 

 

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article