ಸುಲ್ತಾನ್….. ಬಾಕ್ಸಾಫೀಸ್ ಲೂಟಿ ಮಾಡಿ ಕೋಟಿ ಕೋಟಿ ಸಂಪಾದಿಸುತ್ತಿದೆ. ಸಲ್ಮಾನ್ ಖಾನ್ ಬದುಕಿನಲ್ಲಿ ಈ ಸಿನಿಮಾವು ಹೊಸ ಮೈಲುಗಲ್ಲು ಸೃಷ್ಠಿಸಿದೆ. ಇನ್ನು ಅನುಷ್ಕಾ ಶರ್ಮಾ ಸಿನಿಮಾ ಲೈಫ್ ಗೆ ದೊಡ್ಡ ಬ್ರೇಕ್ ನೀಡಿದೆ.
ಇದು ಇಬ್ಬರು ಕಲಾವಿದರ ಬಣ್ಣದ ಬದುಕಿನ ಕಥೆ..ಆದರೆ ಇದೇ ಸಿನಿಮಾ ನಾಲ್ಕು ಜೀವಗಳನ್ನು ಜೋಡಿಸಿ ನವ ಜೀವನ ಕಲ್ಪಿಸಿದೆ. ಹೌದು ಬೇರೆಯಾಗಿದ್ದ ಎರಡು ಜೋಡಿಗಳನ್ನು ಈ ಸಿನಿಮಾ ಸೇರಿಸಿದೆ.
ಸುಲ್ತಾನ್ ಶೂಟಿಂಗ್ ವೇಳೆ ಸಲ್ಮಾನ್ ಖಾನ್ ಮತ್ತು ಅನುಷ್ಕಾ ಶರ್ಮ ತಮ್ಮ ವೈಯಕ್ತಿಕ ಬದುಕಿನ ನೋವು ನಲಿವುಗಳನ್ನು ಹಂಚಿಕೊಂಡ್ರು. ಇದೇ ವೇಳೆ ಇಬ್ಬರೂ ಕೂಡ ತಮ್ಮ ಲವ್ ಸ್ಟೋರಿಗಳ ಬಗ್ಗೆಯೂ ಮಾತನಾಡಿಕೊಂಡ್ರು ಅಂತ ಹೇಳಲಾಗಿದೆ.
ಹಾಗೆ ಅನುಷ್ಕಾ ಮತ್ತು ಕೊಹ್ಲಿ ಮತ್ತೆ ಒಂದಾಗಲು ಸಲ್ಲು ಭಾಯ್ ಕಾರಣ ಅನ್ನೋದು ಗೊತ್ತಿರುವ ವಿಚಾರ. ಸುಲ್ತಾನ್ ಶೂಟಿಂಗ್ ನಲ್ಲಿ ಸಲ್ಮಾನ್ ಖಾನ್ ಮೊದಲ ಲವ್ ಬಗ್ಗೆ ಮತ್ತು ಆ ಫೀಲಿಂಗ್ ಬಗ್ಗೆ ಆಡಿದ ಮಾತುಗಳೇ ಅನುಷ್ಕಾರನ್ನು ಬಡಿದೆಬ್ಬಿಸಿದ್ದು. ಇದೇ ಮಾತಿನ ಹಿನ್ನಲೆಯಲ್ಲಿ ಅನುಷ್ಕಾ ಶರ್ಮ ಮತ್ತೆ ವಿರಾಟ್ ರನ್ನು ಸೇರಿದ್ದು..
ಸಲ್ಮಾನ್ ಭಾಯ್ ರೋಮಾನಿಯಾದ ಮಾಡೇಲ್ ಲೂಲಿಯಾ ವಂಟೇರ್ ಜೊತೆ ಪ್ರೀತಿಯಲ್ಲಿದ್ದಾರೆ. ಈ ವಿಚಾರವನ್ನು ಕೂಡ ಅನುಷ್ಕಾ ಜೊತೆ ಹಂಚಿಕೊಂಡಿದ್ದಾರೆ ಸಲ್ಲು. ಸುಲ್ತಾನ್ ಹೀರೋ ಹೀರೋಯಿನ್ ಇಬ್ಬರೂ ಕೂಡ ಈ ವರ್ಷ ದಾಂಪತ್ಯ ಜೀವನಕ್ಕೆ ಎಂಟ್ರಿಯಾಗಲಿದ್ದಾರೆ. ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮ ವಿವಾಹ ಈ ಬಾರಿ ನೆರವೇರಬಹುದು. ಸಲ್ಮಾನ್ ಖಾನ್ ತನ್ನ ಗೆಳೆತಿ ಲೂಲಿಯಾರನ್ನು ವರಿಸಲು ಕಾತುರದಿಂದಿದ್ದಾರೆ.
ಹೀಗೆ ಸುಲ್ತಾನ್ ಎರಡು ಜೋಡಿಗಳ ಪಾಲಿಗೆ ಬದುಕಿನ ದಾರಿಯನ್ನು ತೋರಿಸಿದೆ. ಸಿನಿಮಾ ಪ್ರಿಯರಿಗೆ ಎಂಟರ್ ಟೈನ್ ಮೆಂಟ್ ಈ ಚಿತ್ರ ನೀಡಿದ್ರೆ, ಶೂಟಿಂಗ್ ಆಗುವಾಗ ಆಡಿಕೊಂಡ ಮಾತುಗಳು ಜೋಡಿಹಕ್ಕಿಗಳ ಕಲರವ ಮೂಡಲು ಕಾರಣವಾಗಿದೆ.
- ಶ್ರೀ
POPULAR STORIES :
ಚಿತೆಯಲ್ಲಿ ಮಲಗಿದ್ದ ವ್ಯಕ್ತಿ ಮತ್ತೆ ಜೀವಂತವಾದ..??
ಪಾಪಿಗಳು ಅಟ್ಟಹಾಸ ಮೆರೆದ ವಿಪರ್ಯಾಸದ ರಿಯಲ್ ಸ್ಟೋರಿ..!
ಕೋಹ್ಲಿ ಪ್ರಕಾರ ಪರ್ಫೆಕ್ಟ್ ಟೆಸ್ಟ್ ಬೌಲರ್ ಯಾರು?
ನಾಯಿಯನ್ನು ಟೆರೆಸ್ ಮೇಲಿನಿಂದ ಎಸೆದ ಮೃಗ ಯಾರು ಗೊತ್ತಾ..?
ಕುಂಬ್ಳೆ ಸವಾಲು ಗೆದ್ದ ಒಬ್ಬನೇ ಒಬ್ಬ ಆಟಗಾರ ಯಾರು? ವಿರಾಟ್ ಕೋಹ್ಲಿಯೇ ಗೆಲ್ಲದ ಸವಾಲು ಗೆದ್ದ ಯುವ ಆಟಗಾರ..!