No menu items!
8 C
Munich
Wednesday, April 15, 2026

ಮೀನು ಹಿಡಿಯಲು ಗಾಳ ಹಾಕಿದವರಿಗೆ ಸಿಕ್ಕಿದ್ದೇ ಬೇರೆ; ಭಯಂಕರ!

Must read

ತುಂಗಾ ನದಿಯಲ್ಲಿ(Tunga River) ಗಾಳ ಹಾಕಿ ಮೀನು ಹಿಡಿಯಲು ತೆರಳಿದ್ದ ವ್ಯಕ್ತಿಯ ಗಾಳಕ್ಕೆ ಮೀನಿನ ಬದಲು ಮೊಸಳೆ ಮರಿ ಬಿದ್ದಿರುವ ಘಟನೆ ಶಿವಮೊಗ್ಗ (Shivamogga) ಸಮೀಪದ ಪಿಳ್ಳಂಗೆರೆ ಸಮೀಪ ನಡೆದಿದೆ. ಇದನ್ನು ಕಂಡ ಸ್ಥಳೀಯರು ಬೆಚ್ಚಿ ಬಿದ್ದಿದ್ದಾರೆ.

 

ಪಿಳ್ಳಂಗೆರೆಯ ಲಕ್ಷ್ಮಿನಾರಾಯಣ ಸ್ವಾಮಿ ದೇವಸ್ಥಾನದ ಹಿಂಭಾಗದ ತುಂಗಾ ನದಿಯಲ್ಲಿ ರಶೀದ್ ಅವರು ಮೀನು ಹಿಡಿಯಲು ತೆರಳಿದ್ದಾರೆ. ಈ ವೇಳೆ ಮೀನು ಹಿಡಿಯಲು ಗಾಳ ಹಾಕಿದ್ದ. ಆದ್ರೆ, ಮೀನಿನ (Fish) ಬದಲು ಮೊಸಳೆ(crocodile) ಮರಿ ಸಿಕ್ಕಿದೆ.

ದೇವಸ್ಥಾನದ ಹಿಂಭಾಗದಲ್ಲಿ ಇರುವ ನದಿಗೆ ನೀರು ಕುಡಿಯಲು ಜಾನುವಾರುಗಳು ಬರುತ್ತವೆ. ಅಲ್ಲದೇ ದೇವಸ್ಥಾನಕ್ಕೆ ಬರುವ ಭಕ್ತರು ಹಾಗೂ ಗ್ರಾಮಸ್ಥರು ಕೈ, ಕಾಲು ತೊಳೆಯಲು ನದಿಗೆ ಇಳಿಯುತ್ತಾರೆ. ಹೀಗಾಗಿ ಈ ಭಾಗದಲ್ಲಿ ಮೊಸಳೆ ಮರಿ ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಅಲ್ಲದೇ ಮೊಸಳೆ ಮರಿ ಪತ್ತೆಯಾಗಿರುವುದರಿಂದ ಈ ಭಾಗದಲ್ಲಿ ದೊಡ್ಡ ಮೊಸಳೆಯು ಇರಬಹುದು ಎಂಬ ಅನುಮಾನ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article