ಸೋನಿ ಆಚಾರ್ಯ ಸಾರಥ್ಯದಲ್ಲಿ ಮತ್ತೊಂದು ಆಲ್ಬಂ ಸಾಂಗ್

Date:

ಕನ್ನಡ ಸಂಗೀತ ಲೋಕದಲ್ಲಿ ಹೊಸ ಹೊಸ ಆಲ್ಬಂ ಸಾಂಗ್ ಗಳ ಜಮಾನ ಶುರುವಾಗಿದೆ. ಜೀವನಕ್ಕೆ ಪ್ರೇರಣೆ ನೀಡುವ ಕಾನ್ಸೆಪ್ಟ್ ಮೇಲೆ ಸ್ಪಿರಿಟ್ ಎಂಬ ಆಲ್ಬಂ ಸಾಂಗ್ ಬಿಡುಗಡೆಯಾಗಿದ್ದು, ಕೇಳುಗರನ್ನು ಅಟ್ರ್ಯಾಕ್ಟ್ ಮಾಡುತ್ತಿದೆ.

 

ಸೋನಿ ಆಚಾರ್ಯ ಮಾತಾನಾಡಿ, ತುಂಬಾ ಟೈಮ್ ತಗೊಂಡು ಸಾಂಗ್ ರೆಡಿ ಮಾಡಿದ್ದೇನೆ. ಇದು ನನ್ನ ಮೂರನೇ ಸಾಂಗ್. ನನ್ನ ಇಡೀ ತಂಡದ ಸಹಕಾರದೊಂದಿಗೆ ಆಲ್ಬಂ ಸಾಂಗ್ ರೆಡಿಯಾಗಿದೆ. ಪ್ರತಿಯೊಬ್ಬರು ಆಶೀರ್ವಾದಿಸಿ
ಎಂದರು.

 

 

ರಥವರ, ಮಫ್ತಿ, ತಾರಕಾಸುರ, ದಿಲ್ ಮಾರ್ ಸಿನಿಮಾಗಳಲ್ಲಿ ನಿರ್ದೇಶನ ವಿಭಾಗದಲ್ಲಿ ಪಳಗಿರುವ, ಕಳೆದ ಎಳೆಂಟು ವರ್ಷಗಳಿಂದ ಸಿನಿಮಾ ಇಂಡಸ್ಟ್ರೀಯಲ್ಲಿ ಗುರುತಿಸಿಕೊಂಡಿರುವ, ಈ ಹಿಂದೆ ಮಾಜಿ ಡವ್, ರಾಣಿ ಜೇನು ಎಂಬ ಎರಡು ಆಲ್ಬಂ ಸಾಂಗ್ ಗಳ ಸೃಷ್ಟಿಕರ್ತ ಸೋನಿ ಆಚಾರ್ಯ ಸಾಹಿತ್ಯ, ಸಂಗೀತ, ಧ್ವನಿ‌ ನೀಡಿ ನಟಿರುವ ಸ್ಪಿರಿಟ್ ಆಲ್ಬಂ ಸಾಂಗ್ ನ ರಾಜೇಶ್ವರಿ ಕಂಬೈನ್ಸ್ ಆಫಿಷಿಯಲ್ ಯೂಟ್ಯೂಬ್ ನಲ್ಲಿ ಸೌಂಡ್ ಮಾಡುತ್ತಿದೆ.

 

 

ಸೋನಿ ಆಚಾರ್ಯಗೆ ಜೋಡಿಯಾಗಿ ಜಾನಕಿ ನಾರಾಯಣ್ ನಟಿಸಿದ್ದು, ರಾಜ್ ಕಿಶೋರ್ ಕೊರಿಯೋಗ್ರಾಫು, ತನ್ವಿಕ್ ಜಿ ಕ್ಯಾಮೆರಾ ವರ್ಕ್, ಮಧು ತುಂಬಕೆರೆ ಸಂಕಲನ ಸ್ಪಿರಿಟ್ ಆಲ್ಬಂ ಸಾಂಗ್ ಗಿದೆ. ಪ್ರಣವ್ ಮ್ಯೂಸಿಕ್ ಪೋಸ್ಟ್ ಪ್ರೊಡಕ್ಷನ್ ಜವಾಬ್ದಾರಿ ಹೊತ್ತುಕೊಂಡಿದ್ದು, ಗಗನ್, ಸಂತು ಆಚಾರ್ಯ, ಪವನ್ ಬೊಮ್ಮನಕಟ್ಟೆ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ್ದಾರೆ. ಬೆಂಗಳೂರು, ಮೈಸೂರು ಸುತ್ತಮುತ್ತ ಶೂಟಿಂಗ್ ಮಾಡಲಾಗಿದೆ.

Share post:

Subscribe

spot_imgspot_img

Popular

More like this
Related

ಕೇಂದ್ರದ ಅರಣ್ಯ ಸಚಿವರ ಜತೆ ಮಹತ್ವದ ಮಾತುಕತೆ ನಡೆಸಿದ ಹೆಚ್.ಡಿ. ಕುಮಾರಸ್ವಾಮಿ

ಕೇಂದ್ರದ ಅರಣ್ಯ ಸಚಿವರ ಜತೆ ಮಹತ್ವದ ಮಾತುಕತೆ ನಡೆಸಿದ ಹೆಚ್.ಡಿ. ಕುಮಾರಸ್ವಾಮಿ ನವದೆಹಲಿ:...

ಅಬಕಾರಿ ಸಚಿವರ ರಾಜೀನಾಮೆ ಪಡೆದು ತನಿಖೆ ನಡೆಸಲಿ: ಬಿ.ವೈ. ವಿಜಯೇಂದ್ರ ಒತ್ತಾಯ

ಅಬಕಾರಿ ಸಚಿವರ ರಾಜೀನಾಮೆ ಪಡೆದು ತನಿಖೆ ನಡೆಸಲಿ: ಬಿ.ವೈ. ವಿಜಯೇಂದ್ರ ಒತ್ತಾಯ ಬೆಂಗಳೂರು:...

ಗರ್ಭಾವಸ್ಥೆಯಲ್ಲಿ ಕಂಡುಬರುವ ಖಿನ್ನತೆ ತಡೆಯಲು ಈ ರೀತಿ ಮಾಡಿ!

ಗರ್ಭಾವಸ್ಥೆಯಲ್ಲಿ ಕಂಡುಬರುವ ಖಿನ್ನತೆ ತಡೆಯಲು ಈ ರೀತಿ ಮಾಡಿ! ಗರ್ಭಾವಸ್ಥೆಯಲ್ಲಿ ಮಹಿಳೆ ಅನುಭವಿಸುವ...

ತೀರ್ಪು ವಿಳಂಬಕ್ಕೆ ಸುಪ್ರೀಂ ಕೋರ್ಟ್ ಕಿಡಿ: ಹೈಕೋರ್ಟ್ಗಳ ಕಾರ್ಯವೈಖರಿಯ ಮೇಲೆ ಅಸಮಾಧಾನ

ತೀರ್ಪು ವಿಳಂಬಕ್ಕೆ ಸುಪ್ರೀಂ ಕೋರ್ಟ್ ಕಿಡಿ: ಹೈಕೋರ್ಟ್ಗಳ ಕಾರ್ಯವೈಖರಿಯ ಮೇಲೆ ಅಸಮಾಧಾನ ನವದೆಹಲಿ:...