No menu items!
8.7 C
Munich
Wednesday, April 15, 2026

ಧೈರ್ಯಂ ಸರ್ವತ್ರ ಸಾಧನಂ ಆಡಿಯೋ ಹಕ್ಕು ಭಾರೀ ಮೊತ್ತಕ್ಕೆ ಸೇಲ್

Must read

ಸ್ಯಾಂಡಲ್ ವುಡ್ ನಲ್ಲಿ ಧೈರ್ಯಂ ಸರ್ವತ್ರ ಸಾಧನಂ ಸಿನಿಮಾ ಬಿಡುಗಡೆಗೂ ಮುನ್ನ ಬಾರಿ‌ ಸದ್ದು ಮಾಡಿದೆ . ಜೊತೆಗೆ ಹಾಕಿದ ಬಂಡವಾಳವನ್ನು ಈ ಚಿತ್ರ ಬಾಚಿದೆ.


ಎ. ಪಿ.ಪ್ರೊಡಕ್ಷನ್ಸ್ ಬ್ಯಾನರ್ ನಡಿ ಆನಂದ್ ಬಾಬು ನಿರ್ಮಾಣದಲ್ಲಿ ತಯಾರಾಗಿರುವ ಈ ಚಿತ್ರದ
ಆಡಿಯೋ ರೈಟ್ಸ್ ದೊಡ್ಡ ಮೊತ್ತಕ್ಕೆ ಮಾರಾಟವಾಗಿದೆ . A2ಆಡಿಯೋ ಕಂಪನಿಗೆ ಮಾರಾಟವಾಗಿದ್ದು, ಇದು ನಿರ್ಮಾಪಕರಿಗೆ ಹಾಗೂ ಇಡೀ ಸಿನಿಮಾ ಬಳಗಕ್ಕೆ ಸಂತಸ ತಂದಿದೆ.

ಅನೇಕ ಚಿತ್ರಗಳಿಗೆ ಸಂಭಾಷಣೆಕಾರರಾಗಿ ಕೆಲಸ ಮಾಡಿದ್ದ ಎ. ಆರ್. ಸಾಯಿರಾಮ್ ಮೊದಲ ಬಾರಿಗೆ ಈ ಚಿತ್ರದ ಮೂಲಕ ನಿರ್ದೇಶಕರಾಗಿ ಹೊಸ ಹೆಜ್ಜೆ ಇಟ್ಟಿದ್ದು, ಚಿತ್ರದಲ್ಲಿ 5 ಹಾಡುಗಳು 5 ಪೈಟ್ ಗಳು ಇದ್ದು, ಜುಡಾ ಸ್ಯಾಂಡಿ ದೇಸಿ ಸಂಗೀತ ಸಿನಿಮಾಕ್ಕಿದೆ.
ಕಿನ್ನಲ್ ರಾಜ್, ಅರಸು ಅಂತಾರೆ,ಹೃದಯ ಶಿವ, ಎ. ಆರ್.ಸಾಯಿರಾಮ್ ಸಾಹಿತ್ಯ ಹಾಡುಗಳಿಗಿದೆ. ಪಂಜಾಬ್ ಸಿನಿಮಾಟೋಗ್ರಾಫರ್ ರವಿ ಕುಮಾರ್ ಸನ ಛಾಯಾಗ್ರಹಣ ,
ಶ್ರೀಕಾಂತ್ ಸಂಕಲನ ಮಾಡಿದ್ದಾರೆ, ಕುಂಗ್ಪು ಚಂದ್ರು ಸಾಹಸ ನಿರ್ದೇಶನ ಚಿತ್ರಕ್ಕಿದೆ. ತಾರಾಗಣದಲ್ಲಿ
ಯಶ್ ಶೆಟ್ಟಿ, ಬಲರಾಜವಾಡಿ, ವಿವನ್ ಕೆ.ಕೆ. ಅನುಷಾ ರೈ, ಪ್ರದೀಪ್ ಪೂಜಾರಿ, ರಾಮ್ ಪವನ್, ವರ್ಧನ್ ತೀರ್ಥಹಳ್ಳಿ, ಚಕ್ರವರ್ತಿ ಚಂದ್ರಚೂಡ್ ಅಭಿನಯಿಸಿದ್ದಾರೆ. ಎಲ್ಲವೂ ಅಂದುಕೊಂಡತೆ ಆದರೆ ಡಿಸೆಂಬರ್ ವಾರಾಂತ್ಯದಲ್ಲಿ ಸಿನಿಮಾ ಬಿಡುಗಡೆ ಚಿತ್ರತಂಡ ತಯಾರಿ ನಡೆಸುತ್ತಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article