ಹೊಸದಾಗಿ ವಿವಾಹವಾದ ಸ್ವರೂಪವನ್ನು ದುರ್ಗಾಮಾತೆಯು ಚಂದ್ರಘಂಟ ರೂಪದಲ್ಲಿ ತೋರಿಸಿದ್ದಾರೆ. ಪಾರ್ವತಿ ದೇವಿಯು ಕಠಿಣವಾದ ತಪಸ್ಸನ್ನು ಮಾಡಿ, ಶಿವನನ್ನು ಮದುವೆಯಾಗುತ್ತಾಳೆ . ವಿವಾಹ ಸಂದರ್ಭದಲ್ಲಿ ಕೈಲಾಸದ ಗಣಗಳೊಂದಿಗೆ ಶಿವನು ಪಾರ್ವತಿಯ ಅರಮನೆಯನ್ನು ಪ್ರವೇಶಿಸುತ್ತಾನೆ.
ಅತಿ ಭಯಂಕರನಾಗಿ ಕಾಣುತ್ತಿದ್ದ ಶಿವನನ್ನು ನೋಡಿ ಪಾರ್ವತಿ ದೇವಿಯ ತಾಯಿ ಮೂರ್ಛೆಹೋಗುತ್ತಾಳೆ. ಆಗ ಪಾರ್ವತಿಯು ಚಂದ್ರಘಂಟ ರೂಪದಲ್ಲಿ ಶಿವನ ಮುಂದೆ ಪ್ರತ್ಯಕ್ಷಳಾಗಿ ಶಿವನು ರಾಜಕುಮಾರನ ರೂಪವನ್ನು ತಾಳಬೇಕಾಗಿ ವಿನಂತಿಸಿಕೊಳ್ಳುತ್ತಾಳೆ. ಹೀಗೆ ಶಿವನು ಸುಂದರ ವರನ ರೂಪವನ್ನು ತಾಳಿದ ನಂತರ ಶಿವ ಪಾರ್ವತಿಯ ಮದುವೆ ನೆರವೇರುತ್ತದೆ.
ಚಂದ್ರಘಂಟೆಗೆ ಕೆಂಪು ಹೂವು ಅರ್ಪಿಸಿ ಪೂಜೆ ಮಾಡಿ ಹಾಗೂ ಭಕ್ತಿಯಿಂದ ಧ್ಯಾನವನ್ನು ಮಾಡಿ. ಹಾಗೂ 16 ವಿಧದ ಅರ್ಪಣೆಯನ್ನು ನೀಡಿ, ಆರತಿ ಮಾಡಿ.ಹಾಲು ಹಾಗೂ ಕೇಸರಿಯಿಂದ ಮಾಡಿದ ಸಿಹಿ ಖಾದ್ಯ ಸಮರ್ಪಿಸಿ.ನಿಮ್ಮ ಕುಟುಂಬದ ಶ್ರೇಯಸ್ಸಿಗಾಗಿ ಚಂದ್ರಘಂಟೆಯನ್ನು ಪ್ರಾರ್ಥಿಸಿ.
ಚಂದ್ರಘಂಟೆಯ ಮಂತ್ರ
ಓಂ ದೇವಿ ಚಂದ್ರಘಂಟಾಯೈ ನಮಃ
ಓಂ ದೇವೀ ಚಂದ್ರಘಂಟಾಯೈ ನಮಃ ಪಿಂದಾಜ ಪ್ರವರಾರುಧ ಚಂದಕೋಪಸ್ತ್ರಕೈರ್ಯುತ
ಪ್ರಸಾದಂ ತನುತೇ ಮಧ್ಯಮ ಚಂದ್ರಘಂಟತಿ ವಿಶ್ರುತಾ
ಯಾ ದೇವೀ ಸರ್ವಭೂತೇಷು ಮಾಂ ಚಂದ್ರಘಂಟಾ ರೂಪೇಣ ಸಂಸ್ಥಿತಾ
ನಮಸ್ತಸ್ಯ ನಮಸ್ತಸ್ಯ ನಮಸ್ತಸ್ಯ ನಮೋ ನಮಃ”
– ”ಆಹ್ಲಾದಕಾರಿಣಿ ಚಂದ್ರಭೂಷಣಾ ಹಸ್ತೇ ಪದ್ಮಧಾರಿಣೀ
ಘಂಟಾ ಶೂಲ ಹಲಾನೀ ದೇವೀ ದುಷ್ಟ ಭಾವ ವಿನಾಶಿನೀ